ಲೋಕದರ್ಶನ ವರದಿ
ತಾಳಿಕೋಟೆ, 10: ಬೃಟಿಷರ್ ವತಾಸು ಸಮ್ರಾಜ್ಯಶಾಹಿ ಆಡಳಿತದ ವಿಸ್ತರಣೆಗೆ ತಡೆಯೊಡ್ಡಿದಂತಹ ಏಕೈಕ ಭಾರತೀಯ ಅರಸ ಟಿಪ್ಪು ಸುಲ್ತಾನ ಅವರು ಆಗಿದ್ದರೆಂದು ಅಬ್ದುಲ್ಗನಿ ಮಕಾಂದಾರ ಅವರು ಹೇಳಿದರು.
ಪಟ್ಟಣದ ಟಿಪ್ಪು ಸರ್ಕಲ್ದಲ್ಲಿ ಟಿಪ್ಪು ಜಯಂತಿ ಆಚರಣೆ ಅಂಗವಾಗಿ ಏರ್ಪಡಿಸಲಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಅವರು ಟಿಪ್ಪು ಆಡಳಿತ ಕಾಲದಲ್ಲಿ ಕೃಷಿ ಕ್ಷೇತ್ರದಲ್ಲಿ ಗಣನೀಯವಾದಂತಹ ಪ್ರಗತಿಯನ್ನು ಮಾಡಿದ ವಿಶ್ವದಲ್ಲಿಯೇ ಪ್ರಥಮವಾಗಿ ಕ್ಷೀಪಣಿ ತಂತ್ರಜ್ಞಾನವನ್ನು ಪರಿಚಯ ಮಾಡಿಕೊಟ್ಟಂತಹ ವ್ಯಕ್ತಿ ಟಿಪ್ಪು ಆಗಿದ್ದಾರೆ ಟಿಪ್ಪು ಅಪ್ಪಟ್ಟ ದೇಶ ಪ್ರೇಮಿ ಆಗಿದ್ದ ಅವನು ಸಮಗ್ರ ರಾಷ್ಟ್ರೀಯತೆಯನ್ನು ಬೆಳೆಸಿಕೊಂಡಿದ್ದ ಇಂದು ಅವನನ್ನು ಮತಾಂದ ಎಂದು ಹೇಳುತ್ತಿರುವದು ಕೆಲವು ಬ್ರೀಟಿಷ ಇತಿಹಾಸ ಕಾರರು ದುರುದ್ದೇಶದಿಂದ ಹಿಂದೂ ಮುಸ್ಲಿಂರ ಮಧ್ಯದಲ್ಲಿ ವೈರತ್ವವನ್ನು ಬೆಳೆಸಿ ತಮ್ಮ ಆಡಳಿತವನ್ನು ಬದ್ರಗೊಳಿಸಿಕೊಳ್ಳುವದ್ದಕ್ಕಾಗಿ ಮಾಡಿದಂತಹ ಪ್ರಯತ್ನವಾಗಿದೆ ಟಿಪ್ಪುವಿನ ಆಡಳಿತದಲ್ಲಿ ಉನ್ನತ ಸ್ಥಾನದಲ್ಲಿ ನಾವು ಹಿಂದೂಗಳು ಇರುವದನ್ನು ಕಾಣುತ್ತೇವೆ ಅವನ ಪ್ರಧಾನ ಮಂತ್ರಿ ಪೂರ್ಣಯ್ಯನಾಗಿದ್ದರೆ ಕಂದಾಯ ಸಚಿವ ಕೃಷ್ಣರಾವ್ ಅವರು ಆಗಿದ್ದರು ಅವನ 17 ಜನ ಸೇನಾಧಿಕಾರಿಗಳಲ್ಲಿ 9 ಜನ ಸೇನಾಧಿಕಾರಿಗಳು ಹಿಂದೂಗಳಾಗಿದ್ದರು ಟಿಪ್ಪು ಸುಲ್ತಾನ್ ಶೃಂಗೇರಿ ಶಾರದಾ ಪೀಠವನ್ನು ಪೂನರೂಜೀವನ ಗೊಳಿಸಿದನು ಸುಮಾರು 156 ದೇವಾಲಯಗಳಿಗೆ ಕುಂಬಳಿ ಕೊಡುಗೆಗಳನ್ನು ಕೊಟ್ಟನು ಅವನು ಎಲ್ಲ ಧಮರ್ಿಯ ಜನರನ್ನು ಏಕ ದೃಷ್ಠಿಯಿಂದ ನೋಡುತ್ತಿದ್ದನು ಇಂದು ಟಿಪ್ಪುವಿನ ಕುರಿತು ನಡೆಯುತ್ತಿರುವ ಪರ ಮತ್ತು ವಿರೋಧ ವಾದಗಳನ್ನು ನಾನು ವಾಸ್ತವಿಕಕತೆಯ ಆದಾರದಲ್ಲಿ ತಿಳಿದುಕೊಳ್ಳುವಂತಹದ್ದು ಅಗತ್ಯವಿದೆ ಎಂದರು.
ಟಿಪ್ಪು ಸುಲ್ತಾನ್ ಸರ್ಕಲ್ದಲ್ಲಿ ದ್ವಜಾರೋಹಣವನ್ನು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಎಸ್.ಬಿ.ಕಟ್ಟಿಮನಿ ಅವರು ನೆರವೇರಿಸಿದರು.
ಈ ಸಮಯದಲ್ಲಿ ಪುರಸಭಾ ಅಧ್ಯಕ್ಷೆ ಶ್ರೀಮತಿ ಅಕ್ಕಮಹಾದೇವಿ ಕಟ್ಟಿಮನಿ, ಈದ್ಗಾ ಕಮಿಟಿ ಅಧ್ಯಕ್ಷ ಕೆ.ಎಂ.ಡೋಣಿ, ಪ್ರಭುಗೌಡ ಮದರಕಲ್ಲ, ಮಂಜೂರಲಿ ಬೇಪಾರಿ, ನಿರಂಜನಶಾ ಮಕಾಂದಾರ, ಮೈಹಿಬೂಬ ಚೋರಗಸ್ತಿ, ಸದಾಂ ಜಮಾಜಕಟ್ಟಿ, ನಾಗು ಕಟ್ಟಿಮನಿ, ಮಲ್ಲಿಕಾಜರ್ುನ ಪಟ್ಟಣಶೆಟ್ಟಿ, ನಾಗರಾಜ ಮೋಟಗಿ, ನಿಸಾರ ಬೇಪಾರಿ, ಫಯಾಜ ಉತ್ನಾಳ, ಸಿಕಂದರ ಡೋಣಿ, ಇತರರು ಇದ್ದರು.