ಆಶಾ ಕಾರ್ಯಕರ್ತೆಯರಿಗೆ ಮೂರು ಸಾವಿರ ರೂ ಪ್ರೋತ್ಸಾಹ ಧನ: ಶಾಸಕ ಬಳ್ಳಾರಿ'

ಬ್ಯಾಡಗಿ17: ಕೋವಿಡ್ -19, ನಿಯಂತ್ರಣದಲ್ಲಿ ಪ್ರಮುಖ ಪಾತ್ರ ವಹಿಸುತ್ತಿರುವ ಆಶಾ ಕಾರ್ಯಕತರ್ೆಯರಿಗೆ ರಾಜ್ಯ ಸಕರ್ಾರ ಮೂರು ಸಾವಿರ ರೂಗಳ ಪ್ರೋತ್ಸಾಹ ಧನವನ್ನು ಘೋಷಿಸಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಹೇಳಿದರು. 

   ತಾಲೂಕಿನ ಮೋಟೆಬೆನ್ನೂರು ಗ್ರಾಮದಲ್ಲಿನ ಶಾಸಕರ ಜನಸಂಪರ್ಕ ಕಾಯರ್ಾಲಯದಲ್ಲಿ ಬ್ಯಾಡಗಿ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಶಾ ಕಾರ್ಯಕತರ್ೆಯರು ತಮ್ಮ ಕುಂದು ಕೊರತೆ ಬಗ್ಗೆ ಮತ್ತು ಪ್ಯಾಕೇಜ್ ಪೂರೈಸುವ ಕುರಿತು ಸಲ್ಲಿಸಿದ ಮನವಿಯನ್ನು ಸ್ವೀಕರಿಸಿ ಮಾತನಾಡಿದ ಅವರು ಈಗಾಗಲೇ ರಾಜ್ಯ ಸಕರ್ಾರ ಮೂರನೇ ಪ್ಯಾಕೇಜ್ ಘೋಷಣೆ ಮಾಡಿದ್ದು, ಅದರಲ್ಲಿ ಆಶಾ ಕಾರ್ಯಕತರ್ೆಯರಿಗೆ 12.5 ಕೋಟಿ ರೂಗಳ  ಅನುದಾನ ನೀಡಲಾಗಿದೆ. ರಾಜ್ಯದಾದ್ಯಂತ 40.250 ಆಶಾ ಕಾರ್ಯಕತರ್ೆಯರು ಕಾರ್ಯ ನಿರ್ವಹಿಸುತ್ತಿದ್ದು, ಪ್ರತಿಯೊಬ್ಬ ಆಶಾ ಕಾರ್ಯಕತರ್ೆಯರಿಗೂ ಮೂರು ಸಾವಿರ ರೂನಂತೆ ಪ್ರೋತ್ಸಾಹ ಧನವನ್ನು ಘೋಷಿಸಿದೆ ಎಂದು ತಿಳಿಸಿದರು. 

ಅಲ್ಲದೇ ಆಶಾ ಕಾರ್ಯಕತರ್ೆಯರ ಇನ್ನಿತರ ಕುಂದು ಕೊರತೆ ಮತ್ತು ಬೇಡಿಕೆಗಳ ಈಡೇರಿಕೆಗಾಗಿ ಮುಖ್ಯಮಂತ್ರಿಗಳ ಹಾಗೂ ಸಂಬಂಧಿಸಿದ ಸಚಿವರ  ಗಮನಕ್ಕೆ ತರುವುದಾಗಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ತಾಲೂಕಾ ಆಶಾ ಕಾರ್ಯಕತರ್ೆಯರ ಸಂಘದ ಅಧ್ಯಕ್ಷೆ ಮಂಜುಳಾ ಮಾಸೂರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.