ಉಪ ಮುಖ್ಯಮಂತ್ರಿ ಕಾರಜೋಳರಿಂದ ಯಾತ್ರಿ ನಿವಾಸ ಲೋಕಾರ್ಪಣೆ

ಬಾಗಲಕೋಟೆ: ಐತಿಹಾಸಿಕ ಪ್ರಸಿದ್ದ ತುಳಸಿಗೇರಿ ಆಂಜನೇಯ ದೇವಸ್ಥಾನದ ಹತ್ತಿರ ಮುಜರಾಯಿ ಇಲಾಖೆಯಿಂದ 1 ಕೋಟಿ ರೂ.ಗಳ ವೆಚ್ಚದಲ್ಲಿ ನಿಮರ್ಿಸಲಾದ ಯಾತ್ರಿ ನಿವಾಸವನ್ನು  ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಶನಿವಾರ ಲೋಕಾರ್ಪಣೆ ಮಾಡಿದರು.

ತುಳಸಿಗೇರಿಯಲ್ಲಿ ಜಿಲ್ಲಾಡಳಿತ, ಮುಜರಾಯಿ ಇಲಾಖೆ ಸಹಯೋಗದಲ್ಲಿ ಹಮ್ಮಿಕೊಂಡ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯ ಹಾಗೂ ಹೊರ ರಾಜ್ಯದಿಂದ ತುಳಸಿಗೇರಿ ಆಂಜನೇಯನ ದೇವಸ್ಥಾನಕ್ಕೆ ಸಾಕಷ್ಟು ಭಕ್ತಾಧಿಗಳು ಬರುತ್ತಿರುವದರಿಂದ ಅವರಿಗೆ ಅನುಕೂಲವಾಗುವ ದೃಷ್ಠಿಯಿಂದ ಈ ಯಾತ್ರಿ ನಿವಾಸ ನಿಮರ್ಿಸಲಾಗಿದೆ. ಇಂದು ಲೋಕಾರ್ಪಣೆಗೊಳಿಸಲಾಗಿದ್ದು, ಭಕ್ತರು ಇದರ ಸದುಪಯೋಗ ಪಡೆದುಕೊಳ್ಳಲು ಕರೆ ನೀಡಿದರು.

  ಮಾಜಿ ಶಾಸಕರಾದ ಪಿ.ಎಚ್.ಪೂಜಾರ ಅವರು ತಮ್ಮ ತಾಯಿಯ ಹೆಸರಿನಲ್ಲಿ ಭೂದಾನ ಮಾಡಿ ಈ ಯಾತ್ರಿ ನಿವಾಸ ನಿಮರ್ಾಣವಾಗಲಿಕ್ಕೆ ಕಾರಣೀಕರ್ತರಾಗಿದ್ದಾರೆ. ಸರಕಾರದಿಂದ ಹಣ ಕೊಡುತ್ತೇವೆ ಎಂದರು ಜಾಗ ಇರುವುದಿಲ್ಲ. ಆದರೆ ಪಿ.ಎಚ್.ಪೂಜಾರ ಅವರು ತಮ್ಮ ಸ್ವಂತ ಜಾಗವನ್ನು ಯಾತ್ರಿ ನಿವಾಸಕ್ಕೆ ಬಿಟ್ಟುಕೊಟ್ಟಿದ್ದಾರೆ. ಅವರ ಈ ಕಾರ್ಯವನ್ನು ಶ್ಲಾಘಿಸಿದರು. 

ಸಮಾಜ ಕಲ್ಯಾಣ ಇಲಾಖೆಯಿಂದ ರಾಜ್ಯದಲ್ಲಿ 6900 ಸಮುದಾಯ ಭವನ ನಿಮರ್ಾಣಕ್ಕೆ ಮಂಜೂರು ಮಾಡಲಾಗಿದೆ. ಈ ಪೈಕಿ 2700 ಸಮುದಾಯ ಭವನಗಳು ಮಾತ್ರ ನಿಮರ್ಾಣಗೊಂಡಿವೆ. ದೇವಸ್ಥಾನದ ಆವರಣದಲ್ಲಿ ನಿಮರ್ಿಸಬೇಕೆಂದರೆ ಜಾಗದ ಕೊರತೆ ಕಾರಣವಾಗಿದೆ ಎಂದರು.

 ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿ ಬೇರೆ ಬೇರೆ ಕಡೆಗಳಿಂದ ಬರುತ್ತಿರುವ ಭಕ್ತಾಧಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆಯಿಂದ ನಿಮರ್ಿಸಲಾದ ಯಾತ್ರಿ ನಿವಾಸಕ್ಕೆ ಮಾಜಿ ಶಾಸಕ ಪಿ.ಎಚ್.ಪೂಜಾರ ಭೂದಾನ ಮಾಡಿದ ಕೊಡುಗೆ ಅಪಾರವಾದುದು ಎಂದರು. ಯಾತ್ರಿ ನಿವಾಸಕ್ಕೆ ಕಳೆದ 2012-13ನೇ ಸಾಲಿನಲ್ಲಿ ಮಂಜೂರಾತಿ ನೀಡಲಾಗುದ್ದು, ಇಂದು ಪೂರ್ಣಗೊಂಡು ಭಕ್ತರ ಅನುಕೂಲಕ್ಕಾಗಿ ಲೋಕಾರ್ಪಣೆಗೊಳಿಸಲಾಗಿದೆ ಎಂದರು.

  ಭೂದಾನ ಮಾಡಿದ ಮಾಜಿ ಶಾಸಕ ಪಿ.ಎಚ್.ಪೂಜಾರ ಮಾತನಾಡಿ 3 ಎಕರೆ ವಿಸ್ತಾರವಾದ ಜಾಗದಲ್ಲಿ ಆಂಜನೇಯನ ದೇವಸ್ಥಾನವಿದೆ. ಈ ಆವರಣದಲ್ಲಿ ಯಾತ್ರಿ ನಿವಾಸ ನಿಮರ್ಿಸಿದರೆ ಜಾಗದ ಕೊರತೆ ಉಂಟಾಗುವುದೆಂಬ ಉದ್ದೇಶದಿಂದ ನಮ್ಮ ತಾಯಿಯವರ ಇಚ್ಚೆಯಂತೆ ಭೂದಾನ ಮಾಡಲು ಮುಂದಾಗಿರುವುದಾಗಿ ತಿಳಿಸಿದರು. ದೇವಸ್ಥಾನ ಆಸ್ತಿಯನ್ನು ರಕ್ಷಿಸುವ ಕೆಲಸವಾಗಬೇಕು. ದೇವಸ್ಥಾನಕ್ಕೆ ಗ್ರಾಮ ಪಂಚಾಯತಿ, ತಾಲೂಕಾ ಪಂಚಾಯತಿ ಹಾಗೂ ಇತರೆ ಇಲಾಖೆಯಿಂದ ಹೆಚ್ಚಿನ ಅನುದಾನ ನೀಡಿ ಅಭಿವೃಧ್ದಿ ಪಡೆಸುವ ಕೆಲಸವಾಗಬೇಕೆಂದರು.

ಕಾರ್ಯಕ್ರಮದಲ್ಲಿ ತಾಲೂಕಾ ಪಂಚಾಯತ ಅಧ್ಯಕ್ಷ ಚನ್ನಗೌಡ ಪರನಗೌಡರ, ಜಿ.ಪಂ ಸದಸ್ಯ ಹೂವಪ್ಪ ರಾಠೋಡ, ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಉಪವಿಭಾಗಾಧಿಕಾರಿ ಎಂ.ಗಂಗಪ್ಪ, ತಹಶೀಲ್ದಾರ ಗುರುಬಸಯ್ಯ ಹಿರೇಮಠ ಸೇರಿದಂತೆ ಇತರರು ಉಪಸ್ಥಿತರಿದ್ದರು