ನ್ಯೂಯಾರ್ಕ, ಸೆ 7: ಗೆಲುವಿನ ಓಟ ಮುಂದುವರಿಸಿರುವ ವಿಶ್ವದ ಶ್ರೇಷ್ಠ ಟೆನಿಸ್ ಆಟಗಾರ ರಫೆಲ್ ನಡಾಲ್ ಅವರು ಯುಎಸ್ ಓಪನ್ ಐದನೇ ಬಾರಿ ಫೈನಲ್ಗೆ ಪ್ರವೇಶ ಮಾಡಿದ್ದಾರೆ. ಆ ಮೂಲಕ ಅತಿ ಹೆಚ್ಚು ಗ್ರ್ಯಾನ್ ಸ್ಲ್ಯಾಮ್ ಗೆದ್ದಿರುವ ರೋಜರ್ ಫೆಡರರ್ ಅವರ ದಾಖಲೆ ಮುರಿಯುವ ಹಾದಿಯಲ್ಲಿ ಇನ್ನಷ್ಟು ಸಮೀಪ ತಲುಪಿದ್ದಾರೆ. ಇಂದು ಅರ್ಥರ್ ಅಂಗಳದಲ್ಲಿ ನಡೆದ ಪುರುಷರ ಸಿಂಗಲ್ಸ್ ಸೆಮಿಫೈನಲ್ ಹಣಾಹಣಿಯಲ್ಲಿ ಸ್ಪೇನ್ ಆಟಗಾರ ನಡಾಲ್ 7-6 (8/6), 6-4, 6-1 ಅಂತರದಲ್ಲಿ ಅಂತರದಲ್ಲಿ ಇಟಲಿಯ ಮ್ಯಾಟ್ಟೊ ಬೆರರ್ೆಟ್ಟಿನಿ ವಿರುದ್ಧ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆ ಇಟ್ಟಿದ್ದಾರೆ. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾದ ಐದನೇ ಶ್ರೇಯಾಂಕದ ಡೆನಿಲ್ ಮೆಡ್ವಡೆವ್ ಅವರು ಬಲ್ಗೇರಿಯಾದ ಗ್ರಿಗೋರ್ ಡಿಮಿಟ್ರೋವ್ ವಿರುದ್ಧ 7-6 (7/5), 6-4, 6-3 ಅಂತರದಲ್ಲಿ ಜಯಿಸಿ ಫೈನಲ್ಗೆ ಲಗ್ಗೆ ಇಟ್ಟದ್ದಾರೆ. ಪುರುಷರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ 33ರ ಪ್ರಾಯದ ರಫೆಲ್ ನಡಾಲ್ ಹಾಗೂ ಡೆನಿಲ್ ಮೆಡ್ವೆಡೆವ್ ವಿರುದ್ಧ ತೀವ್ರ ಕಾದಾಟ ಸೋಮವಾರ ಏರ್ಪಡಲಿದೆ. ಪಂದ್ಯದ ಬಳಿಕ ಮಾತನಾಡಿದ ನಡಾಲ್, ಯುಎಸ್ ಓಪನ್ ಫೈನಲ್ ತಲುಪಿರುವುದು ಅತ್ಯಂತ ಹೆಚ್ಚಿನ ಖುಷಿ ತಂದಿದೆ. ಪ್ರಸಕ್ತ ಆವೃತ್ತಿಯ ಆರಂಭದಲ್ಲಿ ಇಲ್ಲಿ ನಾನು ಕಠಿಣ ಪೈಪೋಟಿ ಎದುರಿಸಿದ್ದೆ. ಇದೀಗ ಮತ್ತೆ ಯಶ ಕಂಡಿರುವುದು ಹೆಚ್ಚು ಸಂತಸ ತಂದಿದೆ ಎಂದರು. ಪ್ರಸಕ್ತ ಆವೃತ್ತಿಯ ಆರಂಭದಲ್ಲೆ ನಡಾಲ್ ಗಾಯಕ್ಕೆ ತುತ್ತಾಗಿದ್ದರು. ಈಗಾಗಲೇ ನಾಲ್ಕು ಬಾರಿ ಯುಎಸ್ ಓಪನ್ ಗೆದ್ದಿರುವ ಅವರು ಸೋಮವಾರ ನಡೆಯುವ ಫೈನಲ್ನಲ್ಲಿ ಒಂದು ವೇಳೆ ಗೆದ್ದರೆ ಐದು ಬಾರಿ ಯುಎಸ್ ಓಪನ್ ಗೆದ್ದಿರುವ ರೋಜರ್ ಫೆಡರರ್, ಸ್ಯಾಂಪ್ರಸ್ ಹಾಗೂ ಜಿಮ್ಮಿ ಕಾನರ್ಸ್ ಅವರ ಪಟ್ಟಿ ಸೇರಲಿದ್ದಾರೆ. ಇದು ನಡಾಲ್ ಪಾಲಿಗೆ ವೃತ್ತಿ ಜೀವನದ 27ನೇ ಗ್ರ್ಯಾನ್ ಸ್ಲ್ಯಾಮ್ ಫೈನಲ್ ಇದಾಗಿದೆ. ಕಳೆದ ತಿಂಗಳು ಮೊಂಟ್ರಿಲ್ ಫೈನಲ್ ಪಂದ್ಯದಲ್ಲಿ ಮೆಡ್ವೆಡೆವ್ ಅವರ ವಿರುದ್ಧ ಗೆಲುವು ಪಡೆದಿದ್ದರು. ಬಳಿಕ ಅವರು ಸಿನ್ಸಿನಾಟಿ ಓಪನ್ ಕಣಕ್ಕೆ ಇಳಿದಿರಲಿಲ್ಲ. ಆದರೆ, ಆ ಟೂನರ್ಿಯಲ್ಲಿ ಮೆಡ್ವೆಡೆವ್ ಚಾಂಪಿಯನ್ ಆಗಿದ್ದರು. ಮೆಡ್ವೆಡೆವ್ ಬಗ್ಗೆ ಮಾತನಾಡಿದ ನಡಾಲ್, " ಅವರೊಬ್ಬರ ಅದ್ಭುತ ಆಟಗಾರ. ಪ್ರತಿಯೊಂದು ವಾರದಲ್ಲೂ ಅವರು ವೃತ್ತಿ ಜೀವನದ ಪ್ರಮುಖ ಹೆಜ್ಜೆಗಳನ್ನು ಇಡುತ್ತಿದ್ದಾರೆ ಎಂದು ಗುಣಗಾನ ಮಾಡಿದ್ದಾರೆ. ಇನ್ನೂ ವೃತ್ತಿ ಜೀವನದ ಮೊದಲ ಬಾರಿ ಗ್ರ್ಯಾನ್ ಸ್ಲ್ಯಾಮ್ ಫೈನಲ್ಗೆ ಲಗ್ಗೆ ಇಟ್ಟಿರುವ 23ರ ಪ್ರಾಯದ ರಷ್ಯಾದ ಡೆನಿಲ್ ಮೆಡ್ವೆಡೆವ್ ಅವರು ಕಳೆದ ಆರು ವಾರಗಳಲ್ಲಿ ವಾಷಿಂಗ್ಟನ್ ಹಾಗೂ ಕೆನಡಾದಲ್ಲಿ ರನ್ನರ್ ಅಪ್ ಆಗಿದ್ದರು. ನಂತರ, ಸಿನ್ಸಿನಾಟಿಯಲ್ಲಿ ಚಾಂಪಿಯನ್ ಬೀಗಿದ್ದರು. ಯುಎಸ್ ಓಪನ್ ಫೈನಲ್ ತಲುಪಿರುವುದಕ್ಕೆ ಅತ್ಯಂತ ಖುಷಿಯಾಗುತ್ತಿದೆ. ಅಮೆರಿಕಕ್ಕೆ ಪಯಣ ಬೆಳೆಸುತ್ತೇನೆಂದರೆ ನನಗೆ ಮೊದಲಿನಿಂದಲೂ ಖುಷಿ ಇರುತ್ತಿತ್ತು. ಆದರೆ, ಇಲ್ಲಿನ ಹೋರಾಟ ಹಾದಿ ಬಗ್ಗೆ ನಾನೆಂದೂ ತಲೆ ಕೆಡಿಸಿಕೊಳ್ಳುತ್ತಿರಲಿಲ್ಲ. ಹಾಗಾಗಿ, ಯುಎಸ್ಎ ಅನ್ನು ನಾನು ತುಂಬಾ ಇಷ್ಟಪಡುತ್ತೇನೆ ಎಂದು ಮೆಡ್ವೆಡೆವ್ ಹೇಳಿದ್ದಾರೆ. 2005ರಲ್ಲಿ ಮರಾಟ್ ಸಫಿನ್ ಆಸ್ಟ್ರೇಲಿಯಾ ಓಪನ್ ಮುಡಿಗೇರಿಸಿಕೊಂಡಿದ್ದರು. ಇವರ ಬಳಿಕ ಗ್ರ್ಯಾನ್ ಸ್ಲ್ಯಾಮ್ ಫೈನಲ್ ತಲುಪಿದ ಮೊದಲ ರಷ್ಯಾ ಟೆನಿಸ್ ಆಟಗಾರ ಮೆಡ್ವೆಡೆವ್ ಆಗಿದ್ದಾರೆ.