ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮ

ಲೋಕದರ್ಶನ ವರದಿ

ಬೆಳಗಾವಿ 27: ದಿ. 26 ಬುಧವಾರದಂದು ಸಂಚಾರಿ ನಿಯಮಗಳ ಜಾಗೃತಿಗಾಗಿ ಬೆಳಗಾವಿಯ ಜೈನ ಎಂಜನೀಯರಿಂಗ ಕಾಲೇಜಿನ ಐಇಇಇ ವಿಭಾಗಗಳ ವಿದ್ಯಾರ್ಥಿಗಳು ಹಾಗೂ ಇಕೋದ ಇಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ವಿಭಾಗದವರ ಸಹಯೋಗದೊಂದಿಗೆ ಒಂದು ಬೃಹತ್ ಮೆರಾಕಥಾನವನ್ನು ಏರ್ಪಡಿಸಲಾಗಿತ್ತು. 

ಇಲೆಕ್ಟ್ರನಿಕ್ಸ್ ಹಾಗೂ ಸಂಹವನ ವಿಭಾಗಗಳ ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಕೈಯಲ್ಲಿ ಜಾಹಿರಾತು ಪಟಗಳನ್ನು ಹಿಡಿದುಕೊಂಡು, ರಸ್ತೆಗಳಲ್ಲಿ ಬಿದೀ ನಾಟಕಗಳನ್ನು ಪ್ರದರ್ಶಿಸುತ್ತ, ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ ಧರಿಸದೇ ವಾಹನಗಳನ್ನು ನಡೆಸುವುದರಿಂದಾಗುವ ಪರಿಣಾಮಗಳನ್ನು ವಿವರಿಸುತ್ತಾ ಸಾಗುತ್ತಿರುವ ಈ ತಂಡ 1500 ಕ್ಕಿಂತ ಹೆಚ್ಚು ಸಂಖ್ಯೆಯ ಜನ ಸಂದಣಿಯ ಮುಂದೆ ಪ್ರದರ್ಶನ ನಡೆಯಿಸಿದರು.

ಪ್ರಾಂಶುಪಾಲ ಹಾಗೂ ನಿರ್ದೇಶಕ ಡಾ|| ಕೆ. ಜಿ. ವಿಶ್ವನಾಥ ಸಭೆಯನ್ನುದ್ದೇಶಿಸಿ ಮಾತನಾಡುತ್ತ, ವಿದ್ಯಾರ್ಥಿಗಳು ತಪ್ಪೆಸುಗುವುದರಿಂದ ಎಷ್ಟು ಪ್ರಾಣಾಂತಿಕವಾಗಿ ಜೀವ ಕಳೆದುಕೊಳ್ಳುತ್ತಾರೆ ಹಾಗೂ ಅವರ ಕುಟುಂಬದವರು, ಅವರುಗಳಿಗಳಾದ ಗಾಯಗಳ ಭಯಾನಕತೆಯನ್ನು ಅನುಭವಿಸುತ್ತಾರೆಂಬುದನ್ನು ವಿವರಿಸಿದರು. ಬೆಳಗಾವಿಯ ಜೆಸಿಇದ ಆಡಳಿತಾಧಿಕಾರಿ ಕರ್ನಲ್ ಮೆಲ್ವಿಲ್ಲೆ ಡಿಸೋಝಾ ಅಪಘಾತಗಳಲ್ಲಾಗುವ ಅನಾಹುತಗಳ ಕುರಿತು ಎಚ್ಚರಿಸುತ್ತ, ವಿದ್ಯಾರ್ಥಿಗಳು ತಮ್ಮ ಕಾಲೇಜು ಕ್ಯಾಂಪಸ್ನಲ್ಲಿ ಸಹ ಟ್ರ್ಯಾಫಿಕ್ ಶಿಸ್ತನ್ನು ಪಾಲಿಸಬೇಕೆಂದು ಕರೆಕೊಟ್ಟರು.

ಇಸಿಇ ವಿಭಾಗದ ಮುಖ್ಯಸ್ಥರು ಹಾಗೂ ಐಇಇಇ ಸಂಯೋಜನಾಧಿಕಾರಿ ಡಾ|| ಕೃಪಾ ಆರ್. ರಸಾನೆ ಈ ಸಂದರ್ಭದಲ್ಲಿ ಮಾತನಾಡುತ್ತಾ ವಾಹನ ಚಲಿಸಲಿಚ್ಚಿಸುವವರು ಲೈಸೆನ್ಸ್ ಪಡೆಯುವ ಪೂರ್ವದಲ್ಲಿ ಜವಾಬ್ದಾರಿಗಳನ್ನು ಅರಿಯುವುದು ಅವಶ್ಯವೆಂದರು.

ಇಕೋ ಸಂಯೋಜಕರಾದ ಪ್ರೊ. ವಿನಯ ಸಂಗೋಳ್ಳಿ ಹಾಗೂ ಡಬ್ಲ್ಯೂಐಇ ದ ಪ್ರೊ. ಸುಷ್ಮಾ ಯು. ಕಾಮತ ಈ ಪ್ರಸಂಗವನ್ನು ಸೋಯೋಜಿಸಿದ್ದರು.

ಜೈನ ಎಂಜಿನೀಯರಿಂಗ ಕಾಲೇಜಿನ ವಿವಿಧ ವಿಭಾಗಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಭಾಗಿಯಾಗಿ ಈ ಪ್ರಸಂಗವನ್ನು ಯಶಸ್ವಿಗೊಳಿಸಿದರು.