ಧರ್ಮಸ್ಥಳ ಗ್ರಾಮಾಭಿವೃದ್ಧಿಯಿಂದ ಟ್ಯೂಶನ್ ಕ್ಲಾಸ್

ಲೋಕದರ್ಶನ ವರದಿ

ಖಾನಾಪುರ 11: ಧರ್ಮಸ್ಥಳ ಗ್ರಾಮಾವೃದ್ಧಿ ಖಾನಾಪುರ ತಾಲೂಕಿನ ಲೋಂಡಾ ಕಾರ್ಯಕ್ಷೇತ್ರದ ಲೋಂಡಾ ಪ್ರೌಢಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾವೃದ್ಧಿ ಯೋಜನೆಯಿಂದ ನಡೆಯುವ ಹತ್ತನೇ ತರಗತಿ ವಿದ್ಯಾರ್ಥಿಗಳ ಟ್ಯೂಶನ್ ಕ್ಲಾಸ್ ಉದ್ಘಾಟನಾ ಕಾರ್ಯಕ್ರಮವನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಬಾಬುರಾವ್ ದೇಸಾಯಿ ಅವರು ನೆರವೇರಿಸಿದರು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಪಂ ಅಧ್ಯಕ್ಷರಾದ ಪ್ರಕಾಶ್ ಪಾಲೇಕರ್ ವಹಿಸಿದ್ದರು ,ಮುಖ್ಯ ಅತಿಥಿಯಾಗಿ ತಾಲ್ಲೂಕು ಯೋಜನಾಧಿಕಾರಿಗಳಾದ ರಿಯಾಜ್ ಅತ್ತಾರ ,ಹಾಗೂ ಗ್ರಾಪಂ ಸದಸ್ಯರಾದ ಅನಿಲ್ ಮಿಠಾರಿ, ಮುಖ್ಯೊ?ಪಾಧ್ಯಯರಾದ ಎನ್. ಡಿ.ಪಾಟೀಲ್ ಉಪಸ್ಥಿತರಿದ್ದರು, ಕಾರ್ಯಕ್ರಮದ ನಿರೂಪಣೆ ಮೇಲ್ವಿಚಾರಕರಾದ ಜ್ಞಾನೇಶ್ವರ್.ಎಮ್.ಡಿ  ಮಾಡಿದರೂ ಸ್ವಾಗತ ಸೇವಾ ಪ್ರತಿನಿಧಿಗಳಾದ ಸವಿತಾ ಸಾವಂತ್ ಮಾಡಿದರು ಧನ್ಯವಾದ  ಸೇವಾ ಪ್ರತಿನಿಧಿ ಮಂಜುಳಾ ರವರು  ನೆರವೇರಿಸಿದರು.