ಬೆಂಗಳೂರು 10: ರಾಜಕೀಯ ಕಾರಣಕ್ಕಾಗಿ ಟಿಪ್ಪು ಜಯಂತಿಯನ್ನು ವಿರೋಧಿಸುವ ಬದಲು ಕೇಂದ್ರದಲ್ಲಿ ಅವರದೇ ಪಕ್ಷ ಅಧಿಕಾರದಲ್ಲಿದ್ದು, ಇನ್ನು ಮುಂದೆ ಟಿಪ್ಪು ಜಯಂತಿ ಆಚರಣೆ ಬೇಡ ಎಂದು ಫಮರ್ಾನು ಹೊರಡಿಸಲಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಆಯೋಜಿಸಲಾಗಿದ್ದ ಟಿಪ್ಪು ಜಯಂತಿ ಉದ್ಘಾಟಿಸಿ ಮಾತನಾಡಿದ ಅವರು, ಶಾಂತಿಭಂಗಕ್ಕಾಗಿ ಮತ್ತು ರಾಜಕೀಯ ಕಾರಣಕ್ಕಾಗಿ ವಿರೋಧ ಮಾಡುವುದು ಸರಿಯಲ್ಲ. ನಿಮಗೆ ಟಿಪ್ಪು ಬಗ್ಗೆ ಸ್ಪಷ್ಟ ಮಾಹಿತಿ ಇದ್ದರೆ ಕೇಂದ್ರ ಸಕರ್ಾರಕ್ಕೆ ಅದನ್ನು ಮನವರಿಕೆ ಮಾಡಿಕೊಟ್ಟು ಇನ್ನು ಮುಂದೆ ಟಿಪ್ಪು ಜಯಂತಿ ಆಚರಿಸಬಾರದು ಎಂದು ಫಮರ್ಾನು ಹೊರಡಿಸಿ ನಾವು ಸುಮ್ಮನಾಗುತ್ತೇವೆ. ನಿಮ್ಮದೆ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿದೆ ಎಂದರು.
ಈ ಹಿಂದೆ ಯಡಿಯೂರಪ್ಪನವರು, ಅಶೋಕ್, ಜಗದೀಶ್ ಶೆಟ್ಟರ್ ಸೇರಿದಂತೆ ಬಿಜೆಪಿಯ ನಾಯಕರು ಟಿಪ್ಪು ಸುಲ್ತಾನ್ ಬಗ್ಗೆ ಮಾತನಾಡಿರುವುದು ನನ್ನ ಬಳಿ ಇದೆ. ಬೇಕಿದ್ದರೆ ಅದನ್ನು ಕಳುಹಿಸಿಕೊಡುತ್ತೇನೆ. ನಿಮ್ಮ ಮಾತುಗಳನ್ನೆಲ್ಲ ವಾಪಸ್ ಪಡೆದುಕೊಳ್ಳಿ ಆಮೇಲೇ ಜಯಂತಿಯನ್ನು ವಿರೋಧ ಮಾಡಿ ಎಂದರು.
ಟಿಪ್ಪು ಸುಲ್ತಾನ್ ದೇಶ ಕಂಡ ಅಪ್ರತಿಮ ದೇಶ ಭಕ್ತ. ರಾಷ್ಟ್ರಪತಿ ರಾಮನಾಥ್ ಕೋವಿಂದ್, ವಿಧಾನಮಂಡಲದ 60ನೇ ವಷರ್ಾಚರಣೆ ವೇಳೆ ಜಂಟಿ ಅಧಿವೇಶನ ಉದ್ದೇಶಿಸಿ 20 ನಿಮಿಷ ಭಾಷಣ ಮಾಡಿದ್ದರು. ಅದರಲ್ಲಿ 4 ನಿಮಿಷ ಟಿಪ್ಪು ಕುರಿತು ಹೊಗಳಿದ್ದಾರೆ. ದೇಶದ ಮೊದಲ ಸ್ವಾತಂತ್ರ ಹೋರಾಟದಲ್ಲಿ ಟಿಪ್ಪು ಸುಲ್ತಾನ್ ಮತ್ತು ಜಾನ್ಸಿ ರಾಣಿ ಲಕ್ಷ್ಮಿಬಾಯಿ ಅವರನ್ನು ಉಲ್ಲೇಖಿಸಲಾಗಿದೆ. ಅದು ಇತಿಹಾಸ. ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳದೆ ಮಾತನಾಡಬೇಡಿ. ನಮ್ಮಲ್ಲಿ ಐಕ್ಯತೆ, ಏಕತೆಗೆ ಹೆಚ್ಚು ಒತ್ತು ಕೊಟ್ಟಿದ್ದೇವೆ. ಟಿಪ್ಪು ಜಯಂತಿಯಿಂದ ರಾಜಕೀಯ ಲಾಭ ಮಾಡಿಕೊಳ್ಳುವ ಉದ್ದೇಶ ನಮಗಿಲ್ಲ. ರಾಜಕೀಯಕ್ಕಾಗಿ ವಿರೋಧ ಮಾಡುವುದನ್ನು ಬಿಡಿ ಎಂದು ಬಿಜೆಪಿಗೆ ತಿರುಗೇಟು ನೀಡಿದರು.
ಯಾವುದೇ ಧರ್ಮ, ಪೂಜೆಯಾದರೂ ಅದರ ಮೂಲ ಉದ್ದೇಶವೊಂದೆ ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ ಸಮಾಜ ಒಡೆಯಬಾರದು. ಜಗತ್ತಿನ ಯಾವುದೇ ಭಾಗದಲ್ಲಿರುವ ಮನುಷ್ಯರಾದರೂ ಅವರ ರಕ್ತದ ಬಣ್ಣದ ಒಂದೇ. ಕಣ್ಣೀರಿನ, ಬೆವರಿನ ರುಚಿ ಒಂದೇ. ನಮ್ಮ ಮಕ್ಕಳಿಗೆ ಇತಿಹಾಸದ ಬಗ್ಗೆ ತಪ್ಪು ಸಂದೇಶ ಕೊಡಬಾರದು ಎಂದು ಹೇಳಿದರು.
ಸಚಿವೆ ಜಯಮಾಲ ಮಾತನಾಡಿ, ರಾಜ್ಯ ಸಕರ್ಾರ ಜಯಂತಿ ಆಚರಣೆ ಮೂಲಕ ಟಿಪ್ಪುವನ್ನು ಉದ್ದಾರ ಮಾಡುತ್ತಿಲ್ಲ. ಇತಿಹಾಸವನ್ನು ಮುಂದಿನ ಪೀಳಿಗೆಗೆ ಸರಿಯಾಗಿ ತಲುಪಿಸುವ ಕೆಲಸ ಮಾಡುತ್ತಿದೆ ಎಂದರು.
ಟಿಪ್ಪು ಸುಲ್ತಾನ್ ಅವರ ಸ್ವಾತಂತ್ರ್ಯ ಹೋರಾಟ ಮತ್ತು ಅವರ ಆಡಳಿತಾ ಸುಧಾರಣಾ ಕ್ರಮಗಳ ಬಗ್ಗೆ ವಿವರಣೆ ನೀಡಿದರು.
ಮೈಸೂರು ವಿವಿಯ ಫ್ರೊ.ಡಾ.ಕೆ.ಸದಾಶಿವ ಅವರು ಟಿಪ್ಪು ಸುಲ್ತಾನ್ ಅವರ ಕುರಿತು ಸಮಗ್ರ ವಿವರಣೆ ನೀಡಿದರು. ಈ ವೇಳೆ ಟಿಪ್ಪು ಸುಲ್ತಾನ್ರನ್ನು ಏಕವಚನದಲ್ಲಿ ಕರೆಯದಂತೆ ಕೆಲವರು ಅವರಿಗೆ ತಾಕೀತು ಮಾಡಿದ ಘಟನೆ ನಡೆಯಿತು.
ಸಚಿವ ಜಮೀರ್ ಅಹಮದ್ ಖಾನ್, ಮಾಜಿ ಸಚಿವ ರೋಷನ್ ಬೇಗ್ ಮಾತನಾಡಿದರು.
ಅಮೀರ್-ಇ-ಷರಿಯತ್ ಹಜರತ್ ಮೌಲಾನ ಜಗೀರ್ ಅಹಮ್ಮದ್ ಖಾನ್ ಸಾನಿಧ್ಯ ವಹಿಸಿದ್ದರು. ಶಾಸಕ ಎನ್.ಎ.ಹ್ಯಾರೀಸ್ ಸೇರಿದಂತೆ ಅನೇಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.