ಕಂಪ್ಲಿಯಲ್ಲಿ ಅನ್ನಭಾಗ್ಯ ಅಕ್ರಮ ಅಕ್ಕಿ ವಶ : ವಾಹನ ಹಾಗೂ ಅಕ್ಕಿ ಸಂಗ್ರಹಕಾರರ ಬಂಧನ
Annabhagya illegal rice seized in Kampli: Vehicle and rice collector arrested
ಲೋಕದರ್ಶನ ವರದಿ
ಕಂಪ್ಲಿ20: ಪಟ್ಟಣದಿಂದ ಗಂಗಾವತಿ ಕಡೆಗೆ ಸಾಗಿಸುತ್ತಿದ್ದ ಅನ್ನಭಾಗ್ಯ ಯೋಜನೆ ಹಲವಾರು ಮೂಟೆ ಅಕ್ಕಿ, ಸಾಗಾಣಿಕಿಗೆ ಬಳಸಿದ ಟ್ರ್ಯಾಕ್ಟರ್ ಹಾಗೂ ಅಕ್ಕಿ ಸಂಗ್ರಹಿಸಿ ಸಾಗಿಸುತ್ತಿದ್ದ ಇಬ್ಬರು ಮಹಿಳೆಯರನ್ನು ಪಟ್ಟಣದ ಗಂಗಾವತಿ ರಸ್ತೆಯ ಕಲ್ಮಠದ ಹತ್ತಿರ ಆಹಾರ ಇಲಾಖೆಯ ಆಹಾರ ನೀರೀಕ್ಷಕ ವಿರೂಪಾಕ್ಷಗೌಡ ಮತ್ತು 112 ಪೊಲೀಸರು ವಶಪಡಿಸಿಕೊಂಡಿದ್ದಾರೆ. ಶುಕ್ರವಾರ ಸಂಜೆ ಖಚಿತ ಮಾಹಿತಿ ಮೇರೆಗೆ ಕಂಪ್ಲಿ ಕಲ್ಮಠದ ಹತ್ತಿರ ಟ್ರ್ಯಾಕ್ಟರಿನಲ್ಲಿ ಅಕ್ರಮವಾಗಿ ಅನ್ನಭಾಗ್ಯ ಅಕ್ಕಿಯನ್ನು ಸಾಗಿಸುತ್ತಿರುವ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಟ್ರ್ಯಾಕ್ಟರಿನಲ್ಲಿ ಮುವತ್ತು ಅಧಿಕ ಮೂಟೆ ಅನ್ನಭಾಗ್ಯ ಅಕ್ಕಿಯನ್ನು ದುರುಗಮ್ಮ ಮತ್ತು ಮಾರೆಮ್ಮ ಎನ್ನುವವರು ಪಟ್ಟಣದ ಎಂಡಿ ಕ್ಯಾಂಪಿನಲ್ಲಿ ಸಂಗ್ರಹಿಸಿ ಗಂಗಾವತಿಗೆ ಸಾಗಿಸುವಾಗ ವಶಪಡಿಸಿಕೊಂಡಿದ್ದು, ಅಕ್ರಮ ಅನ್ನಭಾಗ್ಯ ಅಕ್ಕಿ, ವಾಹನ ಹಾಗೂ ಇಬ್ಬರು ಮಹಿಳೆಯರನ್ನು ವಶಪಡಿಸಿಕೊಂಡಿದ್ದು, ಕಂಪ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಸಂದರ್ಭದಲ್ಲಿ ಆಹಾರ ಇಲಾಖೆ ನೀರೀಕ್ಷಕ ವಿರುಪಾಕ್ಷಗೌಡ, ಪೊಲೀಸ್ ಸಿಬ್ಬಂದಿಗಳು ಇದ್ದರು.
ಸುಪ್ರೀಂ ಕೋರ್ಟ್ ನ್ಯಾಯವಾದಿ ಕಾತರಕಿ ಜೊತೆ ಕನ್ನಡ ಸಂಘಟನೆಗಳ ಸಂವಾದ ನಾಳೆ
ನಿಡಸೋಸಿ ರಸ್ತೆ ಅಗಲಿಕರಣಕ್ಕೆ ವೇಗ: ಭರದಿಂದ ಸಾಗಿದ ಮುಸ್ಲಿಂ ಸ್ಮಶಾನ ಆವರಣ ತೆರವು ಕಾರ್ಯಾಚರಣೆ; ಡಿಸಿ ಕಾರ್ಯಕ್ಕೆ ಮೆಚ್ವುಗೆ
ವಿಮೆ ಹಣಕ್ಕಾಗಿ ಪತಿ ಹತ್ಯೆ: ಪತ್ನಿ, ಎಫ್ಎಸ್ಎಲ್ ಅಧಿಕಾರಿ ಸೇರಿ 9 ಜನ ಬಂಧನ : ಎಸ್ ಪಿ ರಾಮರಾಜನ್
ಹಿಂಡಲಗಾ ಜೈಲಿನಿಂದ ಶಿವಾನಂದ ನಿಲಣ್ಣವರ ಬಿಡುಗಡೆ : ಎಲ್ಲದಕ್ಕು ಓಂ ನಮಃ ಶಿವಾಯ ಎಂದು ಪ್ರತಿಕ್ರಿಯೆ
ಕಲುಸಿತ ಆಹಾರ ಸೇವನೆ: 30 ವಿಧ್ಯಾರ್ಥಿಗಳು ಆಸ್ಪತ್ರೆಗೆ ಅಲೇದಾಟ, ಅಧಿಕಾರಿಗಳ ವಿರುದ್ಧ ತಡರಾತ್ರಿ ಪ್ರತಿಭಟನೆ
ಬಹುಕೋಟಿ ವಂಚನೆ ಪ್ರಕರಣ : ಶಿವಾನಂದ ನೀಲಣ್ಣವರಗೆ ಮಧ್ಯಂತರ ಜಾಮೀನು ಮಂಜೂರು 