ನವದೆಹಲಿ, ಅ 15: ಟೆಲಿಕಾಂ ವಲಯದಲ್ಲಿ ಅತ್ಯಂತ ಪ್ರಮುಖ ಎಂದು ಪರಿಗಣಿಸಲಾಗಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ದೆಹಲಿಯಲ್ಲಿ ಸೋಮವಾರದಿಂದ ಪ್ರಾರಂಭಗೊಂಡಿದೆ.
5 ಜಿ ಸೇವೆಗಳು ಪ್ರಮುಖ ಆಕರ್ಷಣೆಯಾಗಿರುವ ಈ ಸಮಾವೇಶದಲ್ಲಿ 500ಕ್ಕೂ ಹೆಚ್ಚು ಟೆಲಿಕಾಂ ಕಂಪನಿಗಳು ಮತ್ತು 250 ಸ್ಟಾಟರ್್ಅಪ್ಗಳು ಪಾಲ್ಗೊಂಡು ತಮ್ಮ ನೂತನ ತಂತ್ರಜ್ಞಾನ, ಅವಿಷ್ಕಾರಗಳನ್ನು ಪ್ರದರ್ಶಿಸಿವೆ.
ಮೂರು ದಿನಗಳ ಕಾಲ ನಡೆಯಲಿರುವ ಸಮಾವೇಶದಲ್ಲಿ ದಕ್ಷಿಣ ಏಷ್ಯಾದಲ್ಲಿ ಅತ್ಯಂತ ಪ್ರಮುಖ ಕಾರ್ಯಕ್ರಮ ಎಂದು ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಅಭಿಪ್ರಾಯ ಪಟ್ಟರು.
ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ್ ಪ್ರಸಾದ್ ಮಾತನಾಡಿ, ತರಂಗಾಂತರ ಹರಾಜಿನಲ್ಲಿ ಸರ್ಕಾರ ಸುಧಾರಣೆಗಳನ್ನು ತರಲಿದೆ. ಹೆಚ್ಚುವರಿ ತರಂಗಾಂತರ ಹರಾಜು ಈ ಆರ್ಥಿಕ ವರ್ಷ ನಡೆಯಲಿದೆ ಹೇಳಿದ್ದಾರೆ.
ಭಾರತದಲ್ಲಿ ಪ್ರತಿವರ್ಷ ಅಪಾರ ಪ್ರಮಾಣದ ಡಿಜಿಟಲ್ ಮಾಹಿತಿ ಸೃಷ್ಟಿಸಲಾಗುತ್ತದೆ. ಭವಿಷ್ಯದಲ್ಲಿ ಡೇಟಾ ವಿಶ್ಲೇಷಣೆಯಲ್ಲಿ ಭಾರತ ಪ್ರಮುಖ ಪಾತ್ರ ವಹಿಸಲಿದೆ ಎಂದರು.
ವೊಡಾಫೋನ್ ಐಡಿಯಾ ಅಧ್ಯಕ್ಷ ಕುಮಾರ್ ಮಂಗಲಂ ಬಿರ್ಲಾ ಹಾಗೂ ಭಾರ್ತಿ ಏರ್ಟೆಲ್ ಉಪಾಧ್ಯಕ್ಷರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಆದರೆ, ಪ್ರಮುಖ ಟೆಲಿಕಾಂ ಕಂಪನಿಗಳ ಮುಖ್ಯಸ್ಥರಾದ ಮುಖೇಶ್ ಅಂಬಾನಿ ಮತ್ತು ಸುನಿಲ್ಮಿತ್ತಲ್ ಗೈರುಹಾಜರಾಗಿದ್ದರು.