ಲಕ್ನೋ, ಜ 13: ಪೊಲೀಸ್ ವ್ಯವಸ್ಥೆಯಲ್ಲಿನ ಬದಲಾವಣೆಯನ್ನು ಪ್ರಶ್ನಿಸಿರುವ ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ, ಮಾಜಿ ಸಿಎಂ ಮಾಯಾವತಿ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂದು ರಾಜಕೀಯ ವ್ಯವಸ್ಥೆಯನ್ನು ದೂಷಿಸಿದ್ದಾರೆ.ಲಕ್ನೋ ಮತ್ತು ನೋಯ್ಡಾದಲ್ಲಿ ಎರಡು ಜಿಲ್ಲೆಗಳಲ್ಲಿ ಪೊಲೀಸ್ ಕಮಿಷನರ್ ವ್ಯವಸ್ಥೆಯನ್ನು ಪರಿಚಯಿಸಿದ ಯೋಗಿ ಆದಿತ್ಯನಾಥ್ ಸರ್ಕಾರದ ಕ್ರಮಕ್ಕೆ ಪ್ರತಿಕ್ರಿಯಿಸಿದ್ದಾರೆ.ಕೆಲವು ಸ್ಥಳಗಳಲ್ಲಿ ಪೊಲೀಸ್ ವ್ಯವಸ್ಥೆ ಬದಲಾಯಿಸುವುದರಿಂದ ಅಪರಾಧಗಳನ್ನು ನಿಯಂತ್ರಿಸಲು ಆಗುವುದಿಲ್ಲ, ನಾವು ಹಿಂದಿನ ರಾಜಕೀಯ ಶಕ್ತಿ, ಕುತಂತ್ರಗಳನ್ನು ಎದುರಿಸಬೇಕಾಗುತ್ತದೆ ಅಪರಾಧಿಗಳ ಕಠಿಣ ಕ್ರಮ ಜರುಗಿಸಬೇಕಿದೆ ರಾಜ್ಯ ಸರ್ಕಾರವು ಇದನ್ನು ಗಮನಿಸಿಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಪಡಿಸಿದರು.
ಇದು 2010 ರಲ್ಲಿ ರಾಜ್ಯದ ಹಿಂದಿನ ಮಾಯಾವತಿ ಆಳ್ವಿಕೆಯಲ್ಲಿ ಪೊಲೀಸ್ ಆಯುಕ್ತರ ವ್ಯವಸ್ಥೆಯನ್ನು ಚರ್ಚಿಸಿದಾಗ ಆದರೆ ಬಲವಾದ ಐಎಎಸ್ ಲಾಬಿ ಇದನ್ನು ವಿರೋಧಿಸಿದ ನಂತರ ಅದನ್ನು ಕೈಬಿಡಲಾಯಿತು, ಏಕೆಂದರೆ ಈ ವ್ಯವಸ್ಥೆಯು ಜಿಲ್ಲೆಯಲ್ಲಿ ತಮ್ಮ ಅಧಿಕಾರವನ್ನು ಮೊಟಕುಗೊಳಿಸಲಿದೆ ಎಂಬ ಭಾವನೆ ಬೆಳೆದಿತ್ತು.
ಈ ನಡುವೆ , ಹೊಸ ವ್ಯವಸ್ಥೆ ಜಾರಿಗೆ ತಂದ ಯುಪಿ ಡಿಜಿಪಿ ಒ ಪಿ ಸಿಂಗ್ ಅವರು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ."ಆಯೋಗದ ವ್ಯವಸ್ಥೆಯ ಕುರಿತ ಐತಿಹಾಸಿಕ ನಿರ್ಧಾರಕ್ಕೆ ಧನ್ಯವಾದಗಳು ಇದರಿಂದ ಹೆಚ್ಚಿನ ಜವಾಬ್ದಾರಿ ಬರುತ್ತದೆ. ಮೆಟ್ರೋಪಾಲಿಟನ್ ಪ್ರದೇಶಗಳಲ್ಲಿನ ಹೊಸ ಸವಾಲುಗಳನ್ನು ಎದುರಿಸಲು ಅಗತ್ಯವಾದ ಉತ್ತಮ ಪೋಲಿಸ್ ವ್ಯಸಸ್ಥೆಗೆ ನಾವು ಬದ್ಧರಾಗಿದ್ದೇವೆ ಎಂದು ಡಿಜಿಪಿ ಸೋಮವಾರ ಟ್ವೀಟ್ ಮಾಡಿದ್ದಾರೆ.