ಇಂದು ಸಂಜೆ ತಿಮ್ಮಪ್ಪನ ಬಾಗಿಲು ಬಂದ್


ಅಮರಾವತಿ(ಆಂಧ್ರಪ್ರದೇಶ) 26: ನಾಳೆ ನಭೋಮಂಡಲದಲ್ಲಿ ಕೌತುಕವೊಂದು ನಡೆಯಲಿದೆ. ಈ ಚಂದ್ರನ ಕೌತುಕಕ್ಕೆ ಬ್ಲಡ್ಮೂನ್ ಗ್ರಹಣ ಎಂದು ಹೆಸರಿಸಲಾಗಿದೆ. ಚಂದ್ರ ಗ್ರಹಣದ ಹಿನ್ನೆಲೆಯಲ್ಲಿ ತಿರುಪತಿ ತಿಮ್ಮಪ್ಪನ ದರ್ಶನ ಇರುವುದಿಲ್ಲ. 

ಗ್ರಹಣದ ಹಿನ್ನೆಲೆಯಲ್ಲಿ ಶುಕ್ರವಾರ ಸಂಜೆ ದೇಗುಲದ ಬಾಗಿಲನ್ನು ಮುಚ್ಚಲಾಗುತ್ತದೆ ಎಂದು ಟಿಟಿಡಿ ಜಂಟಿ ಕಾರ್ಯನಿವರ್ಾಹಕ ಅಧಿಕಾರಿ  ಕೆ. ಎಸ್. ಶ್ರೀನಿವಾಸರಾಜು ಪ್ರಕಟಿಸಿದ್ದಾರೆ.   

ನಾಳೆ ರಾತ್ರಿ 11.54ರಿಂದ ಶನಿವಾರ ಬೆಳಗಿನ ಜಾವ 3.49 ಗಂಟೆವರೆಗೂ ಗ್ರಹಣ ಇರಲಿದೆ. ಹೀಗಾಗಿ ನಾಳೆ ಸಂಜೆ 5 ಗಂಟೆಗೆ ದೇವಸ್ಥಾನದ ಬಾಗಿಲು ಮುಚ್ಚಲಾಗುತ್ತಿದೆ ಎಂದು ಪ್ರಕಟಣೆ ಮೂಲಕ ಆಡಳಿತ ಮಂಡಳಿ ಪ್ರಕಟಿಸಿದೆ.  

ಶುಕ್ರವಾರ ಸಂಜೆಯಿಂದ ಶನಿವಾರ ಬೆಳಗಿನ ವರೆಗೂ ದೇವಸ್ಥಾನದ ಬಾಗಿಲು ಹಾಕಲಾಗುವುದು. ಹೀಗಾಗಿ ಶುಕ್ರವಾರ ನಡೆಯಬೇಕಿದ್ದ  ಅಜರ್ಿತ ಸೇವಾ, ಕಲ್ಯಾಣೋತ್ಸವ, ಉಂಜಲ ಸೇವಾ, ವಸಂತೋತ್ಸವಂ, ಪೌರ್ಣಮಿ ಗರುಡ ಸೇವೆಗಳನ್ನು ರದ್ದುಪಡಿಸಲಾಗಿದ್ದು, ಶನಿವಾರ ಅಂದರೆ,  ಜು.28ರ ಬೆಳಗಿನ ಜಾವ 4.15ಕ್ಕೆ ಸುಪ್ರಭಾತ ಸೇವೆ, ಶುದ್ಧಿ ಮತ್ತು ಪುಣ್ಯಾಹವಚನದ ಮೂಲಕ ತಿಮ್ಮಪ್ಪನ ದರ್ಶನಕ್ಕೆ ಅವಕಾಶ ನೀಡಲಾವುದು ಎಂದು ಶ್ರೀನಿವಾಸರಾಜು ತಿಳಿಸಿದ್ದು, ಶನಿವಾರ ಬೆಳಗ್ಗೆಯಿಂದ ಎಂದಿನಂತೆ ಪೂಜಾ ಕೈಂಕರ್ಯಗಳು ಮುಂದುವರೆಯಲಿವೆ ಎಂದು ತಿಳಿಸಿದ್ದಾರೆ.