ವಿಜಯಪುರ 10: ಯುಗ ದರ್ಶಿನಿ ಎಜ್ಯುಕೇಶನ್ ಫೌಂಡೇಶನ್ ಚಾರಿಟೇಲ್ ಟ್ರಸ್ಟ್ ವಿಜಯಪುರ ಇವರ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ವಾರಣಾಸಿ ಇವರ ಹಾಗೂ ಸಂಯುಕ್ತ ಆಶ್ರಯದಲ್ಲಿ ನಡೆದ ಅಖಿಲ ಭಾರತ ಮಹಿಳಾ ಸಾಹಿತ್ಯ ಸಮ್ಮೇಳನ ಹಾಗೂ ಅಂತಾರಾಷ್ಟ್ರೀಯ ವಿಚಾರ ಸಂಕೀರಣ ಸಮ್ಮೇಳನದಲ್ಲಿ ಯುಗ ದರ್ಶಿನಿ ರತ್ನ ರಾಷ್ಟ್ರೀಯ ಪ್ರಶಸ್ತಿಗಳನ್ನು ಪ್ರದಾನ ಮಾಡಿ ಗೌರವಿಸಲಾಯಿತು. ಇದರ ಪ್ರಯಕ್ತವಾಗಿ ಸಾಯಿ ಪಾರ್ಕ್ ವಾರ್ಡ್ ನಂ. 21ರಲ್ಲಿ ವಿಜಯಪುರ ನಗರದಲ್ಲಿ ಚನ್ನಬಸಯ್ಯ ಹಿರೇಮಠ ಅವರು ಸನ್ಮಾನಿಸಿ ಗೌರವಿಸಿದರು.
ಸಿದ್ದು ಇಜೇರಿ (ಸಮಾಜ ಸೇವೆ), ಲಕ್ಷ್ಮೀ ಕಿಣಗಿ (ಶಿಕ್ಷಣ), ಸುಧಾ ರಬಿನಾಳ (ಪಂಚಾಯತ ಅಭಿವೃದ್ಧಿ ಅಧಿಕಾರಿ) ಪ್ರಶಸ್ತಿ ವಿಜೇತರಿಗೆ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ವೀರಶೈವ ಲಿಂಗಾಯತ ಟ್ರಸ್ಟ್ ಉಪಾಧ್ಯಕ್ಷರಾದ ಚನ್ನಬಸಯ್ಯ ಹಿರೇಮಠ, ಬನ್ನಿಮಹಾಕಾಳ ದೇವಸ್ಥಾನದ ಉಪಾಧ್ಯಕ್ಷರಾದ ಈಶ್ವರ ಹೂಗಾರ, ಬಸರಾಜ ಚರಮಗೋಳ, ವಿಮಲಾ ಹಜೇರಿ, ಕವಿತಾ ಬಸವರಾಜ ಚರಮಗೋಳ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.