ಒಕ್ಲಹೋಮದಲ್ಲಿ ಟ್ರಂಪ್ ಪ್ರಚಾರ ಸಭೆ ಪುನರಾರಂಭ

ವಾಷಿಂಗ್ಟನ್, ಜೂನ್ 11, ಅಮೆರಿಕದಲ್ಲಿ ಕರೋನ ಸಂಕಷ್ಟದ ನಡುವೆಯೂ ಅಧ್ಯಕ್ಷೀಯ ಚುನಾವಣೆ ಕಾವು ಮತ್ತೆ ಬಿರುಸುಗೊಳ್ಳುತ್ತಿದೆ.  ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೇ 19 ರಂದು ಒಕ್ಲಹೋಮದಲ್ಲಿ ಪ್ರಚಾರ  ಸಮಾವೇಶ ಪುನರಾರಂಭಿಸುವುದಾಗಿ  ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಕ್ಲಹೋಮದಲ್ಲಿ  ಮೊದಲ  ಚುನಾವಣೆ ಸಭೆ ಆರಂಭವಾಗಲಿದೆ ಎಂದು ಟ್ರಂಪ್ ಬುಧವಾರ ಶ್ವೇತಭವನದಲ್ಲಿ ಹೇಳಿದರು. ನಂತರ ಫ್ಲೋರಿಡಾ, ಅರಿ ಜೋನ ಮತ್ತು ಉತ್ತರ ಕೆರೊಲಿನಾದಲ್ಲಿ ಚುನಾವಣಾ ಸಭೆಗಳು ನಿರಂತರವಾಗಿ  ನಡೆಸುವುದಾಗಿ  ಹೇಳಿದ್ದಾರೆ. ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶವನ್ನು ಉತ್ತರ ಕೆರೊಲಿನಾದಿಂದ ಸ್ಥಳಾಂತರಿಸಲಾಗುವುದು ಮತ್ತು ಹೊಸ ಸ್ಥಳದ ಕುರಿತು ಶೀಘ್ರದಲ್ಲೇ ಪ್ರಕಟಣೆ ನೀಡಲಾಗುವುದು ಎಂದರು. ಕರೋನ ಕಾರಣದಿಂದ  ಸಾಮಾಜಿಕ ಅಂತರ  ಕಾಪಾಡಿಕೊಳ್ಳುವ  ಮಾರ್ಗಸೂಚಿಗಳ ಕುರಿತು ರಾಜ್ಯದ ರಾಜ್ಯಪಾಲರೊಂದಿಗಿನ ವಿವಾದದಿಂದಾಗಿ ಈ ಕಾರ್ಯಕ್ರಮವನ್ನು ಉತ್ತರ ಕೆರೊಲಿನಾದಿಂದ ಸ್ಥಳಾಂತರಿಸಲು ಅಧ್ಯಕ್ಷರು ತೀರ್ಮಾನಿಸಿದ್ದಾರೆ ಎನ್ನಲಾಗಿದೆ.