ನವದೆಹಲಿ, 21 ಭಾರತಕ್ಕೆ ಈವರೆಗೆ ಮೂರು ರಫೇಲ್ ಯುದ್ಧ ವಿಮಾನಗಳು ಫ್ರಾನ್ಸ್ ನಿಂದ ಪೂರೈಕೆಯಾಗಿವೆ ಎಂದು ಕೇಂದ್ರ ಸಕರ್ಾರ ಲೋಕಸಭೆಗೆ ತಿಳಿಸಿದೆ. ಪ್ರಶ್ನೋತ್ತರ ಅವಧಿಯಲ್ಲಿ ರಕ್ಷಣಾ ಖಾತೆ ರಾಜ್ಯ ಸಚಿವ ಶ್ರೀಪಾದ್ ಯಸ್ಸೋ ನಾಯಕ್, ಸದಸ್ಯರ ಪ್ರಶ್ನೆಗೆ ಉತ್ತರಿಸಿ, ಭಾರತೀಯ ವಾಯುಪಡೆಯ ಸಿಬ್ಬಂದಿ (ಐಎಎಫ್) ಪ್ರಸ್ತುತ ಫ್ರಾನ್ಸ್ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಅಕ್ಟೋಬರ್ 8 ರಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮೊದಲ ರಫೇಲ್ ವಿಮಾನವನ್ನು ಸ್ವೀಕರಿಸಿದ್ದರು. ಫ್ರಾನ್ಸ್ನ ಡಸಾಲ್ಟ್ ಏವಿಯೇಷನ್ ರಫೇಲ್ ಯುದ್ಧ ವಿಮಾನ ತಯಾರಿಸಿದೆ ಎಂದು ವಿವರಿಸಿದರು. ಪ್ರಸ್ತುತ ಭಾರತಕ್ಕೆ ಬಂದಿರುವ 3 ರಫೇಲ್ ವಿಮಾನಗಳಲ್ಲಿ ಕೊನೆಯ ಎರಡು ವಿಮಾನಗಳು ದೇಶಕ್ಕೆ ಯಾವಾಗ ತಲುಪಿದವು ಎಂಬುದನ್ನು ಸಚಿವರು ವಿವರಿಸಲಿಲ್ಲ. 36 ರಫೇಲ್ ಯುದ್ದ ವಿಮಾನಗಳ ಖರೀದಿಗೆ 59 ಸಾವಿರ ಕೋಟಿ ರೂ ಒಪ್ಪಂದಕ್ಕೆ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಕರ್ಾರ 2016 ರಲ್ಲಿ ಸಹಿ ಹಾಕಿದೆ. 4 ನೇ ರಫೆಲ್ ಯುದ್ದ ವಿಮಾನ ಮುಂದಿನ ವರ್ಷ ಮೇ ತಿಂಗಳಲ್ಲಿ ದೇಶಕ್ಕೆ ಬರಲಿದೆ.