ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮ

ಬ್ಯಾಡಗಿ೦೯: ಉತ್ತಮ ಪತ್ರಿಕೋದ್ಯಮ ಸತ್ಯವನ್ನು ಹುಡುಕುವ ಮೂಲಕ ನೈಜ ಹಾಗೂ ವಾಸ್ತವ ಸ್ಥಿತಿಯನ್ನು ನೀಡಿ ಸಮಾಜದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ  ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. 

 ಸ್ಥಳೀಯ ಪುರಸಭೆಯ ಸಭಾಭವನದಲ್ಲಿ ಪತ್ರಕರ್ತರಿಗೆ ಸನ್ಮಾನ ಹಾಗೂ ಅಂಗವಿಕಲರಿಗೆ ತ್ರಿಚಕ್ರ ವಾಹನಗಳ ವಿತರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು ಕಳೆದ ಒಂದೂವರೆ ತಿಂಗಳಿನಿಂದ ದೇಶದಾದ್ಯಂತ ಹರಡಿರುವ ಕೊರೊನಾ ವೈರಸ್ ಸೋಂಕಿನಿಂದ ಸಾವಿರಾರು ಜನರು ತತ್ತರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಎತ್ತಿ ಹಿಡಿಯುವುದಕ್ಕಾಗಿ ಮತ್ತು ದೇಶದ ಹಿತಕ್ಕಾಗಿ ಪ್ರತಿದಿನ ಧೈರ್ಯವಾಗಿ ಹೋರಾಡುತ್ತ ನೈಜ ಸುದ್ದಿಗಳನ್ನು ಜನರಿಗೆ ಮುಟ್ಟಿಸುವ ಜೊತೆಗೆ ಜಾಗೃತಿಯನ್ನು ಮೂಡಿಸುತ್ತಿರುವ ಎಲ್ಲ  ಪತ್ರಕರ್ತರೂ ಅಭಿನಂದನಾರ್ಹರು ಎಂದು ತಿಳಿಸಿದರಲ್ಲದೇ ಎಲ್ಲ ಪತ್ರಕರ್ತರಿಗೆ ತಮ್ಮ ಕೃತಜ್ಞತೆಗಳನ್ನು ಸಲ್ಲಿಸಿದರು. 

ಇದೇ ಸಂದರ್ಭದಲ್ಲಿ ಎಲ್ಲ ಪತ್ರಕರ್ತರನ್ನು ಗೌರವಿಸಿ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಹಾವೇರಿ ಉಪವಿಭಾಗಾಧಿಕಾರಿ ಡಾ. ದಿಲಿಷ್ ಸೆಸಿ, ತಹಶೀಲ್ದಾರ ಶರಣಮ್ಮ ಕಾರಿ, ಸಿಪಿಐ ಭಾಗ್ಯವತಿ ಬಂತಿ, ಪುರಸಭಾ ಮುಖ್ಯಾಧಿಕಾರಿ ವಿ. ಎಂ. ಪೂಜಾರ, ತಾಲೂಕಾ ಬಿಜೆಪಿ ಅಧ್ಯಕ್ಷ ಸುರೇಶ ಆಸಾದಿ, ಎಪಿಎಂಸಿ ಮಾಜಿ ಅಧ್ಯಕ್ಷ  ರವೀಂದ್ರ ಪಟ್ಟಣಶೆಟ್ಟಿ,  ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ಫಕ್ಕೀರಮ್ಮ ಛಲವಾದಿ, ರಾಮಣ್ಣ ಕೋಡಿಹಳ್ಳಿ, ಚಂದ್ರಣ್ಣ ಶೆಟ್ಟರ, ವಿನಯ ಹಿರೇಮಠ, ಸಂಜೀವ ಮಡಿವಾಳರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.