ಸದಾನಂದ ಮಜತಿ
ಬೆಳಗಾವಿ: ಅದೊಂದು ಕಾಲವಿತ್ತು. ಜನಸಾಮಾನ್ಯರು, ರೈತರು ಆಕಾಶದಲ್ಲಿ ವಿಮಾನ ಹೋಗುವುದನ್ನು ಕಂಡು ರೋಮಾಂಚನಗೊಳ್ಳುತ್ತಿದ್ದರು. ಜಿಲ್ಲೆಯಲ್ಲಿ 90ರ ದಶಕದಲ್ಲಿ ವಾರಕ್ಕೆರಡು ಬಾರಿ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಲೋಹದ ಹಕ್ಕಿ ನೋಡಲು ದೂರದ ಊರುಗಳಿಂದ ಜನರು ವಾಹನ ಮಾಡಿಕೊಂಡು ಬಂದು ದೂರದಲ್ಲಿ ನಿಂತು ಕಣ್ತುಂಬಿಕೊಳ್ಳುತ್ತಿದ್ದರು. ವಿಮಾನ ಪ್ರಯಾಣ ಸಚಿವರು, ಉದ್ಯಮಿಗಳು, ಶ್ರೀಮಂತರಿಗೆ ಮಾತ್ರ ಸೀಮಿತ ಎಂಬ ಕಾಲವದು.
ಆದರೆ, ಈಗ ಕಾಲ ಬದಲಾಗಿದೆ. ಆಕಾಶದಲ್ಲಿ ಹಾರುವ ಸಾಮಾನ್ಯರ ಕನಸು ನನಸಾಗುತ್ತಿದೆ. ಈ ಕನಸಿಗೆ ಬಲ ತುಂಬಿದ್ದು ಕೇಂದ್ರದ ಉಡಾನ್ ಯೋಜನೆ. ದೇಶೀಯ ವಿಮಾನಯಾನ ಕ್ಷೇತ್ರ ಬಲಪಡಿಸುವ ಹಾಗೂ ಸಾಮಾನ್ಯರಿಗೂ ವಿಮಾನ ಪ್ರಯಾಣಕ್ಕೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ 2009ರಲ್ಲಿ ಉಡಾನ್ (ಉಡೇ ದೇಶ ಕಾ ಆಮ್ ನಾಗರಿಕ) ಯೋಜನೆ ಜಾರಿಗೊಳಿಸಲಾಯಿತು. ಎರಡನೇ ದಜರ್ೆ ನಗರಗಳಲ್ಲಿ ನಿಲ್ದಾಣ ಅಭಿವೃದ್ಧಿಪಡಿಸಿ ಅಗ್ಗದ ದರದಲ್ಲಿ ದೇಶದ ಪ್ರಮುಖ ನಗರಗಳು, ಪ್ರವಾಸಿ ತಾಣಗಳಿಗೆ ವಿಮಾನ ಸೇವೆ ಒದಗಿಸಲು ಆರಂಭಿಸಿದ ಪರಿಣಾಮ ದೇಶೀಯ ವಾಯುಯಾನ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ಉಂಟಾಗಿದೆ.
ವಿವಿಧ ಖಾಸಗಿ ಕಂಪನಿಗಳು ರಿಯಾಯಿತಿ ದರದಲ್ಲಿ ವಿಮಾನ ಸೇವೆ ಒದಗಿಸುತ್ತಿರುವುದರಿಂದ ಸಕರ್ಾರಿ, ಖಾಸಗಿ ನೌಕರರು, ರೈತರು, ಸಾಮಾನ್ಯರು ಸಹ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಒದಗಿಬಂದಿದೆ.
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಅದೃಷ್ಟ: ಉಡಾನ್ 3 ಯೋಜನೆ ಜಾರಿ ಬಳಿಕ ಸಾಂಬ್ರಾ ವಿಮಾನ ನಿಲ್ದಾಣದ ಅದೃಷ್ಟ ಖುಲಾಯಿಸಿದೆ. 90 ದಶಕದಲ್ಲಿ ವಾರದಲ್ಲಿ ಎರಡು ಬಾರಿ ಬೆಂಗಳೂರಿಗೆ ಕಾಯರ್ಾಚರಣೆ ನಡೆಸುತ್ತಿದ್ದ ಕಿಂಗ್ಫಿಶರ್ ಏರ್ಲೈನ್ಸ್ ಹಾರಾಟ ನಿಲ್ಲಿಸಿದ ಬಳಿಕ ಬಹುತೇಕ ವಿಮಾನ ಸಂಚಾರ ಸ್ಥಗಿತಗೊಂಡಿತ್ತು. ಉಡಾನ್ 3 ಯೋಜನೆ ಬಳಿಕ ಬಳಿಕ ಸಾಂಬ್ರಾ ವಿಮಾನ ನಿಲ್ದಾಣದ ಅದೃಷ್ಟವೇ ಬದಲಾಗಿದೆ.
ಪೈಪೋಟಿಗಿಳಿದ ಏರಲೈನ್ಸ್ ಕಂಪನಿಗಳು: ಬೆಳಗಾವಿಯಿಂದ ವಿಮಾನ ಸೇವೆ ಆರಂಭಿಸಲು ಏರ್ಲೈನ್ಸ್ ಕಂಪನಿಗಳು ನಾ ಮುಂದು ತಾ ಮುಂದು ಎಂದು ಪೈಪೋಟಿಗಿಳಿದಿವೆ. ಸ್ಪೈಸ್ಜೆಟ್, ಇಂಡಿಗೋ, ಅಲಿಯನ್ಸ್ ಟ್ರೂಜೆಟ್, ಸ್ಟಾರ್ ಏರ್ ಸೇರಿದಂತೆ 6 ಏರ್ಲೈನ್ಸ್ ಕಂಪನಿಗಳು ಈಗಾಗಲೇ ಸೇವೆ ಆರಂಭಿಸಿವೆ. ಸದ್ಯ 14 ವಿಮಾನಗಳು ಕಾಯರ್ಾಚರಣೆ ಆರಂಭಿಸಿವೆ. 10 ವಿಮಾನಗಳು ಉಡಾನ್ 3 ಯೋಜನೆಯಡಿ, 4 ವಿಮಾನಗಳು ಸಾಮಾನ್ಯ ಸೇವೆಯಡಿ ಕಾಯರ್ಾಚರಣೆ ನಡೆಸುತ್ತಿವೆ.
ಅಲೈಯನ್ಸ್ ಏರ್ ಬೆಂಗಳೂರು, ಪುಣೆಗೆ, ಇಂಡಿಗೋ ಕಂಪನಿ ಬೆಂಗಳೂರು, ಹೈದರಾಬಾದ್ಗೆ, ಸ್ಪೈಸ್ಜೆಟ್ ಬೆಂಗಳೂರು, ಹೈದರಾಬಾದ್, ಮುಂಬಯಿಗೆ, ಸ್ಟಾರ್ ಏರ್ ಅಹಮದಾಬಾದ್, ಬೆಂಗಳೂರು, ಇಂದೋರ, ಮುಂಬಯಿಗೆ ಹಾಗೂ ಟ್ರೂಜೆಟ್ ಕಂಪನಿ ಹೆದರಾಬಾದ್, ಮೈಸೂರು, ತಿರುಪತಿ ನಗರಗಳಿಗೆ ಬೆಳಗಾವಿಯಿಂದ ನೇರವಾಗಿ ವಿಮಾನ ಸೇವೆ ಒದಗಿಸುತ್ತಿವೆ.
ಸ್ಟಾರ್ ಏರ್ ಬರುವ ಏಪ್ರಿಲ್ ವೇಳೆಗೆ ಜೈಪುರ, ಜೋಧಪುರ, ನಾಗ್ಪುರ, ನಾಶಿಕ ಮತ್ತು ಸೂರತ್ ಸೇರಿ 9 ನಗರಗಳಿಗೆ ನೇರವಾಗಿ ವಿಮಾನ ಸೇವೆ ಆರಂಭಿಸುವುದಾಗಿ ಘೋಷಿಸಿದೆ. ಸದ್ಯ ಪ್ರತಿನಿತ್ಯ 14 ವಿಮಾನಗಳು ಬೆಳಗಾವಿ ವಿಮಾನ ನಿಲ್ದಾಣದಲ್ಲಿ ಇಳಿದು ದೇಶದ ವಿವಿಧ ನಗರಗಳಿಗೆ ಪ್ರಯಾಣ ಬೆಳೆಸುತ್ತವೆ.