ಶ್ರಮಿಕ್ ರೈಲಿನಲ್ಲಿ ಜಾರ್ಖಂಡ್‌ಗೆ ಹೊರಟ ಸಾವಿರಾರು ಕಾರ್ಮಿಕರು

ಪಣಜಿ, ಜೂನ್ 3,ಸಾವಿರಾರು ವಲಸೆ ಕಾರ್ಮಿಕರನ್ನು ಹೊತ್ತ  ವಿಶೇಷ ಶ್ರಮಿಕ್  ಎಕ್ಸ್‌ಪ್ರೆಸ್ ರೈಲು ಮಾರ್ಗಾವ್ ರೈಲ್ವೆ ನಿಲ್ದಾಣದಿಂದ ಜಾರ್ಖಂಡ್‌ನ ಜಾಸಿಡಿಹ್‌ಗೆ ಹೊರಟಿದೆ.  ದೇಶಾದ್ಯಂತ ಲಾಕ್ ಡೌನ್ ಜಾರಿಯಾದ ಪರಿಣಾಮ ಕಾರ್ಮಿಕರು ಊರಿಗೆ ಹೋಗಲಾರದೆ  ಗೋವಾದಲ್ಲಿ ಸಿಲುಕಿಕೊಂಡಿದ್ದರು. ರೈಲು  ಹತ್ತುವ ಮೊದಲು ಎಲ್ಲ ಕಾರ್ಮಿಕರಿಗೆ  ವೈದ್ಯಕೀಯ ತಪಾಸಣೆ ಮತ್ತು ಇತರ ವಿಧಿವಿಧಾನಗಳನ್ನು ನಡೆಸಲಾಗಿದೆ. ಇಡೀ ಕಾರ್ಯಾಚರಣೆಯನ್ನು ಉತ್ತರ ಮತ್ತು ದಕ್ಷಿಣ ಗೋವಾ  ಜಿಲ್ಲಾ ಮ್ಯಾಜಿಸ್ಟ್ರೇಟ್ ನೇತೃತ್ವದಲ್ಲಿ ನಡೆಸಲಾಗಿದೆ.