ನಿರುದ್ಯೋಗ: ರಾಷ್ಟ್ರೀಯ ಮಟ್ಟದ ಶೂಟರ್ ನೇಣು ಬಿಗಿದು ಆತ್ಮಹತ್ಯೆ

ಬರೇಲಿ, ಫೆ 17, ಉದ್ಯೋಗ ಪಡೆಯುವಲ್ಲಿ ವಿಫಲರಾದ ಹಿನ್ನೆಲೆಯಲ್ಲಿ ಖಿನ್ನತೆಗೆ ಒಳಗಾದ ರಾಷ್ಟ್ರೀಯ ಮಟ್ಟದ ಶೂಟರ್ ಲಾವಿ ಯಾದವ್ ಸೀಲಿಂಗ್ ಪ್ಯಾನ್ಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಭಾನುವಾರ ದುಪ್ಪಟದಿಂದ ಪ್ಯಾನ್ಗೆ ನೇಣು ಬಿಗಿದುಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ. ಕಳೆದ ಶುಕ್ರವಾರದಿಂದಲೂ ಲಾವಿ ಯಾದವ್ ತಮ್ಮ ಕುಟುಂಬದೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು. ಅವರ ಫೋನ್ ಕೂಡ ಸ್ವಿಚ್ ಆಗಿತ್ತು.24ರ ಪ್ರಾಯದ ಶೂಟರ್ ಮೊಬೈಲ್ ಫೋನ್ ವಶ ಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಡೆತ್ ನೋಟ್ ಬರೆದುಕೊಂಡಿರುವ ಬಗ್ಗೆ ಮಾಹಿತಿ ಇಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಬಿಹಾರಿಪುರದ ಸಿವಿಲ್ ಲೈನ್ಸ್ನಲ್ಲಿ ನಿವಾಸಿಯಾಗಿರುವ ಲಾವಿ ಆರ್ಪಿ ಡಿಗ್ರಿ ಕಾಲೇಜಿನಲ್ಲಿ ದೈಹಿಕ ಶಿಕ್ಷಣ ಪಡೆದುಕೊಂಡಿದ್ದಾರೆ. ಅವರು ರಾಷ್ಟ್ರೀಯ ಮಟ್ಟದ ಶೂಟರ್ ಆಗಿದ್ದು, ಬರೇಲಿಯಲ್ಲಿ ನೆಲೆಸಿದ್ದರು.ಅವರ ಪೋಷಕರು ಸ್ವಂತ ಹಳ್ಳಿಯಲ್ಲಿ ನೆಲೆಸಿದ್ದರು. 

ಅವರು ಯಾವಾಗ ಕರೆಗೆ ಪ್ರತಿಕ್ರಿಯೆ ನೀಡದೆ ಇದ್ದಾಗ ಆಕೆಯ ಸಹೋದರ ಮತ್ತು ತಂದೆ ಬರೇಲಿಗೆ ಬಂದು ನೋಡಿದಾಗ ಅವರ ಕೊಠಡಿ ಮುಚ್ಚಿತ್ತು. ನಂತರ, ಅವರು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ತಿಳಿದಿದೆ.ತಕ್ಷಣ ಆಕೆಯ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ ಎಂದು ಇನ್ಸ್ಪೆಕ್ಟರ್ ಗಿತೇಶ್ ಕಪಿಲ್ ತಿಳಿಸಿದ್ದಾರೆ."ತನ್ನ ಮಗಳು ಉದ್ಯೋಗ ಪಡೆಯುವಲ್ಲಿ ವಿಫಲವಾಗಿದ್ದಳು ಹಾಗೂ ತನ್ನ ಭವಿಷ್ಯವನ್ನು ರೂಪಿಸಿಕೊಳ್ಳಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗಿದ್ದಳು," ಎಂದು ಲಾವಿ ಯಾದವ್ ತಂದೆ ಪೊಲೀಸರಿಗೆ ತಿಳಿಸಿದ್ದಾರೆ.