ಲೋಕದರ್ಶನ ವರದಿ
ಗೋಕಾಕ 28: ಸತೀಶ ಶುಗರ್ಸ ಅವಾಡ್ರ್ಸದ ಪ್ರತಿಭೆಗಳು ರಾಜ್ಯದಾದ್ಯಂತ ತಮ್ಮದೇ ಆದ ಪ್ರತಿಭೆಗಳನ್ನು ತೋರಿಸುತ್ತಿದ್ದು ಚಿತ್ರರಂಗದಲ್ಲಿಯೂ ಸೈ ಎನ್ನುವಂತೆ ಕಾರ್ಯ ಮಾಡುತ್ತಿದ್ದು ಅದಕ್ಕೆ ಉದಾಹರಣೆಯಾಗಿ ಬರುವ ದಿ. 30ರಂದು ನಾಡಿನಾದ್ಯಂತ ಬಿಡುಗಡೆಗೊಳ್ಳಲಿರುವ ರನ್ನ ಸೂಪರ ಮೂವೀಸ್ ಬ್ಯಾನರ್ದಡಿಯ 'ಮಹಾರಥ' ಚಿತ್ರವನ್ನು ನೀಡಬಹುದಾಗಿದೆ.
ಪ್ರೀತಮ ನಿಗಡೆ ಅವರ ನಿದರ್ೇಶನದ ಮಹಾರಥ ಚಿತ್ರದಲ್ಲಿ ಸತೀಶ ಶುಗರ್ಸ ಅವಾಡ್ರ್ಸ ಪ್ರತಿಭೆ ಶುೃತಿ ಜಾಧವ ನಾಯಕ ನಟಿಯಾಗಿದ್ದು ಹಳಿಯಾಳದ ನವೀನ ಮತ್ತು ಮುಧೋಳದ ಪ್ರೀತಮ್ ಅವರು ನಾಯಕ ನಟರಾಗಿ ಅಭಿನಯಿಸಿದ್ದಾರೆ.
ಮಹಾರಥ ಚಿತ್ರ ಉತ್ತರ ಕನರ್ಾಟಕದಲ್ಲಿ ಚಿತ್ರೀಕರಣಗೊಂಡಿದ್ದು ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡವ ಮೂಲಕ ನಿದರ್ೇಶಕ ಪ್ರೀತಮ ನಿಗಡೆ ಚಿತ್ರರಂಗಕ್ಕೆ ಪರಿಚಯಿಸಿದ್ದಾರೆ.
ಗೋಕಾಕ ಫಾಲ್ಸ, ಹಿಡಕಲ್ಲ ಡ್ಯಾಂ, ತುಕ್ಕಾನಟ್ಟಿ, ಅರಭಾಂವಿ, ಕಲ್ಲೋಳಿ, ಕೊಣ್ಣೂರ, ನಿಡಸೋಸಿ, ಸಂಕೇಶ್ವರ, ಘೋಡಗೇರಿ ಗ್ರಾಮಗಳಲ್ಲಿ ಚಿತ್ರೀಕರಿಸಲ್ಪಟ್ಟ ಮಹಾರಥ ಚಿತ್ರ ಈ ಭಾಗದ ಜನತೆಯಲ್ಲಿ ಉತ್ಸುಕತೆ ಮೂಡಿಸಿದೆ.
ಚಿತ್ರದ ಇನ್ನುಳಿದ ಪಾತ್ರಗಳಲ್ಲಿ ಕಾಮೆಡಿ ಕಿಲಾಡಿಗಳ ಖ್ಯಾತಿಯ ಪ್ರವೀಣಕುಮಾರ ಗಸ್ತಿ, ಸಂಜು ಹಿರೇಮಠ, ಚಿಂಟು ಟಿವಿ ಖ್ಯಾತಿಯ ಎಲ್ಲೇಶಕುಮಾರ ಮೆಳವಂಕಿ, ದೇವುಕುಮಾರ ಕಾಣಿಸಿಕೊಂಡಿದ್ದಾರೆ.