ಚೆನ್ನೈ, ನ 9: ಶಬರಿಮಲೆ ಯಾತ್ರಿಕರ ಅನುಕೂಲಕ್ಕಾಗಿ ದಕ್ಷಿಣ ರೈಲ್ವೆ ಚೆನ್ನೈನಿಂದ ನವೆಂಬರ್ ಮತ್ತು ಡಿಸೆಂಬರ್ ಅವಧಿಯಲ್ಲಿ ವಿಶೇಷ ರೈಲುಗಳನ್ನು ಓಡಿಸಲಿದೆ. ಚೆನ್ನೈ- ತಿರುವನಂತಪುರಂ ಮತ್ತು ಚೆನ್ನೈ-ಕೊಲ್ಲಂ ನಡುವೆ ನವೆಂಬರ್ ಮಧ್ಯಭಾಗದಿಂದ ದಿಂದ ಡಿಸೆಂಬರ್ ಮೊದಲ ವಾರದವರೆಗೆ ಈ ರೈಲುಗಳು ಸಂಚರಿಸಲಿವೆ. ದಕ್ಷಿಣ ರೈಲ್ವೆ ಚೆನ್ನೈ ಮತ್ತು ತಿರುವನಂತಪುರಂ ನಡುವೆ ಎರಡು ವಿಶೇಷ ರೈಲು ಸಂಚಾರ ಮಾಡಲಿದೆ. ಈ ರೈಲುಗಳು ನ.21 ಮತ್ತು 28 ರಂದು ಚೆನ್ನೈ ಸೆಂಟ್ರಲ್ ನಿಂದ ಹೊರಡಲಿದ್ದು, ನ.22 ಮತ್ತು 29ರಂದು ಬೆಳಗ್ಗೆ ತಿರುವನಂತಪುರ ತಲುಪಲಿವೆ. ವಿಶೇಷ ರೈಲುಗಳು ಅರಕ್ಕೋಣಂ, ಕಟ್ಪಾಡಿ, ಜೋಲಾರ್ ಪೇಟ್ , ಸೇಲಂ, ಕೊಯಮತ್ತೂರು ಮತ್ತು ಪಾಲಕ್ಕಾಡಿ ನಲ್ಲಿ ನಿಲುಗಡೆ ಮಾಡಲಿವೆ. ಇನ್ನು ತಿರುವನಂತಪುರದಿಂದ ಇದೇ .20, 27ರಂದು ಮಧ್ಯಾಹ್ನ 3.45ಕ್ಕೆ ಹೊರಡುವ ರೈಲುಗಳು 21, 28ರಂದು ಬೆಳಿಗ್ಗೆ ಚೆನ್ನೈಸೆಂಟ್ರಲ್ ತಲುಪಲಿದ್ದು . ಚೆನ್ನೈ ಮತ್ತು ಕೊಲ್ಲಂ ನಡುವೆ ಮೂರು ವಿಶೇಷ ರೈಲು ಸಂಚರಿಸಲಿವೆ ಎಂದೂ ರೈಲ್ವೆ ಇಲಾಖೆ ಪ್ರಕಟಣೆ ತಿಳಿಸಿದೆ.