ಯುವ ಜನರಲ್ಲಿ ಕಲಾ ಪ್ರಕಾರಗಳ ವರ್ಗಾವಣೆ ಅಗತ್ಯ: ಸೊಲಬಕ್ಕನವರ

ಬಾಗಲಕೋಟೆ: ಯುವಕರಿಗೆ ಲಲಿತ ಕಲೆಗಳ ಮುಖಾಂತರ ಉದ್ಯೋಗ ಸೃಷ್ಠಿಸುತ್ತಿರುವ ರೀತಿಯಲ್ಲಿ ಕಲಾ ಪ್ರಕಾರಗಳನ್ನು ವಗರ್ಾಯಿಸುವ ಅಗತ್ಯವಿದೆ ಎಂದು ಕನರ್ಾಟಕ ಬಯಲಾಟ ಅಕಾಡೆಮಿಯ ಅಧ್ಯಕ್ಷ ಡಾ.ಟಿ.ಬಿ.ಸೊಲಬಕ್ಕನವರ ಹೇಳಿದರು.

ನವನಗರದ ಕಲಾಭವನದ ಸಾಂಸ್ಕೃತಿಕ ಸಮುಚ್ಚಯದಲ್ಲಿರುವ ಸ್ಮೃತಿ ಮಂದಿರದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು ಇಂದಿನ ಯುವಕರು ಹಲವು ವಿಷಯಗಳಲ್ಲಿ ಪರಿಣಿತಿಹೊಂದಿದವರಾಗಿದ್ದು, ಅವರಿಗೂ ಸಹ ಸಾಮಾಜಿಕ ಜವಾಬ್ದಾರಿಯ ಹೊರೆಯನ್ನು ವಗರ್ಾಯಿಸುವುದು ಅಗತ್ಯವಾಗಿದೆ. ಬಯಲಾಟ ಕಲೆಯನ್ನು ಮೂಲ ಸಂಗತಿಗಳಿಗೆ ದಕ್ಕೆಯಾಗದಂತೆ ಪರಿಷ್ಕರಣೆ ಮಾಡಿ ಉಳಿಸಿ ಬೆಳೆಸುವ ಕಾರ್ಯ ಅಕಾಡೆಮಿಯದ್ದಾಗಿದೆ ಎಂದರು.

ಜಾನಪದ ಕಲಾ ಪ್ರಕಾರಗಳು ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಹೆಚ್ಚಾಗಿ ಹಿರಿಯರು, ಶಿಕ್ಷಣದ ಕೊರತೆ ಇರುವವರು, ಸಮಕಾಲಿನ ಅರಿವಿನ ಕೊರತೆ ಇರುವ ಕಲಾವಿದರನ್ನು ನಾವು ಕಾಣುತ್ತಿದ್ದೇವೆ. ಹೆಚ್ಚಿನ ಜಾನಪದ ಕಲಾವಿದರು ಆದಾಯ ರಹಿತರಾಗಿದ್ದಾರೆ. ಕಲೆ ಬದುಕಿನ ಭಾಗವಾದಾಗ ಮಾತ್ರ ಕಲಾವಿದ ಸ್ವಾವಲಂಭಿಯಾಗುತ್ತಾನೆ. ಜಾನಪದ 7 ಕಲೆಗಳನ್ನು ಒಳಗೊಂಡ ಕಲಾಸಂಗಮವಾಗಿದ್ದು, ಇದನ್ನು ಉಳಿಸಿ ಬೆಳೆಸುವ ಕೆಲವಾಗಬೇಕಾಗಿದೆ ಎಂದರು.

ಪ್ರಾಥಮಿಕ, ಮಾಧ್ಯಮಿಕ ಶಾಲೆಗಳಲ್ಲಿ ಮಕ್ಕಳನ್ನು ರಾಷ್ಟ್ರೀಯ ಪ್ರಜೆಗಳನ್ನಾಗಿ ಮಾಡುವ ಜವಾಬ್ದಾರಿ ಹೊತ್ತಿರುವ ಶಿಕ್ಷಕರಿಗೆ ಜಾನಪದ ವಿಶ್ವವಿದ್ಯಾಲಯಗಳ ಹಾಗೂ ಅಕಾಡೆಮಿಗಳ ಮುಖಾಂತರ ಕನ್ನಡ ಸಂಸ್ಕೃತಿಯ ಸಮಾನಾಂತರ ಶಕ್ತಿಗಳ ಮುಖಾಂತರ ತರಬೇತಿ ನೀಡಿ ಮಕ್ಕಳಲ್ಲಿ ಜಾನಪದ ಕಲಾ ಪ್ರಕಾರಗಳನ್ನು ವಗರ್ಾಯಿಸಿ ಮಕ್ಕಳಲ್ಲಿ ಜಾನಪದ ಪ್ರಕಾರಗಳ ಬಗ್ಗೆ ಅಭಿರುಚಿಯನ್ನು ಹೆಚ್ಚಿಸುವ ಕಾರ್ಯ ಚಿಂತನೆಯಲ್ಲಿದೆ ಎಂದು ತಿಳಿಸಿದರು.

ಬಯುಲಾಟ ಮತ್ತು ಲಲಿತಕಲೆ ಸಂಯಮವಾಗಿದ್ದು, ಚಿತ್ರ, ಶಿಲ್ಪ, ವಾಸ್ತು ಶಿಲ್ಪ, ಸಂಗೀತ, ಸಾಹಿತ್ಯ, ನೃತ್ಯ ಹಾಗೂ ನಾಟಕ ಈ ಪ್ರಕಾರಗಳು ಏಳು ಕಲೆಗಳ ಸಂಗಮವಾಗಿದೆ. ಶಾಲೆಗಳಲ್ಲಿ ಈಗಾಗಲೇ ಜಾನಪದ ವಿಶ್ವವಿದ್ಯಾಲಯ ಬಯಲಾಟದ ಮೇಲೆ ತರಬೇತಿ ನೀಡಲಾಗುತ್ತಿದ್ದು, ಡಪ್ಲೋಮಾ, ಡಿಗ್ರಿ ಪ್ರಮಾಣ ಪತ್ರಗಳನ್ನು ನೀಡುತ್ತಿವೆ. ಇಂಥ ವಿದ್ಯಾವಂತ ಜಾನಪದರನ್ನು ಶಿಕ್ಷಣ ಇಲಾಖೆಯು ಶಾಲೆಗಳಲ್ಲಿ ಸಂಗೀತ ಶಿಕ್ಷಕ, ನಾಟಕ ಶಿಕ್ಷಕ, ಪಿಇ ಶಿಕ್ಷಕರಂತಹ ಜಾನಪದ ಶಿಕ್ಷಕರನ್ನು ನೇಮಕ ಮಾಡುವ ಮುಖಾಂತರ ಯುವಕರನ್ನು ತಯಾರಿಸಿದಲ್ಲಿ ಇಂದಿನ ಮಕ್ಕಳೇ ಮುಂದಿನ ನಾಗರಿಕರು, ಸುಸಂಸ್ಕೃತ ಸುಶಿಕ್ಷಿತ ಪ್ರಜೆಗಳಾಗಬಲ್ಲರೆಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಕನರ್ಾಟಕ ಬಯಲಾಟ ಅಕಾಡೆಮಿಯ ರಜಿಸ್ಟ್ರಾರ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಪ್ರಭಾರಿ ಸಹಾಯಕ ನಿದರ್ೇಶಕ ಬಸವರಾಜ ಶಿರೂರ ಸೇರಿದಂತೆ ಅಕಾಡಮಿಯ ಸರ್ವ ಸದಸ್ಯರು ಉಪಸ್ಥಿತರಿದ್ದರು.