ಯುಎಸ್ ಓಪನ್: ಸುಮೀತ್ ನಗಾಲ್ಗೆ ಮೊದಲ ಸುತ್ತಿನಲ್ಲಿ ರೋಜರ್ ಫೆಡರರ್ ವಿರುದ್ಧ ಕಠಿಣ ಸವಾಲು

ಚಂಡೀಗಢ, ಆ 24     ಗ್ರ್ಯಾನ್ ಸ್ಲ್ಯಾಮ್ಗೆ ಚೊಚ್ಚಲ ಪ್ರವೇಶ ಪಡೆದಿರುವ ಭಾರತದ ಉದಯೋನ್ಮುಖ ಟೆನಿಸ್ ಆಟಗಾರ ಸುಮೀತ್ ನಗಾಲ್ ಅವರು ಸೋಮವಾರದಿಂದ ಆರಂಭವಾಗುವ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಮೊದಲನೇ ಸುತ್ತಿನ ಪಂದ್ಯದಲ್ಲಿ ಕಠಿಣ ಸವಾಲು ಎದುರಿಸಲು ಸನ್ನದ್ಧರಾಗಿದ್ದಾರೆ.  ಭಾರತದ ಸುಮೀತ್ ನಗಾಲ್ ಅವರು 20 ಬಾರಿ ಗ್ರ್ಯಾನ್ ಸ್ಲ್ಯಾಮ್ ಗೆದ್ದಿರುವ ಸ್ವಿಜರ್ಲೆಂಡ್ ಸ್ಟಾರ್ ಆಟಗಾರ ರೋಜರ್ ಫೆಡರರ್ ವಿರುದ್ಧ ಯುಎಸ್ ಓಪನ್ ಪುರುಷರ ಸಿಂಗಲ್ಸ್ ಆರಂಭಿಕ ಸುತ್ತಿನಲ್ಲಿ ಕಠಿಣ ಸವಾಲು ಎದುರಿಸಲಿದ್ದಾರೆ.  ಸಮೀತ್ ನಗಾಲ್ ಶುಕ್ರವಾರ ಯುಎಸ್ ಓಪನ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಬ್ರೆಜಿಲನ್ ಜೊವಾವೊ ಮೆನೆಜೆಸ್ ಅವರ ವಿರುದ್ಧ 5-7, 6-4, 6-3 ಅಂತರದಲ್ಲಿ ಗೆದ್ದು ಪ್ರಧಾನ ಸುತ್ತಿಗೆ ಪ್ರವೇಶವನ್ನು ಖಚಿತಪಡಿಸಿಕೊಂಡಿದ್ದರು.  ಪ್ರಧಾನ ಸುತ್ತಿಗೆ ನೇರವಾಗಿ ಅರ್ಹತೆ ಪಡೆದಿರುವ ಭಾರತದ ಮತ್ತೊಬ್ಬ ಆಟಗಾರ ಪ್ರಜ್ಞೇಶ್ ಗುಣೇಶ್ವರನ್ ಅವರು ಮೊದಲ ಸುತ್ತಿನಲ್ಲೇ ಐದನೇ ಶ್ರೇಯಾಂಕದ ಡೆನಿಲ್ನ ಮೆಡ್ವೆಡೆವ್ ವಿರುದ್ಧ ಕಠಿಣ ಹೋರಾಟ ನಡೆಸಲು ಸಜ್ಜಾಗಿದ್ದಾರೆ.