ಪಣಜಿ , ಮಾರ್ಚ್ 28, ಕೋವಿಡ್ -19 ಪರೀಕ್ಷೆಗಾಗಿ 60 ಮಾದರಿಗಳನ್ನು ಹೊತ್ತ ಭಾರತೀಯ ನೌಕಾಪಡೆಯ ಡಾರ್ನಿಯರ್ ವಿಮಾನವು ಐಎನ್‌ಎಸ್ ಹನ್ಸಾದಿಂದ ಪುಣೆಗೆ ಶುಕ್ರವಾರ ಹೊರಟಿದೆ .ನೌಕಾಪಡೆಯ ಹೇಳಿಕೆಯ ಪ್ರಕಾರ, ಮಾದರಿಗಳನ್ನು ಗೋವಾ ರಾಜ್ಯ ಆರೋಗ್ಯ ಇಲಾಖೆಯ ಲ್ಯಾಬ್ ತಂತ್ರಜ್ಞರು ವಿಮಾನದ ಮೂಲಕ ಸಾಗಿಸಿದ್ದಾರೆ. ಎನ್ಐವಿ ಪುಣೆಯಲ್ಲಿನ ಕೋವಿಡ್ ತರಬೇತಿಗಾಗಿ ಗೋವಾನ್ ವೈದ್ಯಕೀಯ ತಂಡ ಈ ಮೊದಲು ಇದೆ 25, ರಂದು ಪುಣೆಗೆ ವಿಮಾನದಲ್ಲಿ ಹೋಗಿ ನಂತರ 26 ರಂದು ಮತ್ತೊಂದು ವಿಮಾನದ ಮೂಲಕ ಹಿಂತಿರುಗಿತ್ತು .