ಇಂದಿನ ಒತ್ತಡ ಜೀವನದಲ್ಲಿ ಹೆಚ್ಚು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ : ಸುಭಾಸ

Today's stress may lead to more diseases in life: Subhasa

ಇಂದಿನ ಒತ್ತಡ ಜೀವನದಲ್ಲಿ ಹೆಚ್ಚು ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ : ಸುಭಾಸ 

ಶಿಗ್ಗಾವಿ 11 : ಪ್ರತಿಯೊಬ್ಬ ಮನುಷ್ಯನು ವರ್ಷಕ್ಕೆ ಎರಡು ಬಾರಿ ಸಮಗ್ರ ಆರೋಗ್ಯ ತಪಾಸಣೆ ಮಾಡಿಸಿಕೊಂಡಾಗ ಸದೃಡ ಆರೋಗ್ಯ ಹೊಂದಲು ಸಹಕಾರಿಯಾಗುತ್ತದೆ ಎಂದು ಪುರಸಭೆ ಸದಸ್ಯ ಸುಭಾಸ ಚವ್ಹಾಣ ಹೇಳಿದರು. 

      ಪಟ್ಟಣದ 4. ನೇ ವಾರ್ಡಿನಲ್ಲಿ ನಡೆದ ಕೆಎಸ್‌ಎಪಿಎಸ್, ಡ್ಯಾಪ್ಕೂ ಹಾಗೂ ಆಯುಷ್ಮಾನ ಆರೋಗ್ಯ ಮಂದಿರ ನೇತೃತ್ವದಲ್ಲಿ ನಡೆದ ಸಮಗ್ರ ಆರೋಗ್ಯ ತಪಾಸಣಾ ಶಿಬಿರದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು  ಇಂದಿನ ಒತ್ತಡ ಜೀವನದಲ್ಲಿ ಅನೇಕ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ  ಹೆಚ್ಚು ಇರುವ ಕಾರಣ  ಪ್ರತಿಯೊಬ್ಬರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು ಎಂದರು. 

    ಆರ್ಯುವೇದ ವೈದ್ಯಾಧಿಕಾರಿ  ಡಾ. ಸರಸ್ವತಿ  ಮಾತನಾಡಿ ನಾವು ವಾಸಿಸುವ ಸುತ್ತ ಮುತ್ತ ಸ್ವಚ್ಚತೆಯನ್ನು ಕಾಪಾಡಿಕೊಂಡಾಗ ಶೇ 60 ರಷ್ಟು ಸಾಂಕ್ರಾಮಿಕ ರೋಗಗಳಿಗೆ ತುತ್ತಾಗುವುದನ್ನು ನಿಯಂತ್ರಣ ಮಾಡಬಹುದು ಜೊತೆಗೆ ನಮ್ಮ ವೈಯಕ್ತಿಕ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದರು. 

    ಸಮುದಾಯ ಆರೋಗ್ಯ ಅಧಿಕಾರಿ  ಸಂತೋಷ ಮಾತನಾಡಿ ಸರಕಾರದಲ್ಲಿ ಅನೇಕ ಯೋಜನೆಗಳು ಇವೆ ಅದರ ಸದುಪಯೋಗ ಪಡೆದು ಕೊಳ್ಳಬೇಕು ಎಂದರು. 

    ಆಪ್ತಸಮಾಲೋಚಕಿ ರೇಣುಕಾ ಹೊಸಮನಿ ಮಾತನಾಡಿ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಮಗ್ರ ಆರೋಗ್ಯ ತಪಾಸಣೆ ಮಾಡುವುದರ ಮೂಲಕ ಅವರಲ್ಲಿರುವ ಕಾಯಿಲೆಗಳನ್ನು ಗುರುತಿಸಿ ಅವರಿಗೆ ಚಿಕಿತ್ಸೆ ನೀಡುವುದು ಸರ್ಕಾರದ ಉದ್ದೇಶವಾಗಿದೆ ಎಂದರು. 

    ಈ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿಗಳಾದ ಸುಮಾ, ಶೃತಿ, ಆಶಾ ಕಾರ್ಯಕರ್ತೆಯರು, ವಾರ್ಡಿನ ಸಾರ್ವಜನಿಕರು ಸೇರಿದಂತೆ ಸಂಘ ಸಂಸ್ಥೆ ಸಿಬ್ಬಂದಿಗಳು ಉಪಸ್ಥಿತರಿದ್ದರು. ಪ್ರಯೋಗ ಶಾಲಾ ತಂತ್ರಜ್ಣ ಅಧಿಕಾರಿ ಶಮ್ಸ ತಬರೀಜ ಕಾರ್ಯಕ್ರಮ ನಿರ್ವಹಿಸಿದರು.