ಕಾಬೂಲ್ ಮಸೀದಿ ಮೇಲಿನ ದಾಳಿ : ಯುಎಇ, ಸೌದಿ ಅರೇಬಿಯಾ ಖಂಡನೆ

ಕಾಬುಲ್, ಜೂನ್ 13, ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಪಶ್ಚಿಮ ಭಾಗದಲ್ಲಿನ ಮಸೀದಿಯೊಂದರ ಮೇಲೆ ಶುಕ್ರವಾರ ಪ್ರಾರ್ಥನಾ ಸಮಯದಲ್ಲಿ ನಡೆದ ದಾಳಿಯನ್ನು ಸಂಯುಕ್ತ ಅರಬ್ ಒಕ್ಕೂಟ ಯುಎಇ ಮತ್ತು ಸೌದಿ ಅರೇಬಿಯಾ ರಾಷ್ಟ್ರಗಳು ಬಲವಾಗಿ ಖಂಡಿಸಿವೆ. ಮಸೀದಿಯನ್ನು ಗುರಿಯಾಗಿಸಿ ನಡೆಸಿದ ದಾಳಿಯಲ್ಲಿ ಅಮಾಯಕ ನಾಗರಿಕರು ಮೃತಪಟ್ಟು ಅನೇಕರು ಗಾಯಗೊಂಡಿದ್ದಾರೆ.ಯುಎಇ ಭದ್ರತೆ ಮತ್ತು ಸ್ಥಿರತೆಗೆ ಅಪಾಯ ಒಡ್ಡುವ ಧಾರ್ಮಿಕ ಮತ್ತು ಮಾನವೀಯ ಮೌಲ್ಯಗಳಿಗೆ ಧಕ್ಕೆ ತರುವ ಇಂತಹ ಕ್ರೂರ ನಡೆಯನ್ನು ಮತ್ತು ಎಲ್ಲ ಬಗೆಯ ಹಿಂಸಾಚಾರ ಮತ್ತು ಭಯೋತ್ಪಾನೆಯನ್ನು ಬಲವಾಗಿ ಖಂಡಿಸುತ್ತದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.ಪ್ರಾರ್ಥನಾ ಸ್ಥಳ ಮೊದಲಾದ ಸಾರ್ವಜನಿಕ ಸ್ಥಗಳನ್ನು ಗುರಿಯಾಗಿಸಿ ಅಮಾಯಕ ನಾಗರಿಕರ ಪ್ರಾಣಕ್ಕೆ ಕಂಟಕವಾಗುವ ನಡೆಯನ್ನು ಸೌದಿ ಅರೇಬಿಯಾ ಖಂಡಿಸುತ್ತದೆ ಎಂದು ಅಲ್ಲಿನ ವಿದೇಶಾಂಗ ಸಚಿವಾಲಯದ ಹೇಳಿಕೆ ತಿಳಿಸಿದೆ.