ಯುಕೆ ರಸ್ತೆಗೆ ಗುರುನಾನಕ್‌ ಹೆಸರು ಸಾಧ್ಯತೆ

ನವದೆಹಲಿ,  ಜೂನ್ 12,ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ನಂತರ, ಈಗ  ಅದು ಗುರುನಾನಕ್ ಅವರನ್ನು ವಿದೇಶವೊಂದು ಗೌರವಿಸಲ್ಪಡುತ್ತಿದೆ.ಯುನೈಟೆಡ್ ಕಿಂಗ್‌ಡಂನ ಸೌತಾಲ್‌ನಲ್ಲಿ, ಪಶ್ಚಿಮ ಯುರೋಪಿನಲ್ಲಿ ಅತಿದೊಡ್ಡ ಗುರುದ್ವಾರವಾಗಿರುವ 'ಗುರುದ್ವಾರ ಶ್ರೀ ಗುರು ಸಿಂಗ್ ಸಭಾ' ಇರುವ ರಸ್ತೆಯನ್ನು  'ಗುರುನಾನಕ್ ರಸ್ತೆ' ಎಂದು ಮರುನಾಮಕರಣ ಮಾಡುವ ಸಾಧ್ಯತೆ ಇದೆ ಎಂದು ವರದಿ ತಿಳಿಸಿದೆ.

ಸ್ಥಳೀಯ  ಕೌನ್ಸಿಲ್ ಈಗ ತನ್ನ ಪ್ರದೇಶದ ಎಲ್ಲಾ ರಸ್ತೆಗಳ ಹೆಸರು ಮತ್ತು ಪ್ರತಿಮೆಗಳಿಗೆ  ವಸಾಹತುಶಾಹಿ ಸಂಪರ್ಕ ಇರುವುದನ್ನು ಪರಿಶೀಲಿಸುತ್ತಿದ್ದು, ಇದಕ್ಕಾಗಿ ಬದಲಾವಣೆ ಮಾಡುತ್ತಿದೆ ಎಂದು ವರದಿಗಳು ತಿಳಿಸಿವೆ.ಗುರುದ್ವಾರ ಶ್ರೀ ಗುರು ಸಿಂಗ್ ಸಭಾ, ಸೌತಾಲ್‌ನ ಹ್ಯಾವ್ಲಾಕ್ ರಸ್ತೆಯಲ್ಲಿದೆ. ಈ ರಸ್ತೆ ಬ್ರಿಟಿಷ್ ಜನರಲ್ ಹೆನ್ರಿ ಹ್ಯಾವ್ಲಾಕ್ ಅವರಹೆಸರಿನಲ್ಲಿದೆ.ಟ್ಯಾಗೋರ್‌ನ 159 ನೇ ಜನ್ಮ ದಿನವಾದ ಮೇ 8ರಂದು, ಟೆಲ್ ಅವೀವ್‌ನಲ್ಲಿ ಬೀದಿಗೆ ಇಸ್ರೇಲ್ ದೇಶ, ಟ್ಯಾಗೋರ್‌ ಅವರ ಹೆಸರಿಡುವ ಮೂಲಕ ಹೃದಯಸ್ಪರ್ಶಿ ಗೌರವ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.