ಬಿಜೆಪಿಯಿಂದ ಪಾರದರ್ಶಕ ರಾಜಕಾರಣ : ರಾಮ್ ಮಾಧವ

ಬೆಳಗಾವಿ 2: ಭಾರತೀಯ ಜನತಾಪಾಟರ್ಿ ದೇಶದಲ್ಲಿ ಪಾರದರ್ಶಕ ರಾಜಕಾರಣದ ಮೂಲಕ ಭ್ರಷ್ಠಾಚಾರ ರಹಿತ ಭಾರತ, ಒಗ್ಗಟ್ಟಿನ ಭಾರತ ಮತ್ತು ಜಾತ್ಯತೀತ ಭಾರತವನ್ನು ನಿಮರ್ಾಣ ಮಾಡಿದೆ ಎಂದು ಬಿಜೆಪಿಯ ರಾಷ್ಟ್ರೀಯ ಪ್ರಧಾನ ಕಾರ್ಯದಶರ್ಿ ರಾಮ್ ಮಾಧವ ಹೇಳಿದ್ದಾರೆ. 

ಬೆಳಗಾವಿಯಲ್ಲಿ ಪ್ರಬುದ್ಧ ಭಾರತ ಆಯೋಜಿಸಿದ್ದ ಎರಡು ದಿನಗಳ ಸ್ಟೆಪ್ -2018 ಸಮಾವೇಶದ ಮುಕ್ತ ಸಂವಾದ ಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು.  

ಭ್ರಷ್ಟ ರಾಜಕಾರಣ, ಕುಟುಂಬ ರಾಜಕಾರಣ, ಪಾರದರ್ಶಕತೆ ಇಲ್ಲದ ರಾಜಕಾರಣದಿಂದ ಭಾರತ ನಲುಗಿ ಹೋಗಿತ್ತು. ಈಗ ಭ್ರಷ್ಟರನ್ನು ಕೆಳ ಹಂತದ ಬದಲು ಮೇಲಿನ ಹಂತದಿಂದಲೇ ಪತ್ತೆ ಮಾಡಲಾಗುತ್ತಿದೆ. ದೇಶದ ಅತ್ಯಂತ ಕೊನೆಯಲ್ಲಿರು ಮನುಷ್ಯನೂ ಖುಷಿಯಿಂದ ಬದುಕುವಂತೆ ಮಾಡುವುದೇ ನಮ್ಮ ಗುರಿ. ಇದು ನಿಜವಾದ ಅಭಿವೃದ್ಧಿ ಎಂದ ಅವರು, ನಕ್ಸಲ್, ಮಾವೋ ವಾದಿಗಳನ್ನು ಹಳ್ಳಿಯಲ್ಲಿರಲಿ, ನಗರದಲ್ಲಿರಲಿ ಪತ್ತೆ ಮಾಡಿ ಶಿಕ್ಷಿಸಲಾಗುವುದು. ಅವರ ಸ್ಥಾನ ಎಂತದ್ದೇ ಇದ್ದರೂ ಬಿಡುವುದಿಲ್ಲ. ಜೈಲಿಗೆ ಕಳಿಸುವುದೇ ನಮ್ಮ ಗುರಿ. ಕೊನೆಯ ಭಯೋತ್ಪಾದಕ ಹತನಾಗುವವರೆಗೂ ನಮ್ಮ ಹೋರಾಟ ನಲ್ಲುವುದಿಲ್ಲ. ದಶದ ಂತರಿಕ ಮತ್ತು ಬಾಹ್ಯ ಭದ್ರತೆಗಳೆರಡಕ್ಕೂ ಆದ್ಯತೆ ನೀಡಲಗುವುದು ಎಂದು ಹೇಳಿದರು.  

ಡಿ ಮೊನಿಟೈಸೇಶನ್ ನಿಂದ ಸರಕಾರದ ಆದಾಯ ಹೆಚ್ಚಾಗಿದೆ. ತೆರಿಗೆ ಕಟ್ಟುವವರ ಸಂಖ್ಯೆ ಹೆಚ್ಚಿದೆ. ದೇಶದ ಬದ್ರತೆ ವ್ಯವಸ್ಥೆ ಬಲಗೊಂಡಿದೆ. ವಿಶ್ವದ 3ನೇ ಆಥರ್ಿಕ ಬಲಾಢ್ಯ ರಾಷ್ಟ್ರವಾಗಿ ಭಾರತ ಬೆಳವಣಿಗೆ ಹೊಂದಿದೆ ಎಂದ ಅವರು, ನಾಗರಿಕರನ್ನು ಕೇವಲ ಮತದಾರರನನಾಗಿ ನೋಡುವ ಬದಲಿ ದೇಶದ ಹಕ್ಕುದಾರರಾನ್ನಾಗಿ ಪರಿಗಣಿಸಲಾಗುತ್ತಿದೆ ಎಂದರು.  

ಮತ್ತೆ ಮೋದಿ ನಿಶ್ಚಿತ 

2019ರಲ್ಲಿ ಮೋದಿ ಸರಕಾರ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ. 2014ರ ಚುನಾವಣೆಯಲ್ಲಿ ಮೋದಿ ಹೆಸರು, ಬಿಜೆಪಿ ಸಂಘಟನೆ ಮತ್ತು ವಿರೋಧಿಗಳ ಜನವಿರೋಧಿ ನೀತಿ ನಮ್ಮ ಗೆಲುವಿಗೆ ಕಾರಣವಾಗಿತ್ತು. ಈ ಬಾರಿ ಇವೆಲ್ಲವುಗಳೊಂದಿಗೆ 5 ವರ್ಷದ ಮೋದಿ ಸರಕಾರದ ಅತ್ಯುತ್ತಮ ಆಡಳಿತವೂ ಸೇರಿಕೊಂಡಿದೆ ಎಂದು ರಾಮ್ ಮಾಧವ ಹೇಳಿದರು.  

2024ರ ಹೊತ್ತಿಗೆ ದೇಶದಲ್ಲಿ ಒಂದೇ ದೇಶ ಒಂದೇ ಚುನಾವಣೆ ಪದ್ಧತಿ ಜಾರಿಯಾಗಬಹುದು. ಇದಕ್ಕೆ ಎಲ್ಲ ಪಕ್ಷಗಳೂ ಒಪ್ಪಬೇಕು. ಮಧ್ಯದಲ್ಲಿ ಸರಕಾರಗಳು ಬಿದ್ದರೂ ಆಗ ನಡೆಯುವ ಚುನಾವಣೆಯಲ್ಲಿ ಅಧಿಕಾರಕ್ಕೆ ಬರುವ ಸರಕಾರದ ಅವಧಿ ಮುಂದಿನ ಸಾರ್ವತ್ರಿಕ ಚುನಾವಣೆಯವರೆಗಷ್ಟೆಇಬೇಕು. ಈ ದಿಸೆಯಲ್ಲಿ ಕಾನೂನು ಜಾರಿಗೆ ಬರಬೇಕು ಎಂದು ಅವರು ಹೇಳಿದರು.  

ರಜತ್ ಸೇಥಿ ಗೋಷ್ಠಿ ಸಂಯೋಜಿಸಿದರು.