ಲೋಕದರ್ಶನ ವರದಿ
ಮುಗಳಖೋಡ 15: ರವಿವಾರ ದಿ 16ರಂದು ಬೆಳಗಾವಿ ನಗರದ ಪಾಶ್ರ್ವನಾಥ ಪ್ಲಾಜಾ ಕ್ಲಬ್ ರೋಡದ ಹರ್ಷಾ ಇಲೇಕ್ಟ್ರಾನಿಕ್ಸ್ ಹತ್ತಿರ ನೂತನವಾಗಿ ಆದಿತ್ಯ & ಎಕ್ಸಲ್ ಡೈಯಾಗ್ನೋಸ್ಟಿಕ್ ಸೆಂಟರ ಆರಂಭವಾಗುತ್ತಿದ್ದು, ಈ ಸಮಾರಂಭಕ್ಕೆ ಬೆಳಗಾವಿ ನಾಗನೂರ ರುದ್ರಾಕ್ಷಿಮಠದ ಪೂಜ್ಯ ಡಾ. ಅಲ್ಲಮಪ್ರಭು ಸ್ವಾಮಿಜಿ, ಗಣ್ಯರಾದ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳೆ, ಕೆ.ಎಲ್.ಇ ಸಂಸ್ಥೆ ಅಧ್ಯಕ್ಷ ಪ್ರಭಾಕರ ಕೋರೆ, ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ, ಕೆಎಂಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳೆ, ಕರ್ನಾಟಕ ಮುಖ್ಯಸಚೇತಕ ಮಹಾಂತೇಶ ಕವಟಿಗಿಮಠ, ಜವಳಿ ಸಚಿವ ಶ್ರೀಮಂತ ಪಾಟೀಲ, ಮಾಜಿ ಸಚಿವ ಸತೀಶ ಜಾರಕಿಹೊಳೆ, ಎಂಪಿ ಸುರೇಶ ಅಂಗಡಿ, ಶಾಸಕ ಅನಿಲ ಬೆನಕೆ, ಅಥಣಿ ಶಾಸಕ ಮಹೇಶ ಕುಮಟಳ್ಳಿ, ಬೆಳಗಾವಿ ಕೆ.ಎಂ.ಎಫ್ ಅಧ್ಯಕ್ಷ ವಿವೇಕರಾವ ಪಾಟೀಲ, ಚಿಕ್ಕೋಡಿ ಎಂ.ಪಿ. ಅಣ್ಣಾಸಾಹೇಬ ಜೊಲ್ಲೆ, ಬೆಳಗಾವಿ ದಕ್ಷಿಣ ಶಾಸಕ ಅಭಯ ಪಾಟೀಲ, ಮಾಜಿ ಸಚಿವ ಉಮೇಶ ಕತ್ತಿ, ರಾಯಬಾಗ ವಸಂತರಾವ ಪಾಟೀಲ ಸಕ್ಕರೆ ಕಾರ್ಖಾನೆ ಅಧ್ಯಕ್ಷ ಪ್ರತಾಪರಾವ ಪಾಟೀಲ, ಜಿ.ಪಂ ಮಾಜಿ ಸದಸ್ಯ ಡಾ.ಸಿ.ಬಿ.ಕುಲಿಗೋಡ ಹಾಗೂ ಡಾ.ರಮೇಶ ಪಾಟೀಲ ಮುಂತಾದವರು ಆಗಮಿಸಲಿದ್ದಾರೆ.
ನೂತನವಾಗಿ ಆರಂಭವಾಗುತ್ತಿರುವ ಈ ಆದಿತ್ಯ & ಎಕ್ಸಲ್ ಡೈಯಾಗ್ನೋಸ್ಟಿಕ್ ಸೆಂಟರದಲ್ಲಿ ಡಾ. ಸಂತೋಷ ಕುಲಿಗೋಡ ಅವರೊಂದಿಗೆ ಡಾ.ಅಜಯ ಎಂ.ಕೆ., ಡಾ.ಸಂದೀಪ ಪಟ್ಟಣಶೆಟ್ಟಿ, ಡಾ.ಪ್ರವೀಣ ವಾಲಿ ಹಾಗೂ ಡಾ. ಶ್ರೀದೇವಿ ಬೋಬಾಟೆ ಇವರು ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಡಾ.ಸಿ.ಬಿ.ಕುಲಿಗೋಡ ಹಾಗೂ ಸಂಜಯ ಕುಲಿಗೋಡ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.