ಬೆಂಗಳೂರು, ಏ.5, ಕೊರೊನಾ ಸೋಂಕು ನಿಯಂತ್ರಿಸಲು ಲಾಕ್ಡೌನ್ ಮಾಡಿದ್ದರೂ ಆನ್ಲೈನ್ ಪೋಕರ್ ನಡೆಸುತ್ತಿದ್ದ ಇಬ್ಬರು ಬ್ರೋಕರ್ ಅನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ಎರಡು ಕಡೆ ಪ್ರತ್ಯೇಕ ದಾಳಿ ನಡೆಸಿ, 52,300 ನಗದು ಹಾಗೂ ಎರಡು ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.ಕೋರಮಂಗಲದ ಯತೀಶ್ (23), ಮಾರುತಿ ನಗರದ ಪುನೀತ್ (31) ಬಂಧಿತ ಆರೋಪಿಗಳು.ವಸಂತನಗರದ ಬಿಲ್ಡಿಂಗ್ ವೊಂದರಲ್ಲಿ ಮೊಬೈಲ್ ಫೋನ್ ನಲ್ಲಿ ಗ್ರೂಪ್ ಮಾಡಿಕೊಂಡು ಲೈಸನ್ಸ್ ಇಲ್ಲದೇ ಆನ್ ಮೂಲಕ ಪೋಕರ್ ಗೇಮ್ ಆಡಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿ ಯತೀಶ್ ನನ್ನು ಬಂಧಿಸಲಾಗಿದೆ. ಆತನ ಬಳಿಯಿಂದ ಒಂದು ಐಫೋನ್ ವಶಪಡಿಸಿಕೊಳ್ಳಲಾಗಿದ್ದು, ಹೈಗ್ರೌಂಡ್ಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇನ್ನು ಮಾರುತಿ ನಗರದಲ್ಲಿ ಮೊಬೈಲ್ ನಲ್ಲಿ ಅಪ್/ವೆಬ್ ಸೈಟ್ ಮೂಲಕ ಪಂಟರ್ ಗಳಿಗೆ ಯೂಸರ್ ಐಡಿ ಮತ್ತು ಪಾಸ್ ನೀಡಿ ಅದರಲ್ಲಿ ಪೋಕರ್ ಆಟ ಆಡಿಸಲಾಗುತ್ತಿತ್ತು. ಬಂಧಿತ ಆರೋಪಿ ಪುನೀತ್ ನಿಂದ 52,300ರೂ ಹಾಗೂ ಒಂದು ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಮಾಕ್ಷಿ ಪಾಳ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಿಸಿಬಿ ವಿಶೇಷ ವಿಚಾರಣಾ ದಳದ ಸಹಾಯಕ ಪೊಲೀಸ್ ಆಯುಕ್ತ ಡಿಟಿ ವಿರೂಪಾಕ್ಷಪ್ಪ ಅವರ ನೇತೃತ್ವದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.