ಜಾನಪದ ಸಂಶೋಧನೆಗೆ ನಾಂದಿ ಹಾಡಿದ ಖ್ಯಾತ ಜಾನಪದ ತಜ್ಞ ಡಾ. ಗದ್ದಗಿಮಠ: ಭಾಸ್ಕರ

Famous folk expert Dr. Gaddagimata: Bhaskara

ಧಾರವಾಡ 10:  ಡಾ. ಬಿ.ಎಸ್‌. ಗದ್ದಗಿಮಠ ಜಾನಪದ ಸಂಶೋಧನೆಗೆ ನಾಂದಿ ಹಾಡಿದ ಖ್ಯಾತ ಜಾನಪದ ತಜ್ಞರು. ಜಾನಪದ ಸಾಹಿತ್ಯ ಶ್ರೀಮಂತಗೊಳಿಸಿದ ಕೀರ್ತಿ ಇವರದಾಗಿದೆ ಎಂದು ಜಾನಪದ ವಿಶ್ವವಿದ್ಯಾಲಯದ ಕುಲಪತಿ ಡಾ. ಟಿ.ಎಂ. ಭಾಸ್ಕರ ಹೇಳಿದರು. 

ಅವರುಕರ್ನಾಟಕ ವಿದ್ಯಾವರ್ಧಕ ಸಂಘದಲ್ಲಿಡಾ. ಬಿ.ಎಸ್‌. ಗದ್ದಗಿಮಠದತ್ತಿಉದ್ಘಾಟನೆ ಮತ್ತುಡಾ.ಬಿ.ಎಸ್‌. ಗದ್ದಗಿಮಠ, ಅನಸೂಯಾದೇವಿ ಗದ್ದಗಿಮಠ ಪ್ರತಿಷ್ಠಾನ ಉದ್ಘಾಟನೆ ಹಾಗೂ ‘ಬಿ.ಎಸ್‌. ಗದ್ದಗಿಮಠಗ್ರಂಥ ಬಿಡುಗಡೆ’ ಸಮಾರಂಭದಲ್ಲಿಜಾನಪದಕ್ಷೇತ್ರಕ್ಕೆಡಾ. ಬಿ.ಎಸ್‌. ಗದ್ದಗಿಮಠರಕೊಡುಗೆಕುರಿತುಉಪನ್ಯಾಸ ನೀಡಿ ಮಾತನಾಡುತ್ತಿದ್ದರು. 

ಮುಂದುವರೆದು ಮಾತನಾಡಿದ ಅವರು, ಡಾ.ಬಿ.ಎಸ್‌. ಗದ್ದಗಿಮಠ ಅವರ ತಂದೆ ಓರ್ವ ಪ್ರಸಿದ್ಧ ಜಾನಪದ ಹಾಡುಗಾರರಾಗಿದ್ದರು. ಮನೆಯ ಜಾನಪದ ಸಂಸ್ಕೃತಿಯ ಪ್ರಭಾವ ಡಾ.ಬಿ.ಎಸ್‌. ಗದ್ದಗಿಮಠರ ಮೇಲೆ ಪ್ರಭಾವ ಬೀರಿತು. ಏನೂ ಸೌಲಭ್ಯಗಳಿಲ್ಲದ ಆ ಕಾಲಘಟ್ಟದಲ್ಲಿ ಡಾ.ಬಿ.ಎಸ್‌. ಗದ್ದಗಿಮಠ ಉತ್ತರ ಕರ್ನಾಟಕದ ಹಳ್ಳಿ, ಹಳ್ಳಿಗಳಿಗೆ ಎತ್ತಿನ ಬಂಡೆಯಲ್ಲಿ ಸಂಚರಿಸಿ ಲಕ್ಷಾಂತರ ಜಾನಪದ ಹಾಡುಗಳನ್ನು ಸಂಗ್ರಹಿಸಿ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಪ್ರಬಂಧ ಮಂಡಿಸಿ ಪಿಎಚ್‌ಡಿ ಪದವಿ ಪಡೆದರು. ಜಾನಪದ ಕ್ಷೇತ್ರದಲ್ಲಿ ಕ.ವಿ.ವಿ.ಯಿಂದ ಪಿಎಚ್‌ಡಿ ಪಡೆದವರಲ್ಲಿ ಇವರೇ ಮೊದಲಿಗರು. 

ಡಾ.ಬಿ.ಎಸ್‌.ಗದ್ದಗಿಮಠ ಮನೆತನ ಅನುಕಂಪ, ಮೌಲ್ಯ ಹಾಗೂ ಮಾನವೀಯತೆಯ ತವನಿಧಿಯಾದ ಕುಟುಂಬ. ಅವರದು ಮೇರು ವ್ಯಕ್ತಿತ್ವ. ಜೀವನದಲ್ಲಿ ಎದುರಾದ ಕಷ್ಟಗಳನ್ನು ಎದುರಿಸಿ ಸಾಧನೆಯ ರೂವಾರಿಗಳಾದರು. ಅವರದು ಜಾನಪದ ಕ್ಷೇತ್ರವನ್ನು ಶ್ರೀಮಂತಗೊಳಿಸಿದ ದಿವ್ಯ ವ್ಯಕ್ತಿತ್ವ. ಜಾನಪದಕ್ಕೆ ವಿಶ್ವವಿದ್ಯಾಲಯದ ಮಾನ್ಯತೆ ತಂದುಕೊಟ್ಟ ಧೀಮಂತರು ಎಂದು ಹೇಳಿದರು. 

ಅತಿಥಿಗಳಾದ ಮಾಜಿ ಸಂಸದ ಪ್ರೊ.ಐ.ಜಿ. ಸನದಿ ಮಾತನಾಡಿ, ಮನುಷ್ಯ ಎಷ್ಟು ವರ್ಷ ಬದುಕಿದಎನ್ನುವುದು ಮುಖ್ಯವಲ್ಲ.ಬದುಕಿದರೀತಿ, ನೀತಿ ಮುಖ್ಯ.ಡಾ. ಬಿ.ಎಸ್‌. ಗದ್ದಗಿಮಠರು ಬಾಳಿದ್ದು 43 ವರ್ಷ ಮಾತ್ರ. ಆದರೆ ಅವರ ಸಾಧನೆ ಅಪಾರ. ಅವರದು ಸಾರ್ಥಕದ ಬದುಕು ಎಂದು ಹೇಳಿದರು. 

ಅಧ್ಯಕ್ಷತೆ ವಹಿಸಿದ್ದ ಕೃಷಿ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ, ಎಸ್‌.ಆರ್‌.ಕುಲಕರ್ಣಿ ಮಾತನಾಡಿ, ಡಾ.ಬಿ.ಎಸ್‌. ಗದ್ದಗಿಮಠರಕುಟುಂಬ ಹಾಗೂ ನನ್ನದು ವೃತ್ತಪರ ಸಂಬಂಧ. ಜಾನಪದ ಕ್ಷೇತ್ರದಲ್ಲಿ ಅವರಷ್ಟು ಸಾಧನೆ ಮಾಡಿದವರು ಅಪರೂಪ ಎಂದರು. 

ವೇದಿಕೆಯಲ್ಲಿ ದತ್ತಿದಾನಿ ಡಾ.ನಿಜಗುಣ ದೇವಗದ್ದಗಿಮಠ ಇದ್ದರು. ವೇದಿಕೆಯ ಗಣ್ಯರು ಡಾ.ಬಿ.ಎಸ್‌.ಗದ್ದಗಿಮಠ ಪುಸ್ತಕ ಲೋಕಾರೆ​‍್ಣ ಮಾಡಿದರು. ಪುಲಕೇಶಿ ಗದ್ದಗಿಮಠ ನಮನ ಗೀತೆ ಹಾಡಿದರು. ಪ್ರಮೀಳಾ ಹಟ್ಟಿಹೊಳಿ ‘ನನ್ನವ್ವ’ ಎಂಬ ಸ್ವರಚಿತ ಕವನ ವಾಚಿಸಿದರು. ದತ್ತಿದಾನಿಗಳ ಪರವಾಗಿ ಪುಲಕೇಶಿ ಗದ್ದಗಿಮಠ ಮಾತನಾಡಿದರು. 

ಪ್ರಾರಂಭದಲ್ಲಿ ಮೇಘಾ ಹುಕ್ಕೇರಿ ಹಾಗೂ ಸಂಗಡಿಗರು, ಡಾ.ರಾಮೂ ಮೂಲಗಿ ಪ್ರಾರ್ಥಿಸಿದರು.ವೀರಣ್ಣಒಡ್ಡೀನ ಸ್ವಾಗತಿಸಿದರು.ಡಾ. ಉಷಾ ಗದ್ದಗಿಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಜಿನದತ್ತ ಹಡಗಲಿ ಶುಭ ಸಂದೇಶ ಓದಿದರು. ಶಂಕರ ಕುಂಬಿ ನಿರೂಪಿಸಿದರು. ಎಂ.ಎಂ.ಚಿಕ್ಕಮಠ ವಂದಿಸಿದರು. 

ಕಾರ್ಯಕ್ರಮದಲ್ಲಿ ಬಾಬಣ್ಣಗದ್ದಗಿಮಠ, ಡಾ.ಎಸ್ ಎಂ ಶಿವಪ್ರಸಾದ, ಕಿರಣ ಶಿಂಧೆ, ಶಿವಕುಮಾರ ಗೌಡರ, ಪ್ರಭು ನರಕೆ, ಶಿವಕುಮಾರಸ್ವಾಮಿ,  ಮಂಗಲ್‌ಕಬ್ಬುರ, ಎನ್ ಜಿ ಮಹಾದೇವಪ್ಪ, ಶಿವಕುಮಾರ ಚಿಕ್ಕಮಠ, ಶಾರದಾಚಿಗಟೇರಿ, ಚಿನ್ಮಯಿ ಪಾಟೀಲ, ಹರ್ಷದೇಸಾಯಿ, ಆರ್ ಎಂ ಷಡಕ್ಷರಯಾ, ಪ್ರಭುಕುಂದರಗಿ, ಮಹಾಂತೇಶ ನರೇಗಲ್ಲ, ರತ್ನಾಯಲಿಗಾರ, ಗಿರಿಜಾ ಶೆಟ್ಟರ, ಗೀತಾ ಕುಂಬಿ, ಜಯಶ್ರೀ ಪಾಟೀಲ, ವಿಜಯಲಕ್ಷ್ಮಿಕಲ್ಯಾಣಶೆಟ್ಟರ ಸೇರಿದಂತೆಗದ್ದಗಿಮಠ ಪರಿವಾರದವರು ಅಭಿಮಾನಿಗಳು ಮತ್ತಿತರರು ಉಪಸ್ಥಿತರಿದ್ದರು.