ಆರೋಗ್ಯರ ಕ್ಷಣೆಗೆ ಮದ್ಯವರ್ಜನ ಶಿಬಿರಗಳ ಸಂಖ್ಯೆ ಹೆಚ್ಚಿಸಿ: ನ್ಯಾಯವಾದಿ ಜಿ. ಆರ್‌. ಸೋನೆರ

ಆರೋಗ್ಯರ ಕ್ಷಣೆಗೆ ಮದ್ಯವರ್ಜನ ಶಿಬಿರಗಳ ಸಂಖ್ಯೆ ಹೆಚ್ಚಿಸಿ: ನ್ಯಾಯವಾದಿ ಜಿ. ಆರ್‌. ಸೋನೆರ Increase the number of alcohol abstinence camps for the sake of health: Advocate G. R. Sonera

ಲೋಕದರ್ಶನ ವರದಿ 

ಬೆಳಗಾವಿ 20 : ಕೆಟ್ಟ ಸ್ನೇಹಿತರ ಸಂಗವೇ ಕುಡಿತದ ಚಟಕ್ಕೆ ಮುಖ್ಯಕಾರಣ. ಕುಡಿತ ಬಿಡಿಸುವುದರೊಟ್ಟಿಗೆ ವ್ಯಸನ್ಕ್ರಿಗಳನ್ನು ಮಾನಸಿಕವಾಗಿ ಶಕ್ತಿವಂತರ್ಕ್ೃನ್ನಾಗಿ ಮಾಡುವುದು ಶಿಬಿರದ ಉದ್ದೇಶವಾಗಿದೆ. ಹೀಗಾಗಿ ಆರೋಗ್ಯರಕ್ಷಣೆಗೆ ಮದ್ಯವರ್ಜನ ಶಿಬಿರಗಳ ಸಂಖ್ಯೆ ಹೆಚ್ಚಿಸಿಕೊಳ್ಳಬೇಕು ಎಂದು ಅಧ್ಯಕ್ಷತೆಯ ವಹಿಸಿ, ನ್ಯಾಯವಾದಿ ಜಿ. ಆರ್‌. ಸೋನೆರ ಹೇಳಿದರು. 

ತಾಲೂಕಿನ ಸುಳೇಭಾವಿ ಗ್ರಾಮದ ಶಾಖಾಂಬರಿ ದೇವಸ್ತಾನದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿ ವೃದ್ಧಿಯೋಜನೆ, ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ವತಿಯಿಂದ 2071ನೇ ಮದ್ಯವರ್ಜನ ಶಿಬಿರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. 

ಕುಡಿತಇಂದು ಸಮಾಜಕ್ಕಂಟಿದ ವ್ಯಸನವಾಗಿದೆ. ಮಾದಕ ವಸ್ತು, ತಂಬಾಕು, ಮದ್ಯಸೇವನೆ ಇಂದು ಯುವಜನಾಂಗವನ್ನು ದೊಡ್ಡ ಸಂಖ್ಯೆಯಲ್ಲಿ ಅಧಃಪತನಕ್ಕೀಡು ಮಾಡುತ್ತಿದೆ. ದು್ಕ್ೃಮೆಯ ಹೆಚ್ಚಿನ ಪಾಲನ್ನು ದುಶ್ಚಟಗಳಿಗೆ ವ್ಯಯಿಸುತ್ತಿದ್ದಾರೆ. ಕುಡಿತಇಂದು ಸಾಮಾಜಿಕ ಪಿಡುಗಾಗಿ ಪರಿಣಮಿಸಿದೆ. 

ಪೂಜ್ಯರ ಮಾರ್ಗದರ್ಶನದಲ್ಲಿ ನಡೆಯುವ ಈ ಮದ್ಯವರ್ಜನ ಶಿಬಿರ ಕಾರ್ಯಕ್ರಮದಿಂದ ಎಷ್ಟೊಂದು ಕುಟುಂಬಗಳಿಗೆ ಉಪಯುಕ್ತವಾಗಿದೆ. ರಾಜ್ಯದಲ್ಲಿ ಲಕ್ಷಾಂತರ ಕುಟುಂಬ ಜೀವನಕ್ಕೆ ಹೊಸ ಜೀವನ ನೀಡಿದ್ದು, ಇಂತಹ ಶಿಬಿರ, ಶಿಬಿರಾರ್ಥಿಗಳು ಪ್ರಯೋಜನ ಪಡೆದು ಹೊಸ ಜೀವನಕ್ಕೆ ನಾಂದಿ ಹಾಡಬೇಕುಎಂದು ತಿಳಿಸಿದರು.