ಇಂದು ಮಠಾಧೀಶರ, ರೈತರ ನೇತೃತ್ವದಲ್ಲಿ ಬಾಗಲಕೋಟೆ ಚಲೋ

ಲೋಕದರ್ಶನವರದಿ

ಮುಧೋಳ: ಘಟಪ್ರಭಾ ಪ್ರವಾಹಕ್ಕೆ ಸಿಲುಕಿ ತಮ್ಮ ಸರ್ವಸ್ವವನ್ನೆ ಕಳೆದುಕೊಂಡು ಬದುಕು ಮೂರಾಬಟ್ಟೆ ಮಾಡಿಕೊಂಡು  ಅತಂತ್ರ ಬದುಕು ಸಾಗಿಸುತ್ತಿರುವ  ಸಂತ್ರಸ್ತರ ಪುನರಜೀವನಕ್ಕಾಗಿ  ಹಾಗೂ  ನೀರಲ್ಲಿ ಕೊಚ್ಚಿ ಹೊದ ಕಬ್ಬು ಸೇರಿದಂತೆ ಬೆಲೆ ಬಾಳುವ ವಾಣಿಜ್ಯ ಬೆಳೆಗಳಗೆ ಇನ್ನಿತರ  ಬೆಳೆಗಳಿಗೆ ಸರಕಾರ ಯೋಗ್ಯ ಪರಿಹಾರ ಧನವನ್ನು ಕೂಡಲೆ ಮಂಜುರು ಮಾಡಬೇಕು. 

        ಸುಟ್ಟ ಟಿ.ಸಿ. ಹಾಗೂ ಇನ್ನಿತರ ವಿದ್ಯುತ್ತ ಜೋಡಣಾ ಕಾರ್ಯ ಯುದ್ದೊಪಾದಿಯಲ್ಲಿ ಪ್ರಾರಂಭಿಸಬೇಕು. ಸಕ್ಕರೆ ಕಾರಖಾನೆಗಳು ಕೂಡಲೆ ಪ್ರಾರಂಭಿಸಿ, ನೊಂದ ರೈತರ ನೆರವಿಗೆ ಧಾವಿಸಬೇಕೆಂದು, ಶಿರೋಳ ರಾಮಾರೂಢ ಮಠದ ಶಂಕರಾರೂಢ ಮಹಾಶ್ರೀ, ಒತ್ತಾಯಯಿಸಿದ್ದಾರೆ.

ದಿ. 31 ರಂದು ಬಾಗಲಕೋಟ ಚಲೋ-

        ಸುದ್ದಿಗಾರರ ಜೊತೆ ಮಾತನಾಡಿದ ಅವರು ಸಂತ್ರಸ್ತರ ನ್ಯಾಯಸಮ್ಮತ ಎಲ್ಲ ಬೇಡಿಕೆಗಳನ್ನು ಕೂಡಲೆ ಈಡೇರಿಸಬೇಕೆಂದು ಒತ್ತಾಯಿಸಿ ದಿ. 31 ರಂದು ಬೆಳಗ್ಗೆ 10 ಘಂಟೆಗೆ  ಸಂಗೋಳ್ಳಿ ರಾಯಣ್ಣ ವೃತ್ತದಿಂದ ಈ ಭಾಗದ ಎಲ್ಲ ಸ್ವಾಮಿಜಿಗಳು ಹಾಗೂ ರೈತ ಹೋರಾಟಗಾರರ ಹಾಗೂ ಸಂತ್ರಸ್ತರ ನೇತೃತ್ವದಲ್ಲಿ ಬಾಗಲಕೋಟ ಚಲೊ ಕಾರ್ಯಕ್ರಮ ಹಮ್ಮಿಕ್ಕೊಳ್ಳಲಾಗಿದೆ.

      ಅಲ್ಲಿ ಡಿ.ಸಿ. ಮೂಲಕ ಮುಖ್ಯಮಂತ್ರಿಗಳಿಗೆ ಹಾಗೂ ಡಿಸಿಎಂ. ಗೋವಿಂದ ಕಾರಜೋಳ ಅವರಿಗೆ ಮನವಿ ಸಲ್ಲಿಸಲಾಗುವುದು. ಈ ಮನವಿಗೆ ಸರಕಾರ ಸರಿಯಾಗಿ ಸ್ಪಂಧಿಸದಿದ್ದರೆ, ಮುಂದೆ ಉಗ್ರ ಹೋರಾಟ ನಡೆಸಲಾಗುವುದೆಂದು ಶ್ರೀಗಳು ಎಚ್ಚರಿಸಿದ್ದಾರೆ. 

      ರೂಗಿಯ ನಿತ್ಯಾನಂದ ಶ್ರೀ, ಗಣಿಯ ಚಿನ್ಮಯಾನಂದ ಶ್ರೀ, ರೈತ ನಾಯಕರಾದ, ಸುರೇಶ ಢವಳೇಶ್ವರ, ಹನುಮಂತ ನಬಾಬ, ಸುರೇಶ ಚಿಂಚಲಿ, ದುಂಡಪ್ಪಾ ಯರಗಟ್ಟಿ, ಶಂಕರ ನಾಯಕ, ಬಸವಂತ ಕಾಂಬಳೆ, ಆನಂದ ಮಾಳಿ, ದುಂಡಪ್ಪ ವಾಲಿಮರದ, ರಾಚಪ್ಪ ಕಣಬೂರ, ಮುಂತಾದವರು ಮಾತನಾಡಿ ಸರಕಾರದ ಬೆಲೆ ನಿಗಧಿ. ಪ್ರವಾಹ ಹಾಗೂ ಪರಿಹಾರದ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತ ಪಡಿಸಿದರು.