ವಿಜಯಪುರ ಮೇ.19: ಕೋವಿಡ್-19 ಮುನ್ನೆಚ್ಚರಿಕೆಯಾಗಿ ನಗರದ ಕಂಟೇನ್ಮೆಂಟ್ ವಲಯದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿಂದು ಮಾದ್ಯಮ ಪ್ರತಿನಿಧಿಗಳಿಗೆ ಈ ವಿಷಯ ತಿಳಿಸಿದ ಅವರು ನಗರದ ಕಂಟೇನ್ಮೆಂಟ್ ವಲಯದಲ್ಲಿನ 60 ವರ್ಷ ಮೇಲ್ಪಟ್ಟ ಪ್ರತಿಯೊಬ್ಬರ ಗಂಟಲು ದ್ರವ ಮಾದರಿಯನ್ನು ಇಂದಿನಿಂದ ವೈದ್ಯಕೀಯ ಪರೀಕ್ಷಗೆ ಕಳಿಸುವುದರ ಜೊತೆಗೆ ಸಾರಿ ಮತ್ತು ಐಎಲ್ಐಗಳಂತಹ ಪ್ರಕರಣಗಳಲ್ಲಿಯೂ ವ್ಯಕ್ತಿಗಳ ಗಂಟಲು ದ್ರವ ಮಾದರಿ ಪರೀಕ್ಷೆಗೆ ರವಾನಿಸಲಾಗುತ್ತಿದ್ದು, ಪಾಸಿಟಿವ್ ಬಂದಲ್ಲಿ ಆಸ್ಪತ್ರೆ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ಮಹಾರಾಷ್ಟ್ರ ರಾಜ್ಯದಿಂದ ಸುಮಾರು 15 ಸಾವಿರ ಜನರು ಜಿಲ್ಲೆಗೆ ಆಗಮಿಸಿದ್ದು, ಪ್ರತಿದಿನ ಜಿಲ್ಲೆಯಲ್ಲಿ ಕ್ವಾರಂಟೈನ್ ಕೇಂದ್ರಗಳಲ್ಲಿರುವವರ 1 ಸಾವಿರದಿಂದ 1500 ವರೆಗೆ ಗಂಟಲು ದ್ರವ ಮಾದರಿ ಸಂಗ್ರಹಿಸಲಾಗುತ್ತಿದ್ದು, ಸಕರ್ಾರದ ನಿದರ್ೇಶನದಂತೆ ಸೂಕ್ತ ಕ್ರಮ ಜರುಗಿಸಲಾಗುತ್ತಿದೆ ಎಂದು ಅವರು ಹೇಳಿದರು.
ಕಂಟೇನ್ಮೇಂಟ್ ವಲಯದಿಂದ 65 ವರ್ಷ ವಯೋಮಾನದ ವೃದ್ಧನಿಗೆ ಕೋವಿಡ್-19 ಪಾಸಿಟಿವ್ ಇಂದು ದೃಡಪಟ್ಟಿದ್ದು ರೋಗಿ ಸಂಖ್ಯೆ 1291 ಜಿಲ್ಲಾಸ್ಪತ್ರೆಗೆ ಸಾಗಿಸುವ ಮಧ್ಯೆ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಲೀವರ್ ಕಾಯಿಲೆ, ಹೈಪರ್ಟೆನ್ಷನ್ ಸೇರಿದಂತೆ ಇನ್ನಿತರ ತೀವ್ರತರ ಕಾಯಿಲೆಗಳಿಂದ ಬಳಲುತಿದ್ದ ಈ ವ್ಯಕ್ತಿಯ ಗಂಟಲು ದ್ರವ ಮಾದರಿಯನ್ನು ವೈದ್ಯಕೀಯ ಪರೀಕ್ಷೆಗೆ ರವಾನಿಸಲಾಗಿತ್ತು. ನಂತರ ಪಾಸಿಟಿವ್ ಎಂದು ದೃಢಪಟ್ಟಿದೆ. ಸಾರಿ ಮತ್ತು ಐಎಲ್ಐಗಳಂತಹಅ ಯಾವುದೇ ಲಕ್ಷಣ ಇದ್ದಿದಿಲ್ಲ. ನಿನ್ನೆ ಕಂಟೇನ್ಮೆಂಟ್ ವಲಯದಲ್ಲಿ ಅವರ ಮನೆಯಲ್ಲಿ ಆ ವ್ಯಕ್ತಿಯ ಉಷ್ಣಾಂಶ ಮತ್ತು ಆಕ್ಸಿಮೀಟರ್ ತಪಾಸಣೆ ವೇಳೆಗೆ ಸಹಜ ಸ್ಥಿತಿ ಇರುವ ಬಗ್ಗೆ ತಿಳಿದು ಬಂದಿತ್ತು, ನಂತರ ತೀವ್ರ ಎದೆ ನೋವಿನಿಂದ ಈ ವ್ಯಕ್ತಿಯು ಖಾಸಗಿ ಆಸ್ಪತ್ರಯೊಂದರಲ್ಲಿ ದಾಖಲಾಗಿದ್ದರು. ಇಸಿಜಿ ಮತ್ತು ಎಕ್ಸರೇ ತಪಾಸಣೆ ಮಾಡಿಸಿಕೊಂಡು ನಿಮೋನಿಯಾ ಇದ್ದಿದ್ದರಿಂದ ಜಿಲ್ಲಾಸ್ಪತ್ರೆಗೆ ಹೋಗಲು ತಿಳಿಸಲಾಗಿತ್ತು. ಅದರನ್ವಯ ಈ ಆಸ್ಪತ್ರೆಗೆ ಸಾಗಿಸುವ ಮಧ್ಯ ದಾರಿಯಲ್ಲಿ ಈ ವ್ಯಕ್ತಿ ಮೃತಪಟ್ಟಿರುವುದಾಗಿ ಜಿಲ್ಲಾಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಜಿಲ್ಲೆಯಲ್ಲಿ ವಿದೇಶ ಸೇರಿದಂತೆ ಇತರ ಪ್ರದೇಶಗಳಿಂದ ಒಟ್ಟು 2803 ಜನರು ಆಗಮಿಸಿದ ಬಗ್ಗೆ ವರದಿಯಾಗಿದೆ. 1705 ಜನರು 28 ದಿನಗಳ ಐಸೊಲೇಷನ್ ಅವಧಿ ಪೂರ್ಣಗೊಳಿಸಿದ್ದಾರೆ. 1057 ಜನರು 1 ರಿಂದ 28 ದಿನಗಳ ರಿಪೋಟರ್ಿಂಗ್ ಅವಧಿಯಲ್ಲಿದ್ದಾರೆ. ಈವರೆಗೆ 3284 ಗಂಟಲು ದ್ರವ ಮಾದರಿ ಪರೀಕ್ಷೆಗೆ ಕಳುಹಿಸಲಾಗಿದ್ದು ಅದರಲ್ಲಿ 2678 ಗಂಟಲು ದ್ರವ ಮಾದರಿ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಇನ್ನೂ 546 ಜನರ ವರದಿ ಬರಬೇಕಾಗಿದೆ.
ಅದರಂತೆ ಈವರೆಗೆ 60 ಕೋವಿಡ್-19 ಪಾಸಿಟಿವ್ ಪ್ರಕರಣಗಳು ದೃಡಪಟ್ಟಿದ್ದು, ಇದರಲ್ಲಿ 4 ಜನರು ಮೃತ ಪಟ್ಟಿದ್ದು, 37 ಜನರು ಆಸ್ಪತ್ರೆಯಿಂದ ಗುಣಮುಖರಾಗಿ ಬಿಡುಗಡೆ ಹೊಂದಿದ್ದಾರೆ. ಆಸ್ಪತ್ರೆಯಲ್ಲಿ ಸಧ್ಯಕ್ಕೆ 20 ಸಕ್ರೀಯ ರೋಗಿಗಳು ಇದ್ದಾರೆ ಎಂದು ಜಿಲ್ಲಾಧಿಕಾರಿ ವೈ.ಎಸ್ ಪಾಟೀಲ ಅವರು ತಿಳಿಸಿದ್ದಾರೆ. ಈ ಸಂದರ್ಭದಲ್ಲಿ ,ಜಿಲ್ಲಾ ಪಂಚಾಯತ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋವಿಂದ ರೆಡ್ಡಿ ಅವರು ಇದ್ದರು.
ಮಾತೃಶ್ರೀ ಯೋಜನೆಯನ್ನು ಕೈಬಿಟ್ಟಿರುವ ರಾಜ್ಯ ಸಕರ್ಾರದ ಕ್ರಮವನ್ನು ವಿರೋಧಿಸಿ ಮನವಿ
ವಿಜಯಪುರ: ಮಾತೃಶ್ರೀ ಯೋಜನೆಯನ್ನು ಕೈಬಿಟ್ಟಿರುವ ರಾಜ್ಯ ಸಕರ್ಾರದ ಕ್ರಮವನ್ನು ವಿರೋಧಿಸಿ ಎಐಎಮ್ಎಸ್ಎಸ್ ಮಹಿಳಾ ಸಂಘಟನೆಯು ನಿಯೋಗದ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಯವರಿಗೆ ಮನವಿ ಸಲ್ಲಿಸಲಾಯಿತು.
ಕೋವಿಡ್-19 ಹಿನ್ನಲೆಯಲ್ಲಿ ಆಥರ್ಿಕ ಸಂಕಷ್ಟದ ನೆಪವೊಡ್ಡಿ ರಾಜ್ಯ ಸಕರ್ಾರ ಹೆರಿಗೆ ಸಂದರ್ಭದಲ್ಲಿ ಬಡ ಮಹಿಳೆಯರಿಗೆ ಅನುಕೂಲವಾಗಲೆಂದು 2018ರಲ್ಲಿ ರಾಜ್ಯ ಸಕರ್ಾರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಡಿಯಲ್ಲಿ ಆರಂಭಿಸಿದ್ದ 'ಮಾತೃಶ್ರೀ' ಯೊಜನೆಯನ್ನು 2020-21 ನೇ ಸಾಲಿನಲ್ಲಿ ರದ್ದುಪಡಿಸಿದೆ. ಈ ಯೋಜನೆಯಡಿ 6000 ರೂ ಸಹಾಯಧನವನ್ನು ಒಟ್ಟು ಎರಡು ಕಂತುಗಳಲ್ಲಿ ಅಂದರೆ ಹೆರಿಗೆ ಪೂರ್ವದಲ್ಲಿ ತಲಾ ರೂ.3000 ಮತ್ತು ಹೆರಿಗೆ ನಂತರತಲಾ ರೂ.3000 ನೀಡಲಾಗುತ್ತಿತ್ತು. ಕೇಂದ್ರ ಸಕರ್ಾರದ ಮಾತೃವಂದನಾ ಯೋಜನೆಯಡಿ 5000 ರೂ ಬಾಣಂತಿ, ಗಭರ್ಿಣಿ ಮಹಿಳೆಯರಿಗೆ ಬರುತ್ತಿದೆ ಹಾಗೂ ಮಾತೃಪೂರ್ಣ ಯೋಜನೆಯಡಿ ಪೌಷ್ಟಿಕತೆ ಒತ್ತು ನೀಡಲಾಗುತ್ತಿದೆ ಎಂದು ಹೇಳುತ್ತಾ ಮಾತೃಶ್ರೀ ಯೋಜನೆಗೆ ಸಹಾಯಧನ ವ್ಯಯಿಸಲು ರಾಜ್ಯ ಸಕರ್ಾರ ನಿರಾಕರಿಸಿದೆ.
ಈ ಯೋಜನೆಗಳಿಂದ ಸಂಕಷ್ಟದಲಿ ಞ್ಲರುವ ಬಡ ಮಹಿಳೆಯರಿಗೆ ಸಿಗುತ್ತಿರುವ ಅನುದಾನಅವರಿಗೆ ಹೆರಿಗೆ ಪೂರ್ವದಲ್ಲಿ ಮತ್ತು ಹೆರಿಗೆ ನಂತರದಲ್ಲಿ ತಗಲುವ ಖಚರ್ು-ವೆಚ್ಚಗಳಿಗೆ ಹೋಲಿಸಿದರೆ ಏನೂ ಅಲ್ಲ. ಬಡತನರೇಖೆಗಿಂತ ಕೆಳಗಿರುವ (ಬಿ.ಪಿ.ಎಲ್ಕುಟುಂಬ) ಮಹಿಳೆಯರಿಗೆ ಮಾತೃಶ್ರೀ ಯೋಜನೆ ಅಷ್ಟರ ಮಟ್ಟಿಗೆ ನೆರವಾಗುತ್ತಿತ್ತು. ಪ್ರಸ್ತುತರಾಜ್ಯದಲ್ಲಿ 4.19 ಲಕ್ಷಗಭರ್ಿಣಿಯರು, 4.02 ಲಕ್ಷ ಬಾಣಂತಿಯರಿದ್ದು, ಒಟ್ಟಾರೆ 8.22 ಲಕ್ಷ ಫಲಾನುಭವಿಗಳಿಗೆ ಈ ಯೋಜನೆ ತಲುಪುತ್ತಿತ್ತು. ಆದರೆ ರಾಜ್ಯ ಸಕರ್ಾರ ಆಥರ್ಿಕ ಸಂಕಷ್ಟದ ಹೆಸರಿನಲ್ಲಿ ಈ ಯೋಜನೆಗೆ ಕತ್ತರಿ ಹಾಕಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮುಖ್ಯಉದ್ದೇಶ ಅಪೌಷ್ಟಿಕತೆಯನ್ನು ತಡೆಗಟ್ಟಿ ಮಹಿಳೆಯರ ಮತ್ತು ಮಕ್ಕಳ ಆರೋಗ್ಯದ ಹಿತಕಾಪಾಡುವುದು. ನಮ್ಮದೇಶದಲ್ಲಿ ಶೇಕಡ 83 ರಷ್ಟು ಹೆಣ್ಣುಮಕ್ಕಳು ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಪ್ರತಿ ಇಬ್ಬರು ಮಹಿಳೆಯರಲ್ಲಿ ಒಬ್ಬ ಮಹಿಳೆ ರಕ್ತಹೀನತೆಯಿಂದ ಬಳಲುತ್ತಿದ್ದಾಳೆ.
ದಕ್ಷಿಣ ಭಾರತದಲ್ಲೇ ಕನರ್ಾಟಕವು ಅಪೌಷ್ಟಿಕತೆಯಲ್ಲಿ ಮುಂದಿದೆ. ಹೀಗಿರುವಾಗ ಇನ್ನೂ ಉತ್ತಮ ಕ್ರಮಗಳನ್ನು ಕೈಗೊಳ್ಳುವ ಬದಲಾಗಿ, ಇರುವಒಂದು ಸಣ್ಣ ಜನಕಲ್ಯಾಣದ ಯೋಜನೆಯನ್ನು ಸಕರ್ಾರರದ್ದುಪಡಿಸಲು ಆದೇಶಿಸಿರುವುದು ನಿಜಕ್ಕೂ ವಿಷಾದನಿಯ ಸಂಗತಿ.
ಸಕರ್ಾರದಇಂತಹ ಧೋರಣೆಗಳು ಮಹಿಳಾಪರ ಕಾಳಜಿಯನ್ನು ಪ್ರತಿನಿಧಿಸುವುದಿಲ್ಲ. ಬಲವಾದ ವಿರೋಧಗಳ ನಂತರರಾಜ್ಯ ಸಕರ್ಾರ ನೊಂದ ಮಹಿಳೆಯರಿಗೆ ಭರವಸೆ, ಆಶ್ರಯತಾಣವಾಗಿರುವ 'ಸಾಂತ್ವನ ಕೇಂದ್ರಗಳನ್ನು ಮುಚ್ಚುವ ಪ್ರಸ್ತಾಪವನ್ನುಕೈಬಿಟ್ಟಿದೆ. ಇತರೆ ದುಂದುವೆಚ್ಚಗಳಿಗೆ ಕಡಿವಾಣ ಹಾಕುವ ಬದಲಿಗೆ, ಇಂತಹಜನಪರಯೋಜನೆಯನ್ನುರದ್ದುಪಡಿಸಲು ಮುಂದಾಗಿರುವರಾಜ್ಯ ಸಕರ್ಾರದ ನಡೆಯನ್ನು ನಮ್ಮಎ.ಐ.ಎಮ್.ಎಸ್.ಎಸ್ ಮಹಿಳಾ ಸಂಘಟನೆಯುತೀವ್ರವಾಗಿಖಂಡಿಸುತ್ತದೆ. ಸಕರ್ಾರತನ್ನಆದೇಶವನ್ನು ಹಿಂಪಡೆಯಬೇಕೆಂದು ಆಗ್ರಹಿಸಿ ನಮ್ಮ ಮಹಿಳಾ ಸಂಘಟನೆಯಿಂದ ಮುಖ್ಯಮಂತ್ರಿಯವರಿಗೆ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಾಯಿತು.