ಬೆಂಗಳೂರು, ಜೂ12, ಮಾಜಿ ಪ್ರಿಯಕರನಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿದ್ದ ಯುವತಿ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ನಡೆದಿದೆ.ಎಂಜಿಯರಿಂಗ್ ವಿದ್ಯಾರ್ಥಿನಿ ಮೋನಿಕಾ (22) ಮೃತ ಯುವತಿ.ಜೂ. 7 ರಂದು ಮೋನಿಕಾ ಮೇಲೆ ಪ್ರಿಯಕರ ಹಲ್ಮೇಟ್ ನಿಂದ ಮಾರಣಾಂತಿಕ ಹಲ್ಲೆ ಮಾಡಿದ ಪರಿಣಾಮ ಆಕೆ ನಗರದ ಸಪ್ತಗಿರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಆದರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಕೊನೆಯುಸಿರೆಳೆದಿದ್ದಾಳೆ.
ಮೃತ ಮೋನಿಕಾ ಕಳೆದ 4 ವರ್ಷಗಳಿಂದ ಆರೋಪಿ ಬಬೀತ್‍ನನ್ನು ಪ್ರೀತಿಸುತ್ತಿದ್ದಳು. ನಂತರ ಆತನೊಂದಿಗೆ ಬ್ರೇಕ್ ಅಪ್ ಮಾಡಿಕೊಂಡಿದ್ದ ಆಕೆ ಕಳೆದ 5 ತಿಂಗಳಿನಿಂದ ರಾಹುಲ್‍ನನ್ನು ಪ್ರೀತಿಸುತ್ತಿದ್ದಳು. ಜೂ. 7 ರಂದು ರಾಹುಲ್ ಹುಟ್ಟುಹಬ್ಬದ್ದ ಹಿನ್ನಲೆಯಲ್ಲಿ ಅಂದು ಆಕೆ ಪಾರ್ಟಿಗೆಂದು ರಾಹುಲ್ ಮನೆಗೆ ಹೋಗಿದ್ದಳು. ಈ ಮಾಹಿತಿ ತಿಳಿದ ಆರೋಪಿ ಬಬೀತ್ ನೇರವಾಗಿ ರಾಹುಲ್ ಮನೆಗೆ ಹೋಗಿ ಗಲಾಟೆ ಮಾಡಿದ್ದನು. ನಂತರ ರಾಹುಲ್ ಮನೆಯಿಂದ ಮೋನಿಕಾಳನ್ನು ತಮ್ಮ ಮನೆಗೆ ಕರೆದುಕೊಂಡು ಹೋಗಿ ಹಲ್ಮೇಟ್ ನಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದನು. ನಂತರ ಆಕೆಯ ತಂದೆಗೆ ಫೋನ್ ಮಾಡಿ ನಿಮ್ಮ ಮಗಳಿಗೆ ಅಪಘಾತವಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗಿ ಎಂದು ತಿಳಿಸಿದ್ದನು.ನಂತರ ಪ್ರಜ್ಞೆ ತಪ್ಪಿದ್ದ ಸ್ಥಿತಿಯಲ್ಲಿದ್ದ ಮೋನಿಕಾಳನ್ನು ಆಕೆಯ ಪೋಷಕರು ಜೂನ್ 7 ರಂದು ಸಪ್ತಗಿರಿ ಆಸ್ಪತ್ರೆಗೆ ದಾಖಲಿಸಿದ್ದರು.ಈಗಾಗಲೇ ಬಬೀತ್ ಹಾಗೂ ರಾಹುಲ್ ಸೋಲದೇವನಹಳ್ಳಿ ಪೊಲೀಸರ ವಶದಲ್ಲಿದ್ದಾರೆ.