ಕಂಪ್ಲಿ: ಉದ್ಯೋಗಕ್ಕಾಗಿ ಎರಡು ಎಕರೆ ಭೂಮಿ ಮೀಸಲು

ಲೋಕದರ್ಶನ ವರದಿ 

ಕಂಪ್ಲಿ 22: ಮಹಿಳೆಯರು ಸ್ವ ಉದ್ಯೋಗ ಪಡೆಯುವ ಮೂಲಕ  ಪ್ರತಿಯೊಂದು ಕುಟುಂಬದ  ಆರ್ಥಿಕ ಸ್ವಾವಲಂಬನೆ ನೀಗಿಸಬಹುದು . ಕೈಗಾರಿಕ ವಸಾಹತುವಿಗಾಗಿ ಅರಳಿಹಳ್ಳಿ ತಾಂಡದಲ್ಲಿ ಎಂಟು ಎಕರೆ ಭೂಮಿಯನ್ನು ನಿಗಧಿಯಾಗಿದು  ಅದರಲ್ಲಿ ಮಹಿಳೆಯರ ಬೃಹತ್ ಹೊಲಿಗೆ ಯಂತ್ರ ತರಬೇತಿ ಮತ್ತು ಉದ್ಯೋಗಕ್ಕಾಗಿ ಎರಡು ಎಕರೆ ಸ್ಥಳ ಮೀಸಲಿಡಲಾಗುವುದು ಎಂದು ಶಾಸಕ ಜೆ.ಎನ್.ಗಣೇಶ್ ಹೇಳಿದರು. 

ಪಟ್ಟಣದ ಎಸ್ವಿಎನ್ ಶಾಲೆ ಬಳಿಯಲ್ಲಿ, ಗುರುವಾರ ಸಂಜೆ ಮುನಾಫ್ ಗಾಮರ್ೇಂಟ್ಸ್ ತರಬೇತಿ ಕೇಂದ್ರ ಉದ್ಘಾಟಿಸಿ ಮಾತನಾಡಿ, ಕೈಗಾರಿಕ ವಸಾಹತುವಿನಲ್ಲಿ ಮೀಸಲಿರಿಸಿದ ಜಮೀನಿನಲ್ಲಿ ಸಾವಿರಾರು ಮಹಿಳೆಯರಿಗೆ ಹೊಲಿಗೆ ತರಬೇತಿ ಮತ್ತು ಉದ್ಯೋಗ ನೀಡುವ ಯೋಜನೆ ಹಮ್ಮಿಕೊಳ್ಳಲಾಗುವುದು. ಜಿಲ್ಲೆ ಮತ್ತು ಬೇರೆ ಜಿಲ್ಲೆಯ ಖಾಸಗಿ ಮತ್ತು ಸರ್ಕಾರಿ ಕೈಗಾರಿಕೆಗಳ ನೌಕರರ ಸಮವಸ್ತ್ರ ಪೂರೈಸುವ ಯೋಜನೆ ಹೊಂದಿದೆ ಎಂದು ಹೇಳಿದರು.

ಅಧ್ಯಕ್ಷತೆವಹಿಸಿದ್ದ ಮುಸ್ಲಿಂ ಸಮಾಜದ ಮುಖಂಡ ವೈ.ಅಬ್ದುಲ್ ಮುನಾಫ್ ಮಾತನಾಡಿ, ಮಹಿಳೆಯರು ಆಥರ್ಿಕ ಸ್ವಾವಲಂಬನೆ ಸಾಧಿಸುವಲ್ಲಿ ಸ್ವ ಉದ್ಯೋಗ ಪ್ರಮುಖಪಾತ್ರವಹಿಸುತ್ತದೆ.  ಮಹಿಳೆಯರು ಗಾರ್ಮೆಂಟ್  ತರಬೇತಿ ಪಡೆದು ಸ್ವ ಉದ್ಯೋಗಿಗಳಾಗಲು ಗಾರ್ಮೆಂಟ್ಸ್  ತರಬೇತಿ ಕೇಂದ್ರ ತೆರೆಯಲಾಗಿದ್ದು, ಸದುಪಯೋಗ ಪಡಿಸಿಕೊಳ್ಳುವಂತೆ ಕೋರಿದರು. 

ಪುರಸಭೆ ಸದಸ್ಯರಾದ ಲಡ್ಡು ಹೊನ್ನೂರವಲಿ, ಎಂ.ಉಸ್ಮಾನ್,  ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಇಟ್ಗಿ ಬಸವರಾಜಗೌಡ, ಪ್ರಮುಖರಾದ ಎಂ.ಮೆಹಮೂದ್, ವಿ.ಶ್ರೀನಿವಾಸ್, ಆಟೋ ರಾಘವೇಂದ್ರ, ಬಿ.ಜಾಫರ್, ಅಬ್ದುಲ್ ವಾಹೀದ್, ಜಾಪರ್ ಗಾರ್ಮೆಂಟ್ಸ್  ತರಬೇತಿ ಪಡೆಯುವ ಮಹಿಳೆಯರು ಸೇರಿ ಅನೇಕರಿದ್ದರು.