ನವದೆಹಲಿ, ಫೆ 20, ಭ್ರಷ್ಟಚಾರ ತಡೆ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕಾಗಿ ಪಾಕಿಸ್ತಾನ ತಂಡದ ಹಿರಿಯ ಬ್ಯಾಟ್ಸ್ಮನ್ ಉಮರ್ ಅಕ್ಮಲ್ ಅವರನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಅಮಾನತು ಶಿಕ್ಷೆ ವಿಧಿಸಿದೆ. ಪಾಕಿಸ್ತಾನ ಸೂಪರ್ ಲೀಗ್ ಆರಂಭವಾಗುವ ಕೆಲವೇ ಗಂಟೆಗಳ ಮುನ್ನ ಉಮರ್ ಅಕ್ಮಲ್ ಈ ಶಿಕ್ಷಗೆ ಗುರಿಯಾಗಿದ್ದಾರೆ. ವಿಶ್ವ ಕ್ರಿಕೆಟ್ನಲ್ಲಿಯೇ ವಿವಾದಗಳಿಗೆ ಪಾಕಿಸ್ತಾನ ಹೆಚ್ಚು ಹೆಸರು ವಾಸಿ ಎಂಬುದು ಮತ್ತೊಮ್ಮೆ ಸಾಬೀತಾಯಿತು.ಮಧ್ಯಮ ಕ್ರಮಾಂಕದ ಬ್ಯಾಟ್ಸ್ಮನ್ 29 ವರ್ಷದ ಉಮರ್ ಅಕ್ಮಲ್, ಪಿಸಿಬಿ ಭ್ರಷ್ಟಾಚಾರ ತಡೆ ನೀತಿಯ ಆರ್ಟಿಕಲ್ 4.7.1 ನಿಯಮ ಉಲ್ಲಂಘಿಸಿರುವ ಕಾರಣ ಪಿಸಿಬಿ ಈ ಕ್ರಮ ಕೈಗೊಂಡಿದೆ.
ಪಿಸಿಬಿಯ ಭ್ರಷ್ಟಾಚಾರ ತಡೆ ಘಟಕ ಕೈಗೊಂಡ ತನಿಖೆಯಲ್ಲಿ ಅಕ್ಮಲ್ ನಿಯಮ ಉಲ್ಲಂಘನೆ ಪತ್ತೆಯಾಗಿದೆ, ಹೀಗಾಗಿ ಅಮಾನತು ಜಾರಿಯಲ್ಲಿರುವ ವರೆಗೂ ಅವರು ಯಾವುದೇ ರೀತಿಯ ಕ್ರಿಕೆಟ್ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ ಎಂದು ನಿರ್ದೇಶಿಸಿದೆ."ತನಿಖೆ ಇನ್ನೂ ಜಾರಿಯಲ್ಲಿರುವ ಕಾರಣ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಈ ವಿಚಾರವಾಗಿ ಹೆಚ್ಚಿನ ಹೇಳಿಕೆಯನ್ನು ನೀಡುವುದಿಲ್ಲ," ಎಂದು ಪಿಸಿಬಿ ತನ್ನ ಹೇಳಿಕೆ ಬಿಡುಗಡೆ ಮಾಡಿದೆ.ಉಮರ್ ಅಕ್ಮಲ್ ಫಿಟ್ನೆಸ್ ಪರೀಕ್ಷೆಯಲ್ಲಿ ಅನ್ನುತ್ತೀರ್ಣರಾಗಿದ್ದು, ಈ ವಿಚಾರವಾಗಿ ತಪ್ಪಾಗಿ ನಡೆದುಕೊಂಡಿದ್ದ ಬೆನ್ನಲ್ಲೇ ಅಮಾನತು ಶಿಕ್ಷೆ ಜಾರಿಯಾಗಿದೆ. ಲಾಹೋರ್ನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ನಡೆದ ಫಿಟ್ನೆಸ್ ಪರೀಕ್ಷೆಯಲ್ಲಿ ಅನ್ನುತ್ತೀರ್ಣರಾದ ಬಳಿಕ ಉಮರ್ ಅಕ್ಮಲ್ ಅಲ್ಲಿನ ಸಿಬ್ಬಂದಿ ಎದುರು ದುರ್ವರ್ತನೆ ಪ್ರದರ್ಶಿಸಿದ್ದರು.