ತಾಯಿ, ಮಗು ಕಾಣೆ: ಪತ್ತೆಗೆ ಮನವಿ
ಬಳ್ಳಾರಿ 20: ಸಂಡುರು ತಾಲ್ಲೂಕಿನ ಡಿ.ಅಂತಾಪುರ ಗ್ರಾಮದ ಸರಸ್ವತಿ ಎನ್ನುವ 30 ವರ್ಷದ ಮಹಿಳೆ ಮತ್ತು ಸೃಜನ್ ಎನ್ನುವ 04 ವರ್ಷದ ಮಗು 2024 ರ ನ.10 ರಂದು ಕಾಣೆಯಾಗಿರುವ ಕುರಿತು ತೋರಣಗಲ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತ್ತೆಗೆ ಸಹಕರಿಸಬೇಕು ಎಂದು ಠಾಣಾಧಿಕಾರಿ ಮನವಿ ಮಾಡಿದ್ದಾರೆ.
*ಮಹಿಳೆ ಮತ್ತು ಮಗುವಿನ ಚಹರೆ:*
ಮಹಿಳೆಯು ಎತ್ತರ 4.8 ಅಡಿ, ದುಂಡು ಮುಖ, ಗೋಧಿ ಮೈಬಣ್ಣ ಹೊಂದಿದ್ದು, ಕಾಣೆಯಾದ ಸಂದರ್ಭದಲ್ಲಿ ಸಿಮೆಂಟ್ ಬಣ್ಣದ ಟಾಪ್ ಮತ್ತು ಕಪ್ಪು ಬಣ್ಣದ ಪ್ಯಾಂಟ್ ತೊಟ್ಟಿದ್ದು, ಕನ್ನಡ ಮತ್ತು ತೆಲುಗು ಭಾಷೆ ಮಾತನಾಡುತ್ತಾಳೆ.ಮಗುವು ಗೋಧಿ ಮೈಬಣ್ಣ ಹೊಂದಿದ್ದು, ಕನ್ನಡ ಮಾತನಾಡುತ್ತಾನೆ.ಮೇಲ್ಕಂಡ ಚಹರೆ ಗುರುತುಗಳುಳ್ಳ ಮಹಿಳೆ ಮತ್ತು ಮಗುವಿನ ಬಗ್ಗೆ ಮಾಹಿತಿ ದೊರೆತಲ್ಲಿ ತೋರಣಗಲ್ಲು ಪೊಲೀಸ್ ಠಾಣೆಯ ಡಿವೈಎಸ್ಪಿ ದೂ.9480803010, ಸಂಡೂರು ವೃತ್ತದ ಸಿಪಿಐ ದೂ.08395-260100, 9480803036 ಅಥವಾ ಬಳ್ಳಾರಿ ಎಸ್‌ಪಿ ಅವರ ಕಚೇರಿ ದೂ.08392-258300, ಬಳ್ಳಾರಿ ಕಂಟ್ರೋಲ್ ರೂಂ ದೂ.08392-279100ಗೆ ಸಂಪರ್ಕಿಸಬಹುದು ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.