ಚಿತ್ರಕಲೆ ಬದುಕನ್ನು ಕಟ್ಟಿ ಕೊಡುತ್ತದೆ: ಉದಪುಡಿ

Painting binds life: Udapudi

ರನ್ನ ಬೆಳಗಲಿ 19: ಇಂದಿನ ತಾಂತ್ರಿಕ ಶಿಕ್ಷಣ ವ್ಯವಸ್ಥೆಯಲ್ಲಿ ಬದುಕನ್ನು ಕಟ್ಟಿಕೊಡುವ ಕೆಲಸ ಚಿತ್ರಕಲೆ ಮಾಡುತ್ತದೆ. ಎಲ್ಲಾ ವಿಷಯಗಳ ಪೂರಕ ಸಂಗಮವೇ ಚಿತ್ರಕಲೆಯಾಗಿದೆ ಮಕ್ಕಳ ಸರ್ವಾಂಗೀನ ಅಭಿವೃದ್ಧಿ ಚಟುವಟಿಕೆಯ ಮೂಲಕವೇ ಆಗಬೇಕು. ಕಲೆ ಇಲ್ಲದೆ ಬದುಕು ಇಲ್ಲ ಎಂದು ಶಾಲಾ ಪ್ರಭಾರಿ ಮುಖ್ಯ ಗುರು ಮಾತೆಯರಾದ ಎಸ್ ಎಸ್ ಉದಪುಡಿ ಮಾತನಾಡಿದರು. 

ಸ್ಥಳೀಯ ಶ್ರೀ ಸಿದ್ಧಾರೂಢ ಸರಕಾರಿ ಪ್ರೌಢಶಾಲೆ ರನ್ನ ಬೆಳಗಲಿ ಪಟ್ಟಣದ ಶ್ರೀ ಶಂಭುಲಿಂಗ ಸಿದ್ಧಾರೂಢ ಆಶ್ರಮದಲ್ಲಿ ಆಯೋಜನೆ ಮಾಡಿದ ಒಂದು ದಿನದ ವಿಶೇಷ ಗ್ಲಾಸ್ ಪೇಂಟಿಂಗ್ ತರಬೇತಿ ಕಾರ್ಯಾಗಾರದ ಕುರಿತು ವಿದ್ಯಾರ್ಥಿ ದೆಸೆಯಲ್ಲಿ ಬದುಕಣ್ಣ ರೂಪಿಸಿಕೊಂಡು ಶಿಕ್ಷಣದ ಜೊತೆಗೆ ಸ್ವಾವಲಂಬಿಯಾಗಿ ಬದುಕಬೇಕು. ನಮ್ಮ ಶಾಲೆಯಲ್ಲಿ ಗ್ಲಾಸ್ ಪೇಂಟಿನಂತಹ ಹತ್ತು ಹಲವಾರು ತರಬೇತಿಗಳನ್ನು ನೀಡುತ್ತಾ ಬಂದಿದೆ. ಅದೇ ರೀತಿ ಇಂತಹ ಕಲೆಗಳನ್ನು ಕರಗತ ಮಾಡಿಕೊಳ್ಳುವುದರಿಂದ ಚಿಂತನೆಗೆ ಮುಕ್ತ ಅವಕಾಶ. ವೀಕ್ಷಣಾ ಶಕ್ತಿ.. ಬೌದ್ಧಿಕ ಬೆಳವಣಿಗೆ ಸೃಜನಾತ್ಮಕ ಅಭಿವ್ಯಕ್ತಿ. ಹಸ್ತ ಕೌಶಲ್ಯ. ಸೌಂದರ್ಯ ಪ್ರಜ್ಞೆ. ಕ್ರಿಯಾಶೀಲತೆ ಗುಣಗಳು ಆಲೋಚನಾ ವಿವೇಚನಾ ಸಾಮರ್ಥ್ಯ ಏಕಾಗ್ರತೆ. ಚಿಂತನ ಶೀಲ ಪ್ರವೃತ್ತಿ. ಆಸ್ವಾಧನೆಯ ಅಭಿರುಚಿಯ ವ್ಯಕ್ತಿತ್ವ. ಆತ್ಮಸ್ಥೈರ್ಯ ಪ್ರಜ್ಞೆ ಹೆಚ್ಚುತ್ತದೆ ಒಟ್ಟಾರೆ ಅದ್ಭುತ ಜಗತ್ತನ್ನು ಸೃಷ್ಟಿಸುವ ಶಕ್ತಿಯನ್ನು ಚಿತ್ರಕಲೆ ನೀಡುತ್ತದೆ ಎಂದು ಹೇಳಿದರು.. ಗ್ಲಾಸ್ ಪೇಂಟಿಂಗ್ ತರಬೇತಿಯ ಸಂಪನ್ಮೂಲ ಶಿಕ್ಷಕರಾದ ಶ್ರೀ ಎಸ್ ಎಸ್ ಶಿಂಧೆ ಚಿತ್ರಕಲಾ ಶಿಕ್ಷಕರು ಬಸವೇಶ್ವರ ಪ್ರೌಢಶಾಲೆ ಬರಗಿ ಆಗಮಿಸಿದ್ದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೀರೀಶ್ ಸಂಕ್ರಟ್ಟಿ ಶಾಲಾ ಉಸ್ತುವಾರಿ ಅಧ್ಯಕ್ಷರು ವಹಿಸಿದ್ದರು.  

ಎಸ್ ಬಿ ರೆಡ್ಡೇರಟ್ಟಿ. ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಿ ಆಯ್ಕೆಯಾದ ಸ್ಪರ್ದಾಳುಗಳಿಗೆ, ಮಹಾಲಿಂಗಪುರದ ಸ್ವಾಭಿಮಾನಿ ಸ್ನೇಹಲೋಕ ಬಳಗದ ಅಧ್ಯಕ್ಷರಾದ ಎಸ್ ಬಿ ಮಟಗಾರ್ ಗಣಿತ ಶಿಕ್ಷಕರು ಹಾಗೂ ಶೂನ್ಯ ಧ್ಯಾನದ ಶಿಕ್ಷಕರಾದ ಶ್ರೀಶೈಲ್ ಕೆರೂರ ಬಹುಮಾನ ಪ್ರಾಯೋಜಕತ್ವ ವಹಿಸಿದ್ದರು. ಅಮಿತ್ ತಳಗೇರಿ. ಡಾಕ್ಟರ್ ಗೀತಾ ಬಡಿಗೇರ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.