ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ಮತ್ತೆರಡು ಕರೋನ ಪ್ರಕರಣ ದಾಖಲು

ಕೊಲ್ಹಾಪುರ, ಮಾರ್ಚ್ 27, ಮಹಾರಾಷ್ಟ್ರದ ಕರೋನ ಪ್ರಕರಣಗಳ ಸಂಖ್ಯೆ ಸತತವಾಗಿ ಏರಿಕೆಯಾಗುತ್ತಿದ್ದು  ಕೊಲ್ಹಾಪುರ ಜಿಲ್ಲೆಯಲ್ಲಿ ಚಿಕ್ಕ ಹುಡುಗಿ ಸೇರಿದಂತೆ ಇಬ್ಬರು ವ್ಯಕ್ತಿಗಳಿಗೆ ಸೋಂಕು ತಗುಲಿರುವುದು  ಪರೀಕ್ಷೆಯ ನಂತರ ಖಚಿತವಾಗಿದೆ. ಈ ಜಿಲ್ಲೆಯ ಪೆಥ್-ವಡ್ಗಾಂವ್ನಲ್ಲಿ ಒದುತ್ತಿದ್ದ  ಯುವತಿಯೊಬ್ಬಳು ಸಾಂಗ್ಲಿ ಜಿಲ್ಲೆಯ ಇಸ್ಲಾಂಪುರ ಪಟ್ಟಣದಲ್ಲಿ ಸಕಾರಾತ್ಮಕ ರೋಗಿಗಳೊಂದಿಗೆ ನಿಕಟ ಸಂಪರ್ಕ ಹೊಂದಿದ್ದಳು. ಗುರುವಾರ ರಾತ್ರಿ ಆಕೆಯ ಪರೀಕ್ಷೆಯಲ್ಲಿ ಸೋಂಕು ಖಚಿತವಾಗಿರುವುದು ದೃಡಪಟ್ಟನಂತರ  ಆಕೆಯನ್ನು ಸಾಂಗ್ಲಿ ಜಿಲ್ಲೆಯ ಮೀರಾಜ್‌ನ ಮಿರಾಜ್ ಸಿವಿಲ್ ಆಸ್ಪತ್ರೆಗೆ ಸೇರಿಸಲಾಗಿತ್ತು. ಇದೆ  20 ರಂದು ಪುಣೆಯಿಂದ ಮರಳಿದ ಪೆಥ್ ಪ್ರದೇಶದ ಭಕ್ತಿಪುಜಾ ನಗರದಲ್ಲಿ ವಾಸಿಸುತ್ತಿದ್ದ ವ್ಯಕ್ತಿಯೊಬ್ಬರಿಗೆ  ವೈದ್ಯಕೀಯ ಪರೀಕ್ಷೆ ಮಾಡಲಾಗಿದ್ದು  ಅವರ ಗಂಟಲು ದ್ರವ್ಯದ ಪರೀಕ್ಷೆಯಲ್ಲಿ ಸೋಂಕು ದೃಡಪಟ್ಟಿದೆ ಎಂದು ಹೇಳಲಾಗಿದೆ.