ಚಿಕಾಗೋ, ಅ 14: ಕೀನ್ಯಾದ ಬ್ರಿಗಿಡ್ ಕೊಸ್ಗೆ ಅವರು ಇಲ್ಲಿ ನಡೆದ 2019ರ ಚಿಕಾಗೋ ಮ್ಯಾರಥಾನ್ ಎಲೈಟ್ ಓಟಗಾರರ ಮಹಿಳಾ ವಿಭಾಗದಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಳ್ಳುವ ಮೂಲಕ ವಿಶ್ವ ದಾಖಲೆ ನಿರ್ಮಿಸಿದರು. ಭಾನುವಾರ ನಡೆದಿದ್ದ ಚಿಕಾಗೋ ಮ್ಯಾರಥಾನ್ ಅನ್ನು ಬ್ರಿಗಿಡ್ ಕೊಸ್ಗೆ ಅವರು ಎರಡು ಗಂಟೆ 14 ನಿಮಿಷದಲ್ಲಿ ಪೂರ್ಣಗೊಳಿಸಿದ್ದರು. ಆ ಮೂಲಕ ಕಳೆದ ಲಂಡನ್ ಮ್ಯಾರಥಾನ್ನಲ್ಲಿ 2:15:25 ಅವಧಿಯಲ್ಲಿ ಮುಗಿಸಿದ್ದ ಪೌಲಾ ಯರ್ಾಡ್ಕ್ಲಿಫ್ ಅವರ ದಾಖಲೆಯನ್ನು ಬ್ರಿಗಿಡ್ ಕೊಸ್ಗೆ ಮುರಿದರು. ಅಲ್ಲದೇ, ಲಂಡನ್ ಮ್ಯಾರಥಾನ್ನಲ್ಲಿ 2:18:20 ವೈಯಕ್ತಿಕ ದಾಖಲೆಯನ್ನು ಇನ್ನಷ್ಟು ಉತ್ತಮಪಡಿಸಿಕೊಂಡರು. ಪುರುಷರ ವಿಭಾಗದಲ್ಲಿ ಕೀನ್ಯಾದವರೇ ಆದ ಲಾರೆನ್ಸ್ ಚೆರೊನೊ ಅವರು ಕೂಡ ಇಬ್ಬರು ಯುರೋಪಿಯನ್ ಸ್ಪರ್ಧಿಗಳನ್ನು ಹಿಂದಿಕ್ಕಿ 2:05:45 ಅವಧಿಯಲ್ಲಿ ಪೂರ್ಣಗೊಳಿಸಿ ಚಾಂಪಿಯನ್ ಆದರು. ಫೈನಲ್ ಸುತ್ತಿನಲ್ಲಿ ಡೆಜೆನೆ ಡೆಬೆಲೆ(2:05:46) ಅವರನ್ನು ಹಿಂದಿಕ್ಕಿ ಮೊದಲ ಸ್ಥಾನ ಪಡೆದರು. ಮೂರನೇ ಸ್ಥಾನವನ್ನು ಅಸೆಫಾ ಮೆಂಗ್ಸ್ಟು (2:05:48) ಪಡೆದರು. ಚೆರೆನೊ ಅವರು ಕಳೆದ ಏಪ್ರಿಲ್ನಲ್ಲಿ ಬಾಸ್ಟನ್ ಮ್ಯಾರಥಾನ್ (2:07:57) ಗೆದ್ದಿದ್ದರು. ಇದರೊಂದಿಗೆ ಅವರು ವೃತ್ತಿ ಜೀವನದ ಎಂಟನೇ ಬಾರಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.