ವಿಜಯೋತ್ಸವ: ಎರಚಿದ ಬಣ್ಣದಿಂದ ಮೈ ಕಡಿತ

ಲೋಕದರ್ಶನವರದಿ

ಬ್ಯಾಡಗಿ31: ಸ್ಥಳೀಯ ಪುರಸಭೆಯ ಚುನಾವಣೆಯಲ್ಲಿ ವಿಜೇತರಾದ ಬಿಜೆಪಿ ಅಭ್ಯಥರ್ಿಯ ವಿಜಯೋತ್ಸವ ಸಂದರ್ಭದಲ್ಲಿ ಕೆಲ ಕಾರ್ಯಕರ್ತರ ಮೇಲೆ ಬಣ್ಣ ಚೆಲ್ಲಾಡುವಾಗ ಮೈ ಕೈ ಕಡಿತ ಉಂಟಾಗಿ ಆಸ್ಪತ್ರೆಗೆ ಸೇರಿದ ಘಟನೆ ಶುಕ್ರವಾರ ಜರುಗಿತು.

   16ನೇ ವಾಡರ್ಿನ ಬಿಜೆಪಿ ಅಭ್ಯಥರ್ಿ ಸುಭಾಸ ಮಾಳಗಿ ಗೆಲುವಿನ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದ ಕಾರ್ಯಕರ್ತರು ಪರಸ್ಪರ ಬಣ್ಣ ಚೆಲ್ಲಾಡುವ ಸಂದರ್ಭದಲ್ಲಿ ಈ ಅವಘಡ ಜರುಗಿದ್ದು, ಸುಮಾರು 20ಕ್ಕೂ ಹೆಚ್ಚು ಕಾರ್ಯಕರ್ತರು ಸರಕಾರಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಂಡರು. 

      ಈ ಅವಘಡಕ್ಕೆ ಸ್ಪಷ್ಟ ಕಾರಣವೆನೆಂದು ತಿಳಿದಿಲ್ಲಾ, ವಿಷಯ ತಿಳಿದು ಪೋಲಿಸರು ಸ್ಥಳಕ್ಕೆ ದಾವಿಸಿ ತನಿಖೆ ಮುಂದುವರಿಸಿದ್ದಾರೆ.

ಶಾಸಕರ ಭೇಟಿ: ಈ ವಿಷಯ ತಿಳಿದ ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ, ಮಾಜಿ ಶಾಸಕ ಸುರೇಶಗೌಡ್ರ ಪಾಟೀಲ, ನೂತನ ಪುರಸಭಾ ಸದಸ್ಯರು ಸೇರಿದಂತೆ ವಿವಿಧ ಮುಖಂಡರು ಆಸ್ಪತ್ರೆಗೆ ಭೇಟಿ ನೀಡಿ ಕಾರ್ಯಕರ್ತರ ಆರೋಗ್ಯ ವಿಚಾರಿಸಿದರು.