ಮೂರು ಕೋಟಿ ರೂ. ಕಾರು ಖರೀದಿಸಿದ ರಣವೀರ್

 ಮುಂಬೈ, ಅ.4:   ಬಾಲಿವುಡ್ ನ ಸ್ಟಾರ್ ನಟ ರಣವೀರ್ ಸಿಂಗ್ ಅವರು ಮೂರು ಕೋಟಿ ರೂಪಾಯಿ ಮೌಲ್ಯದ ಹೊಸ ಲ್ಯಾಂಬೋಗರ್ಿನ್ ಕಾರನ್ನು ಖರೀದಿ ಮಾಡಿದ್ದಾರೆ.  ರಣವೀರ್ ಸಿಂಗ್ ಅವರು ಕೆಂಪು ಬಣ್ಣದ ಲಂಬೋಗರ್ಿನಿ ಉರುಸ್ ಖರೀದಿಸಿದ್ದಾರೆ. ಮುಂಬೈನ ಬೀದಿಗಳಲ್ಲಿ ಕಾರನ್ನು ಚಲಾಯಿಸಿ ಅವರು ಆನಂದಿಸಿದ್ದಾರೆ. ಈ ಸಂದರ್ಭದಲ್ಲಿ ರಣವೀರ್ ಸಿಂಗ್ ಅವರು ಕೆಂಪು ಬಣ್ಣದ ಮ್ಯಾಚಿಂಗ್ ಕ್ಯಾಪ್ ಧರಿಸಿದ್ದರು. ಈ ಕಾರಿನ ಬೆಲೆ ಭಾರತದಲ್ಲಿ ಸುಮಾರು ಮೂರು ಕೋಟಿ ರೂಪಾಯಿಗಳೆಂದು ಹೇಳಲಾಗಿದ್ದು, ಇದನ್ನು ವಿಶ್ವದ ಮೊದಲ ಸೂಪರ್ ಸ್ಪೋರ್ಟ್ ಯುಟಿಲಿಟಿ ವಾಹನ ಎಂದು ಕರೆಯಲಾಗುತ್ತಿದೆ.  ಬ್ರಿಟನ್ ನಲ್ಲಿ 83 ಚಿತ್ರದ ಚಿತ್ರಿಕರಣ ಮುಗಿಸಿ ರಣವೀರ್ ಮತ್ತು ದೀಪಿಕಾ ತವರಿಗೆ ಬಂದಿದ್ದಾರೆ. ಈ ಚಿತ್ರದಲ್ಲಿ ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಪಾತ್ರದಲ್ಲಿ ರಣವೀರ್ ನಟಿಸಿದ್ದಾರೆ. ದೀಪಿಕಾ ರೋಮಿ ದೇವ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇದಕ್ಕೂ ಮುನ್ನ ರಣವೀರ್ ಹಾಗೂ ದೀಪಿಕಾ ಸಂಜಯ್ ಲೀಲಾ ಭನ್ಸಾಲಿ ಅವರ ರಾಮ್-ಲೀಲಾ, ಬಾಜಿರಾವ್ ಮಸ್ತಾನಿ ಮತ್ತು ಪದ್ಮಾವತ್ ಚಿತ್ರಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು.