ಚಂಡೀಗರ್, ಮೇ 26,ಕೊರೊನಾ ಸೋಂಕಿಗೆ ಮೂರು ದಿನದ ಹಸುಳೆ ಬಲಿಯಾಗಿದೆ. ಇದರಿಂದ ಕೇಂದ್ರಾಡಳಿತ ಪ್ರದೇಶದಲ್ಲಿ ಕರೋನ ಸೋಂಕಿಗೆ ಬಲಿಯಾದವರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.ಮೂರು ದಿನಗಳ ಹಿಂದೆಯಷ್ಟೆ ಜನಿಸಿದ ಮಗು ಸಾವಿನ ನಂತರದಲ್ಲಿ ಮಗುವಿನ ರಕ್ತ ಮತ್ತು ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಗುವಿನಲ್ಲಿ ಕರೋನ ಸೋಂಕು ಇರುವುದು ದೃಢಪಟ್ಟಿದೆ.ಇದೀಗ ತಾಯಿಯ ರಕ್ತ ಹಾಗೂ ಗಂಟಲು ದ್ರವ್ಯದ ಮಾದರಿಯನ್ನು ಸಂಗ್ರಹಿಸಿರುವ ವೈದ್ಯರು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಿದ್ದಾರೆ. ತಾಯಿಗೂ ಕೊರೊನಾ ವೈರಸ್ ಸೋಂಕು ತಗಲಿದೆಯೇ ಎನ್ನುವುದು ವರದಿ ಬಂದ ನಂತರವಷ್ಟೇ ಖಚಿತವಾಗಲಿದೆ.ಕೇಂದ್ರಾಡಳಿತ ಪ್ರದೇಶವಾಗಿರುವ ಚಂಡೀಗರ್ ನಲ್ಲಿ ಕೊರೊನಾ ಸೋಂಕಿಗೆ ಇದುವರೆಗೂ ನಾಲ್ವರು ಬಲಿಯಾಗಿದ್ದಾರೆ. 266 ಜನರಿಗೆ ಸೊಂಕು ತಗಲಿರುವುದು ದೃಡಪಟ್ಟಿದೆ.