ರಾಜ್ಯ ಮಟ್ಟದ ಪೆಡರೇಶನ್ ಕುಸ್ತಿ ಆಯ್ಕೆ

ರಾಜ್ಯ ಮಟ್ಟದ ಪೆಡರೇಶನ್ ಕುಸ್ತಿ ಆಯ್ಕೆ State level federation wrestling selection

ಲೋಕದರ್ಶನ ವರದಿ 

       ಮುಧೋಳ 07:  ಕಡುಬಡತನದಲ್ಲಿ ಅರಳಿದ ಪ್ರತಿಭೆ  ಬಾಗಲಕೋಟೆ ಜಿಲ್ಲೆಯ ರನ್ನನಾಡಿನ ಮುಧೋಳ ನಗರವು ಸಾಹಿತ್ಯ, ಕಲೆ,ಸಾಂಸ್ಕೃತಿಕ  ಕ್ಷೇತ್ರದಲ್ಲಿ ತನ್ನದೇ ಛಾಪು ಮೂಡಿಸಿದ ನಗರವಾಗಿದೆ. ಕವಿಚಕ್ರವರ್ತಿ ರನ್ನ ಮಹಾಕವಿ ನಡೆದಾಡಿದ ಭೂಮಿ  ಮುಧೋಳದಲ್ಲಿ ದೇಶಿಯ ಕ್ರೀಡೆಯಾದ ಕುಸ್ತಿ ಕಲೆ ಸಮೃದ್ಧವಾಗಿ ಬೆಳೆದು ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿದ ಕೀರ್ತಿ ಇಲ್ಲಿಯ ಕುಸ್ತಿಪಟುಗಳದ್ದು ಆಗಿದೆ  ಕಲಾವತಿ ತಂದೆ ಬಸವರಾಜ ತಾಯಿ ಅನ್ನಪೂರ್ಣ ಇವರ ಉದರದಲ್ಲಿ   06   ಜನಿಸಿದ್ದಾಳೆ.ಇವಳು ಪಿ.ಎಂ.ಶ್ರೀ ಕೊಳಚೆ ಪ್ರದೇಶ ಮಲ್ಲಮನಗರ ಮುಧೋಳದಲ್ಲಿ   ಏಳನೇ ತರಗತಿಯಲ್ಲಿ ಓದುತ್ತಿದ್ದಾಳೆ."ಬೆಳೆಯ ಸಿರಿ ಮೊಳಕೆಯಲ್ಲಿ ಕಾಣು" ಎಂಬಂತೆ ಕುಸ್ತಿ ಆಡುವುದರಲ್ಲಿ ಅರಳಿದ ಯುವ ಪ್ರತಿಭೆಯೆನಿಸಿಕೊಂಡಿದ್ದಾಳೆ.  ಕಡುಬಡತನದಲ್ಲಿ ಹುಟ್ಟಿದ ಇವಳ ತಂದೆ ಟ್ಯಾಕ್ಸಿ ಡೈವರ್ ನಾಗಿ ಬಾಡಿಗೆಯನ್ನು ಹೊಡೆಯುತ್ತಿದ್ದಾನೆ.ಚಿಕ್ಕ ವಯಸ್ಸಿನಲ್ಲಿ ಮಹತ್ತರವಾದ ಸಾಧನೆಯನ್ನು ಮಾಡಿ ಮುಧೋಳದ ಪಾಲಕರಿಂದ,ಪೋಷಕರಿಂದ ಮನ್ನಣೆಯನ್ನು ಗಳಿಸಿದ್ದಾಳೆ.ಇಂದಿನ ಸಿದ್ದತೆಯೇ ನಾಳಿನ ಸಾಧನೆಗೆ ಪೂರಕವಾಗುತ್ತದೆ.

      ಮುಧೋಳದ ಜೈ ಹನುಮಾನ್ ವ್ಯಾಯಾಮ ಶಾಲೆ ಶಿವಾಜಿ ಸರ್ಕಲ್ ದ ತರಬೇತಿದಾರರಾದ   ಅರುಣ.ಬಾ.ಕುಮಕಾಲೆಯವರ ಮಾರ್ಗದರ್ಶನದಲ್ಲಿ ಕುಸ್ತಿ ತರಬೇತಿಯನ್ನು ಪಡೆದು ರಾಷ್ಟ್ರಮಟ್ಟದಲ್ಲಿ ಭಾಗವಹಿಸುವ ಸುದವಕಾಶವನ್ನು ಪಡೆದಿದ್ದಾಳೆ. ಮೈಸೂರು ಜಿಲ್ಲೆ ನಂಜನಗೂಡು ದಲ್ಲಿ ಓಪನ್ ಸ್ಟೇಟ ಲೆವೆಲ್ ದಲ್ಲಿ 33 ಕೆ.ಜಿ.ವಿಭಾಗದಲ್ಲಿ ಕುಸ್ತಿ ಆಡಿ ಬಾಲ ಕಿಶೋರಿಪ್ರಶಸ್ತಿಗೆ ಭಾಜನಳಾಗಿದ್ದಾಳೆ.ಇದಲ್ಲದೆ ರಾಜ್ಯ ಮಟ್ಟದ ಪೆಡರೇಶನ್ ಕುಸ್ತಿಯಲ್ಲಿ ಆಯ್ಕೆಯಾಗಿ ರಾಷ್ಟ್ರಮಟ್ಟಕ್ಕೆ 33 ಕೆ.ಜಿ .ಸ್ಪರ್ಧೆಯಲ್ಲಿ ಆಯ್ಕೆ ಆಗಿದ್ದಾಳೆ. ಇದೇ ತಿಂಗಳ    2026 ರಂದು ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿ ತಮಿಳುನಾಡಿನಲ್ಲಿ ನಡೆಯಲಿದ್ದು ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾದ ಕೀರ್ತಿ ಇವಳದು. ಹೆಣ್ಣಿರಲಿ,ಗಂಡುವಿರಲಿ ಮನೆಗೊಂದು ಕುಸ್ತಿ ಪಟುವಿರಲಿ ಎಂಬಂತೆ ಮುಧೋಳದ ಜೈ ಹನುಮಾನ ವ್ಯಾಯಾಮ ಶಾಲೆಯಲ್ಲಿ ಹೆಣ್ಣು ಮತ್ತು ಗಂಡು ಎನ್ನುವ ಬೇಧಭಾವವಿಲ್ಲದೆಕುಸ್ತಿ ಪಟುಗಳು ಕುಸ್ತಿ ಆಡುತ್ತಿರುವದು ನಿಜಕ್ಕೂ ಹೆಮ್ಮೆಯ ವಿಷಯವಾಗಿದೆ. ಕುಮಾರಿ ಕಲಾವತಿ ಬಸವರಾಜ ದೊಡಮನಿ ತಮಿಳುನಾಡಿನಲ್ಲಿ ನಡೆಯುವ ರಾಷ್ಟ್ರಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಭಾಗವಹಿಸಿ ರನ್ನನಾಡಿನ ಮುಧೋಳ ನಗರಕ್ಕೆ ಕೀರ್ತಿ ತರಲೆಂದು ಕುಸ್ತಿ ಅಭಿಮಾನಿಗಳ ಶುಭ ಹಾರೈಕೆಯಾಗಿದೆ