ಇಂದು ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ
Today is International Volunteer Day and International Women's Day
ಗದಗ 10:ಫೇವಾರ್ಡ ಕೆ ಗದಗ ಕಳೆದ 40 ವರ್ಷಗಳ ಹಿಂದೆ ಸಾಮಾಜಿಕ ಹೋರಾಟಗಾರರಾದ ಎಸ್ ಆರ್ ಹಿರೇಮಠ ಅವರ ಮುಂದಾಳತ್ವದಲ್ಲಿ ಪ್ರಾರಂಭಿಸಿ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಸುಮಾರು 50 ಕ್ಕೂ ಅಧಿಕ ಸಂಸ್ಥೆಗಳು ಈ ಫೇವಾರ್ಡ ಕೆ ದಲ್ಲಿ ಸದಸ್ಯತ್ವ ಪಡೆದಿದ್ದು, ಒಂದೊಂದು ಸಂಸ್ಥೆಗಳು ಎರೆಡೆರೆಡು ಗುರಿಗಳೊಂದಿಗೆ ತಮ್ಮ ಕಾರ್ಯ ಸೇವೆ ಸಲ್ಲಿಸುತ್ತಾ ಬಂದಿರುವುದಾಗಿ ಫೇವಾರ್ಡ ಕೆ ಗದಗ ಜಿಲ್ಲಾಧ್ಯಕ್ಷ ಬಸವರಾಜ ನರೇಗಲ್ಲ ತಿಳಿಸಿದರು.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು ಮಾರ್ಚ- 11 ರ ಬುಧವಾರ ಬೆಳಿಗ್ಗೆ 10-30ಕ್ಕೆ ನಗರದ ತೋಂಟದಾರ್ಯ ಕಲ್ಯಾಣ ಮಂಟಪದಲ್ಲಿ ಅಂತರಾಷ್ಟ್ರೀಯ ಸ್ವಯಂ ಸೇವಾ ಸಂಸ್ಥೆಗಳ ದಿನಾಚರಣೆ ಹಾಗೂ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಆಚರಿಸಲಾಗುತ್ತಿದ್ದು, ಇದರ ಉದ್ಘಾಟಕರಾಗಿ ಗದಗ ಪೊಲೀಸ್ ಅಧೀಕ್ಷಕ ರೋಹನ ಜಗದೀಶ, ಮುಖ್ಯ ಅತಿಥಿಗಳಾಗಿ ಉಪ ವಿಭಾಗಾಧಿಕಾರಿ ಗಂಗಪ್ಪ ಎಂ ಎಸ್, ಸದಸ್ಯ ಕಾರ್ಯದರ್ಶಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಕಾನೂನು ನೆರವು ಅಭಿರಕ್ಷಕರು ಸಿ ಎಸ್ ಶಿವನಗೌಡ್ರ, ಅತಿಥಿಗಳಾಗಿ ಸಹಾಯಕ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ರಾಜ್ಯ ಉಪಾಧ್ಯಕ್ಷರು,
ಜಿಲ್ಲಾಧ್ಯಕ್ಷರು ಸರಕಾರಿ ನೌಕರರ ಸಂಘದ ಬಸವರಾಜ ಬಳ್ಳಾರಿ, ಸಮಾಜ ಕಲ್ಯಾಣ ಇಲಾಖೆಯ ಉಪನಿರ್ದೇಶಕರಾದ ನಂದಾ ಹಣಬರಟ್ಟಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಾದ ಪದ್ಮಾವತಿ ಜಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಶ್ರೀಶೈಲ ಎಸ್ ಸೋಮನಕಟ್ಟಿ, ಸಹಕಾರ ಸಂಘಗಳ ಉಪನಿಬಂಧಕರು ಎಸ್ ಎಸ್ ಕಬಾಡಿ, ಜಿಲ್ಲಾ ಕೌಶಲ್ಯಾಧಿಕಾರಿ ಬಸವರಾಜ ಮಲ್ಲೂರ, ಜಗದ್ಗುರು ತೋಂಟದಾರ್ಯ ವಿದ್ಯಾಪೀಠದ ಕಾರ್ಯದರ್ಶಿ ಶಿವಾನಂದ ಪಟ್ಟಣಶೆಟ್ಟರ, ಲೀಡ್ ಬ್ಯಾಂಕ್ ಮ್ಯಾನೇಜರ್ ಸ್ಟೇಟ್ ಬ್ಯಾಂಕ ಆಫ್ ಇಂಡಿಯಾ ಸಂತೋಷ ಎಂ ವ್ಹಿ, ಡಿಜಿಪ್ಲೀಕ್ ಕಂಟ್ರೋಲ್ ಇಂಡಿಯಾ ಪ್ರೈ.ಲಿ.ಝೇನಲ್ ಮ್ಯಾನೇಜರ್ ಬೆಳಗಾವಿ ಶಾಖೆಯ ಭಾರತಿ ಪಾಟೀಲ ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ಫೇವಾರ್ಡ ಕೆ ಗದಗ ಉಪಾಧ್ಯಕ್ಷರು ಹಾಗೂ ಕಾರ್ಯದರ್ಶಿ ಸರ್ವೋದಯ ಇಂಟಿಗ್ರೇಟೆಡ್ ರೂರಲ್ ಡೆವಲಪಮೆಂಟ್ ಆ್ಯಕ್ಟನ ಡಾ ನಾಗಮ್ಮ ಅಂಬಿಗೇರ, ಕಾರ್ಯದರ್ಶಿ ಫೇವಾರ್ಡ ಕೆ ಗದಗ ಕಾರ್ಯದರ್ಶಿ ಪೃತ್ವಿ ಪ್ರೀಯಾ ಸಾರ್ವತ್ರಿಕ ಸೇವಾ ಸಂಸ್ಥೆಯ ರಮೇಶ ಕೊಳೂರ, ಜೆ ಸಿ ಸದಸ್ಯರು ಫೆವಾರ್ಡ ಕೆ ಗದಗ ಹಾಗೂ ಅಧ್ಯಕ್ಷರು ಸಾರಥಿ ಸೊಸೈಟಿ ಹಿರೇಹಂದಿಗೋಳ ಮಲ್ಲಿಕಾರ್ಜುನಗೌಡ ಜಕ್ಕನಗೌಡ್ರ, ಸದಸ್ಯರು ಹಾಗೂ ಮಾಜಿ ಕಾರ್ಯದರ್ಶಿ ಫೆವಾರ್ಡ ಕೆ ಗದಗ ಹಾಗೂ ಅಧ್ಯಕ್ಷರು ವಿದ್ಯಾ ವಿವಿದೋದ್ದೇಶಗಳ ಮಹಿಳಾ ಸಂಸ್ಥೆ ಗದಗ ನ ಡಾ.ಮಂಜುಳಾ ಕಲಕೇರಿ, ಫೆವಾರ್ಡ ಕೆ ಗದಗ ಜಿಲ್ಲಾ ಒಕ್ಕೂಟದ ಸದಸ್ಯರು ಜೀವನ ಪ್ರಗತಿ ಸೇವಾ ಸಂಸ್ಥೆ ಅಧ್ಯಕ್ಷರಾದ ದುರ್ಗಮ್ಮಾ ಹರಿಜನ, ಸ್ಪೂರ್ತಿ ಮಹಿಳಾ ಸೇವಾ ಸಂಸ್ಥೆಯ ಅಧ್ಯಕ್ಷರಾದ ರೇಣುಕಾ ಪೂಜಾರ, ಸಾಯಿಬಾಬಾ ಸಂಜೀವಿನಿ ಗಾರಮೆಂಟ್ಸ್ ಸೊಸೈಟಿ ಹೊಳೆ ಆಲೂರ ಅಧ್ಯಕ್ಷರಾದ ನಿಲ್ಲೊಪರ್ ಖಾಜಿ ಸೇರಿದಂತೆ ಇತರರಿದ್ದರು.
ಹೋಳಿಹಬ್ಬಕ್ಕೆ ಮೆರಗು ತಂದ ರತಿ ಕಾಮನ್ನರ ಮದುವೆ ಕಾರ್ಯಕ್ರಮ : ಲಗ್ನದಲ್ಲಿ ನೂರಾರು ಜನ ಬಾಗಿ
ಹೆಚ್ಚಾದ ಸಂಕೇಶ್ವರ ತಾಲೂಕು ರಚನೆಯ ಕೂಗು : ವೇಲಫೆರ್ ಸಂಘಟನೆಯಿಂದ ಜಿಲ್ಲಾಧಿಕಾರಿಗಳ ಭೇಟಿ, ಮನವಿ
ಬೇಸಿಗೆಯ ಮುನ್ನ ಸಂಕೇಶ್ವರದಲ್ಲಿ ಕುಡಿಯುವ ನೀರಿಗೆ ಹಾಹಾಕಾರ : ಕೊಳವೆ ಬಾವಿಗಳತ್ತ ಅಲೆದಾಡುತ್ತಿರುವ ಜನ
ಸಂಜೀವಿನಿ ಫೌಂಡೇಶನದಿಂದ ಹಳದಿ-ಕುಂಕುಮ ಕಾರ್ಯಕ್ರಮ : ರೋಗಿಗಳ ಆರೈಕೆಯ ಜೊತೆಗೆ ಸ್ವಂತ ಆರೈಕೆ ಕೂಡ ಮಹತ್ವದ್ದು : ಮನೋವೈದ್ಯ ತಜ್ಞೆ ಜಯಲಕ್ಷ್ಮೀ ದೇಸಾಯಿ
ತಲವಾರ್ನಿಂದ ಮಾರಣಾಂತಿಕ ಹಲ್ಲೆ : ಕೊಲೆಗೆ ಯತ್ನ 7 ಜನರ ಬಂಧನ, ಇಬ್ಬರಿಗೆ ಶೋಧ
ತಲವಾರದಿಂದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ : ಆಸ್ಪತ್ರೆಗೆ ದಾಖಲು, ತ್ವೇಷದ ವಾತಾವರಣ 