ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರರವರಿಗೆ ಸನ್ಮಾನ
Tribute to former Rangayana director Subhas Narendra
ಹುಬ್ಬಳ್ಳಿ 30: ವಿಶ್ವ ರಂಗಭೂಮಿ ದಿನಾಚರಣೆ ಅಂಗವಾಗಿ ಸುನಿಧಿ ಕಲಾ ಸೌರಭದವರು ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ನಿರಂತರವಾಗಿ ರಂಗಭೂಮಿಯಲ್ಲಿ ಕೆಲಸ ಮಾಡುತ್ತಿರುವ, ಅನಾಥರ ಮಾಯಿ ಪದ್ಮಶ್ರೀ ಡಾ. ಸಿಂಧುತಾಯಿ ಸಪಕಾಳ ಅವರ ಕಾರ್ಯಗಳ ಬಗ್ಗೆ ಶ್ರದ್ಧಾ, ಭಕ್ತಿಯಿಂದ ಗೌರವ ಹೊಂದಿರುವ ಹಾಗೂ ಡಾ. ಸಿಂಧುತಾಯಿ ಸಪಕಾಳ ಅವರ ಜೀವನದ ಯಶೋಗಾಥೆಯನ್ನು ಕನ್ನಡ ರಂಗಭೂಮಿಗೆ ಪರಿಚಯಿಸಿದ ಸುನಿಧಿ ಕಲಾ ಸೌರಭದ ಅಧ್ಯಕ್ಷ, ರಂಗಾಯಣದ ಮಾಜಿ ನಿರ್ದೇಶಕ ಸುಭಾಸ ನರೇಂದ್ರ ಅವರಿಗೆ ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಪದಾಧಿಕಾರಿಗಳು ಶಾಲು, ಮಾಲಾರೆ್ಣ ಮಾಡಿ ಗೌರವದಿಂದ ಆತ್ಮೀಯವಾಗಿ ಸನ್ಮಾನಿಸಿದರು. ಅಭಿನಂದಿಸಿ, ರಂಗಭೂಮಿ ದಿನಾಚರಣೆಯ ಶುಭ ಕೋರಿದರು.
ಸಿದ್ಧಾರೂಢ ಮಠ ಟ್ರಸ್ಟ ಕಮೀಟಿಯ ಅಧ್ಯಕ್ಷರು, ಖ್ಯಾತ ಲೆಕ್ಕ ಪರಿಶೋಧಕರಾದ ಚನ್ನವೀರ ಮುಂಗುರವಾಡಿ, ಹುಬ್ಬಳ್ಳಿಯ ಜೆಜಿಎಂಎಂಸಿ ಮತ್ತು ಕೆಎಲ್‌ಇ ಅಸ್ಪತ್ರೆಯ ನಿರ್ದೇಶಕರಾದ ಡಾ. ಎಂಜಿ ಹಿರೇಮಠ ಖ್ಯಾತ ನಾಟಕಕಾರ, ಹಿರಿಯ ಕಲಾವಿದ ಡಾ ಗೋವಿಂದ ಮಣ್ಣೂರ , ಕಲಾವಿದರು, ಹುಬ್ಬಳ್ಳಿಯ ವಿಜಯ ಕರ್ನಾಟಕದ ಸ್ಥಾನಿಕ ಸಂಪಾದಕ ಡಾ. ಬಂಡು ಕುಲಕರ್ಣಿ, ಪ್ರಖ್ಯಾತ ಭರತನಾಟ್ಯ ಪ್ರವೀಣ, ವಿದ್ವಾನ್ ಸುಜಯ್ ಶಾನಭಾಗ, ರಾಣಿಚನ್ನಮ್ಮ ಪರಿಸರ ಸೇವಾ ಸಮಿತಿಯ ಕಾರ್ಯದರ್ಶಿ, ಬಸವ ಪರಿಸರ ಸಂರಕ್ಷಣಾ ಸಮಿತಿಯ ಕಾರ್ಯದರ್ಶಿ, ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಘಟಕದ ಉಪಾಧ್ಯಕ್ಷ, ಕರ್ನಾಟಕ ವಚನ ಸಾಹಿತ್ಯ ಪರಿಷತ್ನ ಜಿಲ್ಲಾ ಘಟಕದ ಕಾರ್ಯಾಧ್ಯಕ್ಷ, ಹೊರಕೇರಿ ಮಾಸ್ತರ ಶಿಕ್ಷಣ ಪ್ರತಿಷ್ಠಾನ ಟ್ರಸ್ಟಿ, ಗ್ರಂಥಪಾಲಕ ಡಾ. ಸುರೇಶ ಡಿ. ಹೊರಕೇರಿ ಉತ್ತರ ಕರ್ನಾಟಕ ಸಕ್ಷಮದ ಅಧ್ಯಕ್ಷ ಡಾ. ಸುನೀಲ್ ಗೋಖಲೆ, ಕೆ.ಎಂ.ಸಿ.ಆರ್.ಐ.ದ ಪ್ರಾದ್ಯಾಪಕ ಡಾ. ಕೆ.ಎಫ್. ಕಮ್ಮಾರ, ಹಿರಿಯರಾದ ರಂಗಾ ಬದ್ದಿ ಪ್ರಾಚಾರ್ಯ ಡಾ ಮಹೇಶ್ ಡಿ. ಹೊರಕೇರಿ ರಂಗ ಕಲಾವಿದರು, ಶಿಕ್ಷಕಿ ವೀಣಾ ಅಠವಲೆ, ಶರ್ವಿಲ್ ಸೌರಭ ನರೆಂದ್ರ, ಸೌರಭ ಸುಭಾಸ್ ನರೇಂದ್ರ ,ವಿ. ಜಿ. ಪಾಟೀಲ್, ಭಾರತಿ ವಾಲಿ, ಸುದೀಪ್ ಖಾನಾಪುರಕರ, ಈರ್ಪ ನಾಯ್ಕರ್, ಮುಂತಾದವರು ಇದ್ದರು.
ಐವರ ಖದೀಮರ ಬಂಧನ, 67.93 ಲಕ್ಷ ಮೌಲ್ಯದ 416 ಗ್ರಾಂ ಚಿನ್ನಾಭರಣ ವಶಕ್ಕೆ: ಮಾಳಮಾರುತಿ ಪೊಲೀಸರ ಕಾರ್ಯಕ್ಕೆ ಮೆಚ್ಚುಗೆ
ತಾಯಿ, ಮಗ ನದಿಗೆ ಬಿದ್ದ ಪ್ರಕರಣ: ನಾಲ್ಕು ದಿನದ ಬಳಿಕ ಬಾಲಕನ ಶವ ಪತ್ತೆ : ಸತತ 4 ದಿನ ಕಾರ್ಯಾಚರಣೆ
ಜಮೀನಿನಲ್ಲಿ ವಂಚನೆ : ನ್ಯಾಯಕ್ಕಾಗಿ ಬಡ ರೈತನಿಂದ ಜಿಲ್ಲಾಧಿಕಾರಿಗಳ ಮೊರೆ : ಪೊಲೀಸರಿಂದ ನ್ಯಾಯ ಸಿಗದೆ ಅನ್ನದಾತನ ಅಳಲು
ಸಂಚಾರಕ್ಕೆ ಅಡತಡೆ : ರಸ್ತೆ ಬದಿಯ ಡಬ್ಬಾ ಅಂಗಡಿಗಳ ತೆರವು ಕಾರ್ಯಾಚರಣೆ : ಅಧಿಕಾರಿಗೆ ಅವಾಜ್ ಹಾಕಿದನಾ ಮುಖಂಡ?
ನೈಟಿ ಹಾಕುವ ವಿಷಯವಾಗಿ ಜಗಳ : ಪತ್ನಿಗೆ ಬೆಂಕಿ ಹಚ್ಚಿ ಹತ್ಯೆಗೆ ಯತ್ನಿಸಿದ ಪತಿ ಬಂಧನ
ಡಿಸಿಸಿ ಬ್ಯಾಂಕಿನ 7 ನಿರ್ದೇಶಕರನ್ನು ಅನರ್ಹ ಮಾಡಿ: ಆರ್.ಬಿಐಗೆ ಗಡಾದ ಪತ್ರ, ಇಲ್ಲವಾದಲ್ಲಿ ಕಾನೂನು ಹೋರಾಟ 