ಮುಂಬೈ - ದೆಹಲಿಯಿಂದ ಬೆಂಗಳೂರಿಗೆ ಬಂದ ಸಾವಿರಾರು ಪ್ರಯಾಣಿಕರು

ಬೆಂಗಳೂರು,  ಜೂನ್ 2,  ರಾಜ್ಯಕ್ಕೆ ಇಂದು ಮುಂಬೈ ಮತ್ತು ದೆಹಲಿಯಿಂದ ರೈಲುಗಳು ಆಗಮಿಸಿದ್ದು, ಒಟ್ಟು 1,200 ಪ್ರಯಾಣಿಕರು ಬೆಂಗಳೂರಿನ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣ ರೈಲ್ವೆ ನಿಲ್ದಾಣಕ್ಕೆ ಬಂದಿಳಿದಿದ್ದಾರೆ. ಮುಂಬೈ ರೈಲಿನಲ್ಲಿ ಬಂದವರಿಗೆ ಆರೋಗ್ಯ ತಪಾಸಣೆ ಮಾಡಿದ ಬಳಿಕ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯ ಮಾಡಿದ್ದು, ಆ ಬಳಿಕ ಮನೆಯಲ್ಲಿ ಏಳು ದಿನ ಹೋಮ್ ಕ್ವಾರಂಟೈನ್ ನಲ್ಲಿರಬೇಕು ಎಂದು  ಸೂಚಿಸಲಾಗಿದೆ.  ಗರ್ಭಿಣಿಯರು 10 ವರ್ಷದೊಳಗಿನ ಮಕ್ಕಳು, ವೃದ್ಧರಿಗೆ ಸಾಂಸ್ಥಿಕ ಕ್ವಾರಂಟೈನ್ ನಿಂದ ವಿನಾಯಿತಿ ನೀಡಲಾಗಿದೆ. ಮುಂಬೈನಿಂದ ಬಂದಿರುವ ಉದ್ಯಾನ್ ಎಕ್ಸ್ ಪ್ರೆಸ್ ನಲ್ಲಿ ಸುಮಾರು 1,200 ಪ್ರಯಾಣಿಕರು ಬೆಂಗಳೂರಿನ ರೈಲ್ವೆ ನಿಲ್ದಾಣಕ್ಕೆ ಆಗಮಿಸಿದ್ದು,ಅವರೆಲ್ಲರನ್ನೂ  ಏಳು ದಿನದ ಸಾಂಸ್ಥಿಕ ಕ್ವಾರಂಟೈನ್ ಗೆ ಬೇರೆ ಕಡೆಗೆ ಸ್ಥಳಾಂತರ ಮಾಡಲಾಗಿದೆ.