ಲಕ್ನೋ ನ್ಯಾಯಾಲಯ ಆವರಣದಲ್ಲಿ ಮೂರು ಸಜೀವ ಬಾಂಬ್ ಪತ್ತೆ

ಲಕ್ನೋ , ಫೆ 13 :    ಇಲ್ಲಿನ ವಜೀರ್ ಗಂಜ್ ನ್ಯಾಯಾಲಯದ ಆವರಣದಲ್ಲಿ  ಬಾಂಬ್ ಸ್ಪೋಟಗೊಂಡು  ಹಲವರಿಗೆ ಗಾಯಗಳಾಗಿದ್ದರೆ  ನ್ಯಾಯಾಲಯದ ಸಮುಚ್ಚಯದಲ್ಲೇ  ಮೂರು ಸಜೀವ ಬಾಂಬ್ ಗಳು ಸಹ ಪತ್ತೆಯಾಗಿ ಜನರಲ್ಲಿ ತಲ್ಲಣ ಮೂಡಿಸಿದೆ.

ಈ  ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬನನ್ನು ಬಂಧಿಸಲಾಗಿದೆ,  ಘಟನೆಯಲ್ಲಿ ಒಬ್ಬನಿಗೆ  ಗಂಭೀರ ಹಾಗೂ  ಮತ್ತಿಬ್ಬರಿಗೆ ಸಣ್ಣಪುಟ್ಟಗಾಯಗಳಾಗಿವೆ .

ಸ್ಥಳೀಯರ ಪ್ರಕಾರ, ಎರಡು ವಕೀಲರ ಗುಂಪಿನ ನಡುವಿನ ಗಲಾಟೆಯೇ ಈ ಸ್ಪೋಟಕ್ಕೆ ಕಾರಣ ಎನ್ನಲಾಗಿದೆ . ನ್ಯಾಯಾಲಯದಲ್ಲಿದ್ದ ಒಬ್ಬ  ವಕೀಲರನ್ನು ಗುರಿಯಾಗಿಟ್ಟು ಕೊಂಡು ಈ ಸ್ಪೋಟ ಮಾಡಲಾಗಿದೆ ಎನ್ನಲಾಗಿದೆ. ಲಕ್ನೋ ಬಾರ್ ಸಂಘದ  ಜಂಟಿ ಕಾರ್ಯದರ್ಶಿ ಸಂಜೀವ್ ಲೋಧಿ ಅವರನ್ನು ಗುರಿ ಮಾಡಿ, ಇದನ್ನು ಮಾಡಲಾಗಿದೆ ಎಂದೂ  ಹೇಳಲಾಗಿದೆ.

ವಜೀರ್ ಗಂಜ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಬಾಂಬ್ ಇಟ್ಟಿದ್ದ ಎನ್ನಲಾದ   ಆರೋಪಿ ಜೀತು ಯಾದವ್ ಎಂಬವನನ್ನು ಬಂಧಿಸಲಾಗಿದೆ.