ಮಿಥಾಲಿ ಹಾಗೂ ಹರ್ಮನ್ ಪ್ರೀತ್ ಗೆ ಪಟ್ಟ


ನವದೆಹಲಿ, ಸೆ 27 : ಅನುಭವಿ ಬ್ಯಾಟ್ಸ್ ಮನ್ ಮಿಥಾಲಿ ರಾಜ್ ಹಾಗೂ ಹರ್ಮನ್ ಪ್ರೀತ್ ಕೌರ್ ನವೆಂಬರ್ ನಲ್ಲಿ ನಡೆಯಲಿರುವ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಭಾರತ ಏಕದಿನ ಹಾಗೂ ಟಿ-20 ತಂಡವನ್ನು ಮುನ್ನಡೆಸಲಿದ್ದಾರೆ.  


ಪ್ರವಾಸದ ವೇಳೆ ಭಾರತ ಆರಂಭದಲ್ಲಿ ಮೂರು ಏಕದಿನ ಹಾಗೂ ಟಿ-20 ಪಂದ್ಯವನ್ನು ಸೆಂಟ್ ಲೂಯಿಸ್ ಹಾಗೂ ಗಯಾನ ಮೈದಾನದಲ್ಲಿ ಆಡಲಿದೆ. ಪ್ರವಾಸದ ಮೊದಲ ಪಂದ್ಯ ನವೆಂಬರ್ ಒಂದರಂದು ನಡೆಯಲಿದ್ದು, ಕೊನೆಯ ಪಂದ್ಯ ನ.20ರಂದು ನಡೆಯಲಿದೆ.  

ಏಕದಿನ ತಂಡ: ಮಿಥಾಲಿ ರಾಜ್ (ನಾಯಕಿ), ಹರ್ಮನ್ ಪ್ರೀತ್ ಕೌರ್ (ಉಪನಾಯಕಿ), ಸ್ಮೃತಿ ಮಂಧನಾ, ಜೇಮಿನಿ ರೊಡಿಗಸ್, ದೀಪ್ತಿ ಶಮರ್ಾ, ಪೂನಮ್ ರಾವತ್, ಡಿ. ಹೇಮಲತಾ, ಜೂಲನ್ ಗೋಸ್ವಾಮಿ, ಶಿಖಾ ಪಾಂಡೆ, ಪೂನಮ್ ಯಾದವ್, ಏಕ್ತಾ ಬಿಷ್ಟ್, ರಾಜೇಶ್ವರಿ ಗಾಯಕ್ವಾಡ್, ತನ್ಯಾ ಭಾಟಿಯಾ, ಪ್ರಿಯಾ ಪೂನಿಯಾ, ಸುಷಮಾ ವಮರ್ಾ. 

ಟಿ-20 ತಂಡ: ಹರ್ಮನ್ ಪ್ರೀತ್ ಕೌರ್ (ನಾಯಕ), ಸ್ಮೃತಿ ಮಂಧನಾ (ಉಪನಾಯಕಿ), ಜೇಮಿನಿ ರೊಡಿಗಸ್, ಶೋಫಾಲಿ ವಮರ್ಾ, ರಲಿನ್ ದೇವೊಲ್, ದೀಪ್ತಿ ಶಮರ್ಾ, ತನ್ಯಾ ಭಾಟಿಯಾ, ಪೂನಮ್ ಯಾದವ್, ರಾಧಾ ಯಾದವ್, ವೇದಾ ಕೃಷ್ಣಮೂತರ್ಿ, ಅನುಜ ಪಾಟೀಲ್, ಶಿಖಾ ಪಾಂಡೆ, ಪೂಜಾ, ಮಾನಸಿ ಜೋಷಿ, ಅರುಂಧತಿ ರೆಡ್ಡಿ.