ನವದೆಹಲಿ, ಏ 10,ಟೋಕಿಯೊ ಒಲಿಂಪಿಕ್ಸ್ ಮುಂದಿನ ವರ್ಷಕ್ಕೆ ಮುಂದೂಡಿಕೆಯಾಗಿರುವುದಕ್ಕೆ ಹಲವರು ಬೇಸರ ವ್ಯಕ್ತಪಡಿಸುತ್ತಾರೆ. ಆದರೆ ನಡಿಗೆ ರೇಸರ್ ಕೆ.ಟಿ. ಇರ್ಫಾನ್ ಮಾತ್ರ ಇದರ ಬಗ್ಗೆ ಯಾವುದೇ ರೀತಿಯ ದೂರುವುದಿಲ್ಲ. ಬದಲಾಗಿ ಸಿದ್ಧತೆ ಕೈಗೊಳ್ಳಲು ಇನ್ನಷ್ಟು ಸಮಯ ಸಿಕ್ಕಾಂತಾಗಿದೆ ಎಂದು ಭಾವಿಸಿದ್ದಾರೆ.ಕಳೆದ ವರ್ಷ ನಡೆದ ಏಷ್ಯನ್ ರೇಷ್ ವಾಕಿಂಗ್ ಚಾಂಪಿಯನ್ ಷಿಪ್ ನಲ್ಲಿ ಸ್ಪರ್ಧಿಸಿದ್ದ 30 ವರ್ಷದ ಇರ್ಫಾನ್, ನಾಲ್ಕನೇ ಸ್ಥಾನ ಪಡೆಯುವುದರೊಂದಿಗೆ 20 ಕಿಲೋ ಮೀಟರ್ ರೇಸ್ ವಾಕಿಂಗ್ ಸ್ಪರ್ಧೆಯಲ್ಲಿ ಎರಡನೇ ಬಾರಿಗೆ ಒಲಿಂಪಿಕ್ಸ್ ಗೆ ಅರ್ಹತೆ ಗಳಿಸಿದ್ದರು. ಒಲಿಂಪಿಕ್ಸ್ ಮುಂದೂಡಿಕೆಯಾಗಿರುವ ಬಗ್ಗೆ ಪ್ರತಿಕ್ರಿಯಿಸಿರುವ ಅವರು, '' ಟೋಕಿಯೊ ಒಲಿಂಪಿಕ್ಸ್ ಮುಂದಕ್ಕೆ ಹೋಗಿರುವುದು ಒಳ್ಳೇಯದೆ. ಇದರಿಂದ ಅಭ್ಯಾಸ ನಡೆಸಲು ಇನ್ನಷ್ಟು ಸಮಯ ಸಿಗುವುದರ ಜತೆಗೆ ಪದಕ ಜಯಿಸಲು ಮತ್ತಷ್ಟು ಸನಿಹವಾಗಬಹುದು. ರೇಸ್ ವಾಕ್ ಒಂದು ತಾಂತ್ರಿಕ ಸ್ಪರ್ಧೆಯಾಗಿರುವುದರಿಂದ ಸಮಯದ ಮೇಲೆ ಇನ್ನಷ್ಟು ಗಮನ ಹರಿಸಬೇಕಿದೆ. ಹೀಗಾಗಿ ಟೋಕಿಯೊ ಕೂಟ ಮುಂದೂಡಿಕೆಯಾಗಿರುವುದು ಯಾವುದೇ ಬೇರಸವಿಲ್ಲ,'' ಎಂದು ಹೇಳಿದ್ದಾರೆ.